Home Bibles ಯೋಹಾನ 1:47 · ಕನ್ನಡ ಬೈಬಲ್
ಯೋಹಾನ 1:47 · ಕನ್ನಡ ಬೈಬಲ್

ಯೇಸು ತನ್ನ ಬಳಿಗೆ ಬರುವ ನತಾನಯೇಲನನ್ನು ಕಂಡು ಅವನ ವಿಷಯವಾಗಿ--ಇಗೋ, ಇವನು ನಿಜ ವಾಗಿಯೂ ಇಸ್ರಾಯೇಲನು; ಇವನಲ್ಲಿ ಕಪಟವಿಲ್ಲ ಅಂದನು.

Cross references

ಕೀರ್ತನೆಗಳು 32:2

ಕರ್ತನು ಯಾವನಿಗೆ ಅಪರಾಧ ವನ್ನು ಎಣಿಸುವದಿಲ್ಲವೋ, ಯಾವನ ಹೃದಯದಲ್ಲಿ ವಂಚನೆ ಇರುವದಿಲ್ಲವೋ, ಆ ಮನುಷ್ಯ ಧನ್ಯನು.

ಕೀರ್ತನೆಗಳು 73:1

ನಿಜವಾಗಿ ದೇವರು ಇಸ್ರಾಯೇಲಿಗೂ ಶುದ್ಧ ಹೃದಯದವರಿಗೂ ಒಳ್ಳೆಯವನು.

ಯೋಹಾನ 4:16

ಯೇಸು ಆಕೆಗೆ--ಹೋಗಿ ನಿನ್ನ ಗಂಡನನ್ನು ಕರಕೊಂಡು ಇಲ್ಲಿಗೆ ಬಾ ಅಂದನು.

ಯೋಹಾನ 8:31

ಆತನ ಮೇಲೆ ನಂಬಿಕೆಯಿಟ್ಟ ಆ ಯೆಹೂದ್ಯರಿಗೆ ಯೇಸು ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡಿದ್ದರೆ ನಿಜವಾ ಗಿಯೂ ನೀವು ನನ್ನ ಶಿಷ್ಯರಾಗುವಿರಿ.

ಯೋಹಾನ 8:39

ಅವರು ಪ್ರತ್ಯುತ್ತರವಾಗಿ ಆತನಿಗೆ--ಅಬ್ರಹಾಮನು ನಮ್ಮ ತಂದೆ ಅಂದರು; ಅದಕ್ಕೆ ಯೇಸು ಅವರಿಗೆ--ನೀವು ಅಬ್ರಹಾಮನ ಮಕ್ಕಳಾಗಿದ್ದರೆ ಅಬ್ರಹಾಮನ ಕ್ರಿಯೆಗಳನ್ನು ಮಾಡು ತ್ತಿದ್ದಿರಿ.

ರೋಮಾಪುರದವರಿಗೆ 2:28

ಹೊರಗೆ ಯೆಹೂದ್ಯನಾಗಿರುವವನು ಯೆಹೂದ್ಯನಲ್ಲ; ಹೊರಗೆ ಶರೀರದಲ್ಲಿ ಮಾಡಿರುವ ಸುನ್ನತಿಯು ಸುನ್ನತಿಯಲ್ಲ.ಆದರೆ ಒಳಗೆ ಯೆಹೂದ್ಯ ನಾಗಿರುವವನೇ ಯೆಹೂದ್ಯನು; ಸುನ್ನತಿಯು ಹೃದಯಕ್ಕೆ ಸಂಬಂಧಪಟ್ಟದ್ದಾಗಿ ಅಕ್ಷರೀಕವಾಗಿರದೆ ಆತ್ಮೀಕವಾದದ್ದೇ ಆಗಿದೆ. ಹೀಗೆ ಅವನ ಹೊಗಳಿಕೆಯು ಮನುಷ್ಯರಿಂದಾ ಗಿರದೆ ದೇವರಿಂದಲೇ ಆಗಿರುವದು.

ರೋಮಾಪುರದವರಿಗೆ 9:4

ಇವರು ಇಸ್ರಾಯೇಲ್ಯರು; ದತ್ತುಪುತ್ರ ಸ್ವಿಕಾರವೂ ಮಹಿಮೆಯೂ ಒಡಂಬಡಿ ಕೆಗಳೂ ನ್ಯಾಯಪ್ರಮಾಣ ಕೊಡೋಣವೂ ದೇವರ ಸೇವೆಯೂ ವಾಗ್ದಾನಗಳೂ ಇವರಿಗೆ ಸಂಬಂಧ ಪಟ್ಟವುಗಳು.

ರೋಮಾಪುರದವರಿಗೆ 9:6

ದೇವರ ಮಾತು ನಿರರ್ಥಕವಾಯಿತೆಂತಲ್ಲ; ಯಾಕಂದರೆ ಇಸ್ರಾಯೇಲ್ಯರಿಗೆ ಸಂಬಂಧಪಟ್ಟವ ರೆಲ್ಲರೂ ಇಸ್ರಾಯೇಲ್ಯರಲ್ಲ;

ಫಿಲಿಪ್ಪಿಯವರಿಗೆ 3:3

ಆತ್ಮದಲ್ಲಿ ದೇವರನ್ನು ಆರಾಧಿಸುವವರೂ ಕ್ರಿಸ್ತ ಯೇಸುವಿನಲ್ಲಿ ಸಂತೋಷಿಸುವವರೂ ಶರೀರದಲ್ಲಿ ಭರವಸೆಯಿಲ್ಲದವರೂ ಆದ ನಾವೇ ಸುನ್ನತಿಯವರಾಗಿ ದ್ದೇವೆ.

1 ಪೇತ್ರ 2:1

ಆದಕಾರಣ ಎಲ್ಲಾ ಕೆಟ್ಟತನವನ್ನೂ ಎಲ್ಲಾ ವಂಚನೆಯನ್ನೂ ಕಪಟವನ್ನೂ ಹೊಟ್ಟೇ ಕಿಚ್ಚನ್ನೂ ಎಲ್ಲಾ ಕೆಟ್ಟ ಮಾತುಗಳನ್ನೂ ವಿಸರ್ಜಿಸಿರಿ.

1 ಪೇತ್ರ 2:22

ಆತನು ಯಾವ ಪಾಪವನ್ನೂ ಮಾಡಲಿಲ್ಲ, ಆತನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ.

ಪ್ರಕಟನೆ 14:5

ಇವರ ಬಾಯಲ್ಲಿ ವಂಚನೆ ಸಿಕ್ಕಲಿಲ್ಲ; ಯಾಕಂದರೆ ಇವರು ದೇವರ ಸಿಂಹಾಸನದ ಮುಂದೆ ನಿರ್ದೋಷಿಗಳಾಗಿದ್ದಾರೆ.

Interlinear

Choose Theme