Home Bibles ಯೋಹಾನ 12:1 · ಕನ್ನಡ ಬೈಬಲ್
ಯೋಹಾನ 12:1 · ಕನ್ನಡ ಬೈಬಲ್

ಇದಾದ ಮೇಲೆ ಪಸ್ಕಕ್ಕೆ ಆರು ದಿನಗಳ ಮುಂಚೆ ಸತ್ತವರೊಳಗಿಂದ ಎಬ್ಬಿಸಿದ ಲಾಜರನು ಇದ್ದ ಬೇಥಾನ್ಯಕ್ಕೆ ಯೇಸು ಬಂದನು.

Cross references

ಮತ್ತಾಯ 21:17

ಆತನು ಅವರನ್ನು ಬಿಟ್ಟು ಪಟ್ಟಣದಿಂದ ಹೊರಟು ಬೇಥಾನ್ಯಕ್ಕೆ ಹೋಗಿ ಅಲ್ಲಿ ಇಳುಕೊಂಡನು.

ಮತ್ತಾಯ 26:6

ಯೇಸು ಬೇಥಾನ್ಯದಲ್ಲಿ ಕುಷ್ಠರೋಗಿಯಾದ ಸೀಮೋನನ ಮನೆಯಲ್ಲಿದ್ದನು.

ಮಾರ್ಕ 11:11

ಯೇಸು ಯೆರೂಸಲೇಮಿಗೆ ಹೋಗಿ ದೇವಾಲ ಯದಲ್ಲಿ ಪ್ರವೇಶಿಸಿದಾಗ ಎಲ್ಲವುಗಳನ್ನು ಸುತ್ತಲೂ ನೋಡಿದನು; ಮತ್ತು ಸಂಜೆಯಾದಾಗ ಆ ಹನ್ನೆರಡು ಮಂದಿಯೊಂದಿಗೆ ಬೇಥಾನ್ಯಕ್ಕೆ ಹೋದನು.

ಮಾರ್ಕ 14:3

ಬೇಥಾನ್ಯದಲ್ಲಿದ್ದ ಕುಷ್ಠರೋಗಿಯಾದ ಸೀಮೋನನ ಮನೆಯಲ್ಲಿ ಆತನು ಊಟಕ್ಕೆ ಕೂತಿದ್ದಾಗ ಒಬ್ಬ ಸ್ತ್ರೀಯು ಅತಿ ಶ್ರೇಷ್ಠವಾದ ಸುಗಂಧ ತೈಲದ ಭರಣಿ ಯನ್ನು ತೆಗೆದುಕೊಂಡು ಬಂದು ಅದನ್ನು ಒಡೆದು ಆತನ ತಲೆಯ ಮೇಲೆ ಹೊಯಿದಳು.

ಲೂಕ 24:50

ಆತನು ಅವರನ್ನು ಬೇಥಾನ್ಯದವರೆಗೆ ನಡಿಸಿ ಕೊಂಡು ಹೋಗಿ ತನ್ನ ಕೈಗಳನ್ನು ಎತ್ತಿ ಅವರನ್ನು ಆಶೀರ್ವದಿಸಿದನು.

ಯೋಹಾನ 11:1

ಮರಿಯಳ ಮತ್ತು ಆಕೆಯ ಸಹೋದರಿ ಯಾದ ಮಾರ್ಥಳ ಊರಾದ ಬೇಥಾನ್ಯ ದಲ್ಲಿ ಲಾಜರನೆಂಬವನೊಬ್ಬನು ಅಸ್ವಸ್ಥನಾಗಿದ್ದನು.

ಯೋಹಾನ 11:44

ಆಗ ಪ್ರೇತ ವಸ್ತ್ರಗಳಿಂದ ಕೈಕಾಲುಗಳನ್ನು ಕಟ್ಟಿದ್ದ ಆ ಸತ್ತವನು ಹೊರಗೆ ಬಂದನು. ಅವನ ಮುಖವು ವಸ್ತ್ರ ದಿಂದ ಸುತ್ತಲ್ಪಟ್ಟಿತ್ತು; ಯೇಸು ಅವರಿಗೆ--ಅವನನ್ನು ಬಿಚ್ಚಿರಿ, ಅವನು ಹೋಗಲಿ ಎಂದು ಹೇಳಿದನು.

ಯೋಹಾನ 11:55

ಆಗ ಯೆಹೂದ್ಯರ ಪಸ್ಕವು ಹತ್ತಿರವಾಗಿತ್ತು; ಅನೇಕರು ತಮ್ಮನ್ನು ಶುದ್ಧಿ ಮಾಡಿಕೊಳ್ಳುವದಕ್ಕೋಸ್ಕರ ಪಸ್ಕಕ್ಕೆ ಮುಂಚೆ ಹಳ್ಳಿಗಳಿಂದ ಯೆರೂಸಲೇಮಿಗೆ ಹೋದರು.

ಯೋಹಾನ 12:20

ಹಬ್ಬದಲ್ಲಿ ಆರಾಧಿಸುವದಕ್ಕೆ ಬಂದವರಲ್ಲಿ ಕೆಲ ವರು ಗ್ರೀಕರಿದ್ದರು.

Interlinear

Choose Theme