Home Bibles ಯೋಹಾನ 13:7 · ಕನ್ನಡ ಬೈಬಲ್
ಯೋಹಾನ 13:7 · ಕನ್ನಡ ಬೈಬಲ್

ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಾನು ಮಾಡುವದು ಏನೆಂದು ಈಗ ನಿನಗೆ ತಿಳಿಯುವದಿಲ್ಲ; ಆದರೆ ಇನ್ನು ಮೇಲೆ ನಿನಗೆ ತಿಳಿಯುವದು ಅಂದನು.

Cross references

ಯೆರೆಮಿಯ 32:24

ಈ ಜನರು ಮಾತನಾಡುವದನ್ನು ನೀನು ನೋಡಲಿಲ್ಲವೊ? ಕರ್ತನು ಆದುಕೊಂಡ ಎರಡು ಗೋತ್ರಗಳನ್ನು ಬೇಡವೆಂದಿದ್ದಾನೆಂದು ಹೇಳಿ ನನ್ನ ಜನರನ್ನು ಇನ್ನು ಅವರ ಮುಂದೆ ಜನಾಂಗವಲ್ಲದ ಹಾಗೆ ಅಸಡ್ಡೆ ಮಾಡಿದ್ದಾರೆ.

ದಾನಿಯೇಲ 12:8

ಆದರೆ ಗ್ರಹಿಸಲಿಲ್ಲ; ಆಗ ನಾನು--ಓ ನನ್ನ ಕರ್ತನೇ, ಈ ಸಂಗತಿಗಳ ಅಂತ್ಯವೇನು ಎಂದು ಕೇಳಿದೆನು.

ದಾನಿಯೇಲ 12:12

ಸಾವಿರದ ಮುನ್ನೂರ ಮೂವತ್ತೈದು ದಿನಗಳು ಬರುವ ವರೆಗೆ ಕಾದಿರುವವನೇ ಭಾಗ್ಯವಂತನು.ಆದರೆ ನೀನು ಅಂತ್ಯದ ವರೆಗೂ ಹೋಗು; ಯಾಕಂದರೆ ನೀನು ವಿಶ್ರಮಿಸಿಕೊಳ್ಳುವಿ ಮತ್ತು ದಿನಗಳ ಅಂತ್ಯದಲ್ಲಿ ನಿನ್ನ ಭಾಗದಲ್ಲಿ ನಿಲ್ಲುವಿ (ಎಂದು ಹೇಳಿದನು.)

ಹಬಕ್ಕೂಕ 2:1

ನನ್ನ ಕಾವಲಲ್ಲಿ ನಿಂತು ಗೋಪುರದ ಮೇಲೆ ನೆಲೆಯಾಗಿದ್ದು ಆತನು ನನಗೆ ಏನು ಹೇಳುವನೋ, ನನ್ನ ತರ್ಕದ ವಿಷಯ ಏನು ಉತ್ತರ ಕೊಡಬೇಕೋ ನೋಡುವದಕ್ಕೆ ಕಾದುಕೊಂಡಿರುವೆನು.

ಯೋಹಾನ 12:16

ಇವು ಗಳನ್ನು ಆತನ ಶಿಷ್ಯರು ಮೊದಲು ತಿಳಿದಿರಲಿಲ್ಲ; ಆದರೆ ಯೇಸು ಮಹಿಮೆ ಹೊಂದಿದಾಗ ಇವು ಆತನ ವಿಷಯವಾಗಿ ಬರೆಯಲ್ಪಟ್ಟಿವೆಯೆಂದೂ ಇವುಗಳನ್ನು ಅವರು ಆತನಿಗೆ ಮಾಡಿದರೆಂದೂ ಜ್ಞಾಪಕಮಾಡಿ ಕೊಂಡರು.

ಯೋಹಾನ 13:10

ಯೇಸು ಅವನಿಗೆ--ಸ್ನಾನಮಾಡಿಕೊಂಡವನು ತನ ಪಾದಗಳನ್ನು ಹೊರತು ಮತ್ತೇನೂ ತೊಳೆಯುವದು ಅವಶ್ಯವಿಲ್ಲ; ಯಾಕಂದರೆ ಅವನು ಸಂಪೂರ್ಣವಾಗಿ ಶುದ್ಧನಾಗಿದ್ದಾನೆ. ನೀವು ಶುದ್ಧರಾಗಿದ್ದೀರಿ, ಆದರೆ ಎಲ್ಲರೂ ಅಲ್ಲ ಅಂದನು.

ಯೋಹಾನ 13:36

ಸೀಮೋನ ಪೇತ್ರನು ಆತನಿಗೆ--ಕರ್ತನೇ, ನೀನು ಎಲ್ಲಿಗೆ ಹೋಗುತ್ತೀ? ಅನ್ನಲು ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಾನು ಹೋಗುವಲ್ಲಿಗೆ ನೀನು ಈಗ ಬರಲಾರಿ; ತರುವಾಯ ನೀನು ನನ್ನನ್ನು ಹಿಂಬಾಲಿಸುವಿ ಅಂದನು.

ಯೋಹಾನ 14:26

ತಂದೆಯು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಪರಿಶುದ್ಧಾತ್ಮನೆಂಬ ಆದರಿಕನೇ ಎಲ್ಲವುಗಳನ್ನು ನಿಮಗೆ ಬೋಧಿಸಿ ನಾನು ನಿಮಗೆ ಹೇಳಿದವುಗಳನ್ನೆಲ್ಲಾ ನಿಮ್ಮ ನೆನಪಿಗೆ ತರುವನು.

ಯಾಕೋಬ 5:7

ಸಹೋದರರೇ, ಕರ್ತನು ಬರುವ ತನಕ ದೀರ್ಘ ಶಾಂತಿಯಿಂದಿರ್ರಿ. ವ್ಯವಸಾಯಗಾರನನ್ನು ನೋಡಿರಿ; ಅವನು ಭೂಮಿಯ ಅಮೂಲ್ಯವಾದ ಫಲಕ್ಕಾಗಿ ಕಾದಿದ್ದು ಮುಂಗಾರು ಹಿಂಗಾರು ಮಳೆಗಳು ಬರುವ ತನಕ ದೀರ್ಘಶಾಂತಿಯಿಂದಿರುವನು.

Interlinear

Choose Theme