ಆ ಬೆಳಕು ಕತ್ತಲಲ್ಲಿ ಪ್ರಕಾಶಿಸುತ್ತದೆ; ಆ ಕತ್ತಲು ಅದನ್ನು ಗ್ರಹಿಸಲಿಲ್ಲ.
Cross references
ಅವರು ಬೆಳಕಿಗೆ ವಿರೋಧವಾಗಿ ದಂಗೆಎದ್ದಿದ್ದಾರೆ; ಅದರ ಮಾರ್ಗ ಗಳನ್ನು ಅವರು ಅರಿಯರು; ಇಲ್ಲವೆ ಅದರ ದಾರಿಗಳಲ್ಲಿ ವಾಸವಾಗಿರರು.
ಜ್ಞಾನ ಹೀನರೇ, ನೀವು ಎಷ್ಟು ಕಾಲ ಅಜ್ಞಾನವನ್ನು ಪ್ರೀತಿಸುವಿರಿ? ತಿರಸ್ಕರಿಸುವವರು ತಮ್ಮ ತಿರಸ್ಕರಿಸು ವಿಕೆಯಲ್ಲಿ ಎಷ್ಟುಕಾಲ ಆನಂದಿಸುವರು? ಜ್ಞಾನ ಹೀನರು ಎಷ್ಟು ಕಾಲ ತಿಳುವಳಿಕೆಯನ್ನು ಹಗೆ ಮಾಡುವರು?
ಅವರು ತಿಳುವಳಿಕೆ ಯನ್ನು ಹಗೆಮಾಡಿ ಕರ್ತನ ಭಯವನ್ನು ಆರಿಸಿಕೊ ಳ್ಳದೆ ಇದ್ದದರಿಂದಲೂ
ಆತನು ಲೋಕದಲ್ಲಿ ಇದ್ದನು; ಲೋಕವು ಆತನಿಂದ ಉಂಟಾಯಿತು; ಲೋಕವು ಆತನನ್ನು ಅರಿಯಲಿಲ್ಲ.
ಆ ತೀರ್ಪು ಏನಂದರೆ, ಬೆಳಕು ಲೋಕಕ್ಕೆ ಬಂದಿದ್ದರೂ ಮನುಷ್ಯರ ಕ್ರಿಯೆಗಳು ಕೆಟ್ಟವುಗಳಾ ಗಿರುವದರಿಂದ ಅವರು ಬೆಳಕಿಗಿಂತ ಕತ್ತಲೆಯನ್ನೇ ಪ್ರೀತಿ ಮಾಡಿದರು.
ನೀವು ಬೆಳಕಿನ ಮಕ್ಕಳಾಗುವಂತೆ ನಿಮಗೆ ಬೆಳಕು ಇರುವಾಗಲೇ ಬೆಳಕನ್ನು ನಂಬಿರಿ ಅಂದನು. ಯೇಸು ಇವುಗಳನ್ನು ಹೇಳಿದ ಮೇಲೆ ಹೊರಟುಹೋಗಿ ಅವರಿಂದ ಅಡಗಿಕೊಂಡನು.
ಇದಲ್ಲದೆ ಅವರು ತಮ್ಮ ತಿಳುವಳಿಕೆಯಿಂದ ದೇವರನ್ನು ಸ್ಮರಿಸುವದಕ್ಕೆ ಮನಸ್ಸಿಲ್ಲದ ಕಾರಣ ದೇವರು ಅವರನ್ನು ಮಾಡಬಾರದವುಗಳನ್ನು ಮಾಡು ವಂತೆ ಅನಿಷ್ಟಭಾವಕ್ಕೆ ಒಪ್ಪಿಸಿದನು.
ಪ್ರಾಕೃತ ಮನುಷ್ಯನು ದೇವರಾತ್ಮನ ವಿಷಯಗಳನ್ನು ಅಂಗೀಕರಿಸುವದಿಲ್ಲ; ಅವು ಅವನಿಗೆ ಹುಚ್ಚುತನವಾಗಿ ತೋರುತ್ತವೆ; ಇಲ್ಲವೆ ಅವು ಆತ್ಮವಿಚಾರದಿಂದ ತಿಳಿಯತಕ್ಕವುಗಳಾಗಿರಲಾಗಿ ಅವನು ಅವುಗಳನ್ನು ಗ್ರಹಿಸ ಲಾರನು.