ನಾನೇ ಒಳ್ಳೇ ಕುರುಬನು; ಒಳ್ಳೇ ಕುರುಬನು ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ.
Cross references
ಮೃಗಗಳಿಂದ ಕೊಲ್ಲಲ್ಪಟ್ಟವುಗಳನ್ನು ನಿನ್ನ ಬಳಿಗೆ ತಾರದೆ ಅವುಗಳ ನಷ್ಟವನ್ನು ನಾನೇ ಹೊತ್ತೆನು. ಹಗಲಲ್ಲಿ ಕದ್ದದ್ದನ್ನೂ ರಾತ್ರಿಯಲ್ಲಿ ಕದ್ದದ್ದನ್ನೂ ನನ್ನಿಂದಲೇ ತೆಗೆದುಕೊಂಡಿ.
ದಾವೀದನು ಸೌಲನಿಗೆ--ನಿನ್ನ ಸೇವಕನು ತನ್ನ ತಂದೆಯ ಕುರಿಗಳನ್ನು ಮೇಯಿಸಿಕೊಂಡಿರುವಾಗ ಸಿಂಹವೂ ಕರಡಿಯೂ ಬಂದು ಮಂದೆಯಲ್ಲಿ ಇರುವ ಕುರಿಮರಿಯನ್ನು ಹಿಡಿದವು.
ಆಗ ಕರ್ತನ ದೂತನು ಯೆಬೂಸಿ ಯನಾದ ಅರೌನನು ತುಳಿಸುವ ಕಣದ ಬಳಿಯಲ್ಲಿ ಇದ್ದನು. ದಾವೀದನು ಜನಸಂಹಾರ ದೂತನನ್ನು ನೋಡಿದಾಗ ಅವನು ಕರ್ತನಿಗೆ--ಇಗೋ, ನಾನೇ ಪಾಪಮಾಡಿದೆನು; ದುಷ್ಟತ್ವದಿಂದ ಮಾಡಿದವನು ನಾನೇ; ಆದರೆ ಈ ಕುರಿಗಳಂತಿರುವ ಜನರು ಮಾಡಿ ದ್ದೇನು? ನಿನ್ನ ಕೈ ನನಗೆ ವಿರೋಧವಾಗಿಯೂ ನನ್ನ ತಂದೆಯ ಮನೆಗೆ ವಿರೋಧವಾಗಿಯೂ ಇರಲಿ ಎಂದು ನಾನು ಬೇಡುತ್ತೇನೆ ಅಂದನು.
ಕರ್ತನು ನನ್ನ ಕುರುಬನು; ಕೊರತೆಪಡೆನು.
ಯೋಸೇಫ್ಯರನ್ನು ಮಂದೆಯಂತೆ ನಡಿಸುವಾತನೇ, ಇಸ್ರಾಯೇಲ್ಯರ ಕುರುಬನೇ, ಕಿವಿಗೊಡು; ಕೆರೂಬಿಗಳ ಮಧ್ಯದಲ್ಲಿ ವಾಸಿಸುವಾತನೇ, ಪ್ರಕಾಶಿಸು.
ಆತನು ತನ್ನ ಮಂದೆಯನ್ನು ಕುರುಬನಂತೆ ಮೇಯಿ ಸುವನು. ಕುರಿಮರಿಗಳನ್ನು ಕೂಡಿಸಿ ಅವುಗಳನ್ನು ತನ್ನ ಎದೆಗಪ್ಪಿಕೊಳ್ಳುವನು ಎಳೇಮರಿಗಳನ್ನು ಮೆಲ್ಲಗೆ ನಡಿಸುವನು ಎಂದು ಸಾರು.
ನಾವೆಲ್ಲರೂ ದಾರಿ ತಪ್ಪಿದ ಕುರಿಗಳಂತಿದ್ದೆವು; ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ಸ್ವಂತ ಮಾರ್ಗಕ್ಕೆ ತಿರುಗಿಕೊಂಡಿದ್ದನು; ಕರ್ತನು ನಮ್ಮ ದುಷ್ಕೃತ್ಯಗಳನ್ನೆಲ್ಲಾ ಆತನ ಮೇಲೆ ಹಾಕಿದನು.
ದೇವರಾದ ಕರ್ತನು ಹೀಗೆ ಹೇಳುತ್ತಾನೆ; ಇಗೋ, ನಾನು ಹೌದು, ನಾನೇ ನನ್ನ ಕುರಿಗಳನ್ನು ವಿಚಾರಿಸಿ ಅವುಗಳನ್ನು ಹುಡುಕುತ್ತೇನೆ.
ನಾನು ಅವುಗಳ ಮೇಲೆ ಒಬ್ಬ ಕುರುಬನನ್ನು ನೇಮಿಸುವೆನು; ಅವನು ಅವುಗಳನ್ನು ಮೇಯಿಸುತ್ತಾನೆ. ನನ್ನ ಸೇವಕನಾದ ದಾವೀದನೇ ಅವುಗಳನ್ನು ಮೇಯಿಸಿ ಅವುಗಳಿಗೆ ಕುರುಬನಾಗುತ್ತಾನೆ.
ನನ್ನ ಸೇವಕನಾದ ದಾವೀದನು ಅವರ ಮೇಲೆ ಅರಸನಾಗಿರುವನು; ಅವರೆಲ್ಲರಿಗೂ ಒಬ್ಬನೇ ಕುರುಬನಿರುವನು ನನ್ನ ನ್ಯಾಯನಿಯಮ ಗಳನ್ನೇ ಅನುಸರಿಸುವಂತೆ ಮಾಡುವೆನು.
ಆತನು ಕರ್ತನ ಬಲದಲ್ಲಿಯೂ ತನ್ನ ದೇವರಾದ ಕರ್ತನ ಹೆಸರಿನಲ್ಲಿ ಘನತೆಯಲ್ಲಿಯೂ ನಿಂತುಕೊಂಡು ಮೇಯಿಸುವನು; ಮತ್ತು ಅವರು ನೆಲೆಯಾಗಿರುವರು, ಈಗ ಆತನು ಭೂಮಿಯ ಅಂತ್ಯಗಳ ಮಟ್ಟಿಗೂ ದೊಡ್ಡವನಾಗಿ ರುವನು.
ಓ ಕತ್ತಿಯೇ, ನನ್ನ ಕುರುಬನಿಗೆ ವಿರೋಧವಾಗಿ, ನನ್ನ ಸಂಗಡಿಗನಾದ ಮನುಷ್ಯನಿಗೆ ವಿರೋಧವಾಗಿ, ಎಚ್ಚರವಾಗು ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ; ಕುರುಬನನ್ನು ಹೊಡೆ, ಆಗ ಕುರಿಗಳು ಚದರಿ ಹೋಗುವವು; ಆದರೆ ಚಿಕ್ಕವುಗಳ ಮೇಲೆ ನನ್ನ ಕೈಯನ್ನು ತಿರುಗಿಸುವೆನು ಎಂದು ಹೇಳುತ್ತಾನೆ.
ಮನುಷ್ಯ ಕುಮಾರನು ಸಹ ಸೇವೆ ಮಾಡಿಸಿಕೊಳ್ಳುವದಕ್ಕಾಗಿ ಅಲ್ಲ, ಸೇವೆ ಮಾಡುವದಕ್ಕಾಗಿಯೂ ಅನೇಕರಿಗಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕಾಗಿಯೂ ಬಂದನು ಎಂದು ಹೇಳಿದನು.
ನಾನೇ ಒಳ್ಳೇ ಕುರುಬನು; ನನ್ನ ಕುರಿಗಳನ್ನು ನಾನು ಬಲ್ಲೆನು. ನನ್ನ ಕುರಿಗಳು ನನ್ನನ್ನು ತಿಳಿದವೆ.
ಯಾಕಂದರೆ ನಾನು ನನ್ನ ಪ್ರಾಣವನ್ನು ತಿರಿಗಿಪಡಕೊಳ್ಳುವಂತೆ ಅದನ್ನು ಕೊಡುತ್ತೇನೆ; ಆದದ ರಿಂದ ನನ್ನ ತಂದೆಯು ನನ್ನನ್ನು ಪ್ರೀತಿಸುತ್ತಾನೆ.
ಒಬ್ಬನು ತನ್ನ ಸ್ನೇಹಿತರಿ ಗೋಸ್ಕರ ತನ್ನ ಪ್ರಾಣವನ್ನು ಕೊಡುವ ಪ್ರೀತಿಗಿಂತ ಹೆಚ್ಚಿನದು ಯಾವದೂ ಇಲ್ಲ.
ಕ್ರಿಸ್ತನು ನಮ್ಮನ್ನು ಪ್ರೀತಿಸಿ ನಮಗೋಸ್ಕರ ತನ್ನನ್ನೇ ದೇವರಿಗೆ ಸುಗಂಧವಾಸನೆಯಾದ ಕಾಣಿಕೆ ಯಾಗಿಯೂ ಯಜ್ಞವಾಗಿಯೂ ಸಮರ್ಪಿಸಿಕೊಂಡ ಪ್ರಕಾರ ನೀವೂ ಪ್ರೀತಿಯಲ್ಲಿ ನಡೆದುಕೊಳ್ಳಿರಿ.
ಆತನು ನಮ್ಮನ್ನು ಸಕಲ ದುಷ್ಟತನದಿಂದ ವಿಮೋಚಿಸುವದಕ್ಕೂ ಸತ್ಕ್ರಿಯೆಗಳಲ್ಲಿ ಆಸಕ್ತರಾದ ಅಸಮಾನ್ಯ ಜನರನ್ನು ತನಗಾಗಿ ಪರಿಶುದ್ಧ ಮಾಡುವದಕ್ಕೂ ನಮಗೋಸ್ಕರ ತನ್ನನ್ನು ತಾನೇ ಒಪ್ಪಿಸಿ ಕೊಟ್ಟನು.ಈ ಕಾರ್ಯಗಳ ವಿಷಯದಲ್ಲಿ ಮಾತನಾಡುತ್ತಾ ಎಚ್ಚರಿಸುತ್ತಾ ಪೂರ್ಣ ಅಧಿಕಾರದಿಂದ ಖಂಡಿಸುತ್ತಾ ಇರು. ಯಾರೂ ನಿನ್ನನ್ನು ತಿರಸ್ಕರಿಸದಿರಲಿ.
ಶಾಶ್ವತವಾದ ಒಡಂಬಡಿಕೆಯ ರಕ್ತದ ಮೂಲಕ ಕುರಿ ಹಿಂಡಿಗೆ ದೊಡ್ಡ ಕುರುಬನಾಗಿರುವ ನಮ್ಮ ಕರ್ತನಾದ ಯೇಸುವನ್ನು ಸತ್ತವರೊಳಗಿಂದ ಬರ ಮಾಡಿದ ಶಾಂತಿದಾಯಕನಾದ ದೇವರು
ನಾವು ಪಾಪಗಳ ಪಾಲಿಗೆ ಸತ್ತು ನೀತಿವಂತರಾಗಿ ಜೀವಿಸುವಂತೆ ಆತನು ಮರದ ಮೇಲೆ ನಮ್ಮ ಪಾಪ ಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತನು; ಆತನ ಬಾಸುಂಡೆಗಳಿಂದ ನಿಮಗೆ ಗುಣವಾಯಿತು.ನೀವು ಕುರಿಗಳಂತೆ ದಾರಿ ತಪ್ಪಿದವರಾಗಿದ್ದೀರಿ; ಆದರೆ ಈಗ ನೀವು ತಿರಿಗಿ ನಿಮ್ಮ ಆತ್ಮಗಳ ಕುರುಬನೂ ಅಧ್ಯಕ್ಷನೂ ಆಗಿರುವಾತನ ಬಳಿಗೆ ಬಂದಿದ್ದೀರಿ.
ಪ್ರಧಾನ ಕುರುಬನು ಪ್ರತ್ಯಕ್ಷನಾಗುವಾಗ ನೀವು ಎಂದಿಗೂ ಬಾಡದ ಮಹಿಮೆಯುಳ್ಳ ಕಿರೀಟವನ್ನು ಹೊಂದುವಿರಿ.
ಆತನು ನಮಗೋಸ್ಕರ ತನ್ನ ಪ್ರಾಣವನ್ನು ಕೊಟ್ಟದ್ದರಲ್ಲಿಯೇ ದೇವರ ಪ್ರೀತಿ ಇಂಥದ್ದೆಂದು ನಮಗೆ ತಿಳಿದು ಬಂದಿದೆ. ನಾವು ಸಹ ಸಹೋದರರಿಗೋಸ್ಕರ ನಮ್ಮ ಪ್ರಾಣಗಳನ್ನು ಕೊಡುವ ಹಂಗಿನಲ್ಲಿದ್ದೇವೆ.
ಸಿಂಹಾಸನದ ಮಧ್ಯದಲ್ಲಿರುವ ಕುರಿಮರಿಯಾದಾತನು ಅವರನ್ನು ಮೇಯಿಸಿ ಜೀವ ಜಲದ ಒರತೆಗಳ ಬಳಿಗೆ ನಡಿಸುತ್ತಾನೆ; ಮತ್ತು ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು ಎಂದು ಹೇಳಿದನು.