ಯೋಹಾನ 11:34 · ಕನ್ನಡ ಬೈಬಲ್
ಅವನನ್ನು ಎಲ್ಲಿ ಇಟ್ಟಿದ್ದೀರಿ ಅಂದನು. ಅವರು ಆತನಿಗೆ--ಕರ್ತನೇ, ಬಂದು ನೋಡು ಅಂದರು.
Cross references
ಮತ್ತಾಯ 28:6
ಆತನು ಇಲ್ಲಿ ಇಲ್ಲ; ಯಾಕಂದರೆ ಆತನು ಹೇಳಿರುವ ಪ್ರಕಾರ ಆತನು ಎದ್ದಿದ್ದಾನೆ; ಕರ್ತನು ಮಲಗಿದ್ದ ಸ್ಥಳವನ್ನು ಬಂದು ನೋಡಿರಿ.
ಮಾರ್ಕ 15:47
ಮಗ್ದಲದ ಮರಿಯಳೂ ಯೋಸೆಯ ತಾಯಿಯಾದ ಮರಿಯಳೂ ಆತನನ್ನು ಇಟ್ಟಿದ್ದ ಸ್ಥಳವನ್ನು ನೋಡಿದರು.
ಮಾರ್ಕ 16:6
ಆದರೆ ಅವನು ಅವರಿಗೆ--ಭಯಪಡಬೇಡಿರಿ, ಶಿಲುಬೆಗೆ ಹಾಕಲ್ಪಟ್ಟ ನಜರೇತಿನ ಯೇಸುವನ್ನು ಹುಡುಕುತ್ತಿದ್ದೀರಿ; ಆತನು ಎದ್ದಿದ್ದಾನೆ; ಇಲ್ಲಿ ಇಲ್ಲ, ಆತನನ್ನು ಇಟ್ಟಿದ್ದ ಸ್ಥಳವನ್ನು ನೋಡಿರಿ;
ಯೋಹಾನ 1:39
ಆತನು ಅವರಿಗೆ--ಬಂದು ನೋಡಿರಿ ಅಂದನು. ಅವರು ಹೋಗಿ ಆತನು ವಾಸಿಸುತ್ತಿದ್ದ ಸ್ಥಳವನ್ನು ನೋಡಿ ಆ ದಿವಸ ಆತನ ಸಂಗಡ ಇದ್ದರು. ಆಗ ಹೆಚ್ಚು ಕಡಿಮೆ ಹತ್ತನೆಯ ತಾಸಾಗಿತ್ತು.
ಯೋಹಾನ 20:2
ಆಗ ಆಕೆಯು ಸೀಮೋನ ಪೇತ್ರನ ಬಳಿಗೂ ಯೇಸು ಪ್ರೀತಿಸಿದ ಆ ಬೇರೆ ಶಿಷ್ಯನ ಬಳಿಗೂ ಓಡಿಬಂದು ಅವರಿಗೆ--ಕರ್ತನನ್ನು ಅವರು ಸಮಾಧಿ ಯೊಳಗಿಂದ ತೆಗೆದುಕೊಂಡು ಹೋಗಿದ್ದಾರೆ; ಅವರು ಆತನನ್ನು ಎಲ್ಲಿ ಇಟ್ಟಿದ್ದಾರೋ ನಮಗೆ ಗೊತ್ತಿಲ್ಲ ಅಂದಳು.