ನಾನು ಆತನನ್ನು ಅರಿತಿರಲಿಲ್ಲ; ಆದರೆ ನೀರಿನಿಂದ ಬಾಪ್ತಿಸ್ಮ ಮಾಡಿಸುವದಕ್ಕೆ ನನ್ನನ್ನು ಕಳುಹಿಸಿದಾತನೇ ನನಗೆ-- ಯಾವಾತನ ಮೇಲೆ ಆತ್ಮನು ಇಳಿದು ನೆಲೆಯಾಗಿರು ವದನ್ನು ನೀನು ನೋಡುವಿಯೋ ಆತನೇ ಪವಿತ್ರಾತ್ಮ ನಿಂದ ಬಾಪ್ತಿಸ್ಮ ಮಾಡಿಸುವಾತನು ಎಂದು ಹೇಳಿದನು.
Cross references
ನಾನು ಮಾನ ಸಾಂತರದ ನಿಮಿತ್ತ ನಿಮಗೆ ನೀರಿನಲ್ಲಿ ಬಾಪ್ತಿಸ್ಮ ಮಾಡಿಸುವದು ನಿಜವೇ; ಆದರೆ ನನ್ನ ಹಿಂದೆ ಬರುವಾತನು ನನಗಿಂತಲೂ ಶಕ್ತನಾಗಿದ್ದಾನೆ. ಆತನ ಕೆರಗಳನ್ನು ಹೊರುವದಕ್ಕೂ ನಾನು ಯೋಗ್ಯನಲ್ಲ; ಆತನು ಪವಿತ್ರಾ ತ್ಮನಿಂದಲೂ ಬೆಂಕಿಯಿಂದಲೂ ನಿಮಗೆ ಬಾಪ್ತಿಸ್ಮ ಮಾಡಿ ಸುವನು.
ಆಗ ಯೇಸು ಯೋಹಾನನಿಂದ ಬಾಪ್ತಿಸ್ಮ ಮಾಡಿಸಿಕೊಳ್ಳಬೇಕೆಂದು ಗಲಿಲಾಯದಿಂದ ಯೊರ್ದ ನಿಗೆ ಬಂದನು.
ಮತ್ತು ಅವನು--ನನಗಿಂತ ಶಕ್ತನಾಗಿರುವಾತನು ನನ್ನ ಹಿಂದೆ ಬರುತ್ತಾನೆ; ನಾನು ಬೊಗ್ಗಿಕೊಂಡು ಆತನ ಕೆರಗಳ ಬಾರನ್ನು ಬಿಚ್ಚುವದಕ್ಕೂ ಯೋಗ್ಯನಲ್ಲ;
ಆಗ ಯೋಹಾನನು ಪ್ರತ್ಯುತ್ತರವಾಗಿ ಅವರೆಲ್ಲ ರಿಗೆ--ನಾನಂತೂ ನಿಮಗೆ ನೀರಿನ ಬಾಪ್ತಿಸ್ಮ ಮಾಡಿಸು ವದು ನಿಜವೇ; ಆದರೆ ನನಗಿಂತ ಶಕ್ತನೊಬ್ಬನು ಬರು ತ್ತಾನೆ; ಆತನ ಕೆರಗಳ ಬಾರನ್ನು ಬಿಚ್ಚುವದಕ್ಕೂ ನಾನು ಯೋಗ್ಯನಲ್ಲ; ಆತನು ಪವಿತ್ರಾತ್ಮನಿಂದಲೂ ಬೆಂಕಿಯಿಂ ದಲೂ ನಿಮಗೆ ಬಾಪ್ತಿಸ್ಮ ಮಾಡಿಸುವನು
ನಾನು ಆತನನ್ನು ಅರಿತಿರಲಿಲ್ಲ; ಆದರೆ ಆತನು ಇಸ್ರಾಯೇಲ್ಯರಿಗೆ ಪ್ರತ್ಯಕ್ಷನಾಗುವಂತೆ ನಾನು ನೀರಿನಿಂದ ಬಾಪ್ತಿಸ್ಮ ಮಾಡಿಸುವವನಾಗಿ ಬಂದಿದ್ದೇನೆ ಅಂದನು.
ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಿನಗೆ ನಿಜನಿಜ ವಾಗಿ ಹೇಳುತ್ತೇನೆ, ಒಬ್ಬನು ನೀರಿನಿಂದಲೂ ಆತ್ಮ ನಿಂದಲೂ ಹುಟ್ಟದಿದ್ದರೆ ಅವನು ದೇವರ ರಾಜ್ಯದೊಳಗೆ ಪ್ರವೇಶಿಸಲಾರನು.
ದೇವರು ಕಳುಹಿಸಿದಾತನು ದೇವರ ಮಾತುಗಳನ್ನೇ ಆಡುತ್ತಾನೆ; ದೇವರು ಆತನಿಗೆ ಆತ್ಮನನ್ನು ಅಳತೆ ಮಾಡದೆ ಕೊಡುತ್ತಾನೆ.
ಯಾಕಂದರೆ ಯೋಹಾನನು ನಿಜವಾಗಿಯೂ ನೀರಿನಿಂದ ಬಾಪ್ತಿಸ್ಮ ಮಾಡಿಸಿದನು; ಆದರೆ ನೀವು ಇನ್ನು ಸ್ವಲ್ಪ ದಿವಸ ಗಳಲ್ಲಿಯೇ ಪವಿತ್ರಾತ್ಮನಿಂದ ಬಾಪ್ತಿಸ್ಮ ಹೊಂದುವಿರಿ ಎಂದು ಹೇಳಿದನು.
ಆಗ ಅವರೆಲ್ಲರೂ ಪವಿತ್ರಾತ್ಮಭರಿತರಾಗಿ ಆತ್ಮನು ತಮಗೆ ನುಡಿಯುವ ಶಕ್ತಿಯನ್ನು ಕೊಟ್ಟ ಪ್ರಕಾರ ಅವರು ಬೇರೆಬೇರೆ ಭಾಷೆಗಳಲ್ಲಿ ಮಾತನಾಡುವದಕ್ಕೆ ಪ್ರಾರಂಭಿಸಿದರು.
ಪೇತ್ರನು ಈ ಮಾತುಗಳನ್ನು ಇನ್ನೂ ಹೇಳು ತ್ತಿರುವಾಗ ವಾಕ್ಯವನ್ನು ಕೇಳಿದವರೆಲ್ಲರ ಮೇಲೆ ಪವಿ ತ್ರಾತ್ಮನು ಇಳಿದನು.
ನಾನು ಮಾತನಾ ಡುವದಕ್ಕೆ ಪ್ರಾರಂಭಿಸಿದಾಗ ಪವಿತ್ರಾತ್ಮನು ಮೊದಲು ನಮ್ಮ ಮೇಲೆ ಬಂದಹಾಗೆ ಅವರ ಮೇಲೆಯೂ ಬಂದನು.
ಅವರಿಗೆ--ನೀವು ನಂಬಿದಾಗ ಪವಿತ್ರಾತ್ಮನನ್ನು ಹೊಂದಿದಿರೋ ಎಂದು ಕೇಳಿದ್ದಕ್ಕೆ ಅವರು ಅವನಿಗೆ--ಪವಿತ್ರಾತ್ಮನು ಇದ್ದಾ ನೆಂಬದು ನಾವು ಕೇಳಲೇ ಇಲ್ಲ ಅಂದರು.
ಯೆಹೂದ್ಯರಾಗಲಿ ಅನ್ಯರಾಗಲಿ ದಾಸರಾಗಲಿ ಸ್ವತಂತ್ರರಾಗಲಿ ನಾವೆಲ್ಲರು ಒಂದೇ ದೇಹವಾಗು ವದಕ್ಕಾಗಿ ಒಬ್ಬನೇ ಆತ್ಮನಿಂದ ಬಾಪ್ತಿಸ್ಮ ಮಾಡಿಸಿ ಕೊಂಡೆವು; ಆ ಒಬ್ಬನೇ ಆತ್ಮನು ನಮ್ಮೆಲ್ಲರಿಗೂ ಪಾನವಾಗಿ ಕೊಡಲ್ಪಟ್ಟಿದ್ದಾನೆ.
ನಾವು ಮಾಡಿದ ನೀತಿಯ ಕ್ರಿಯೆ ಗಳಿಂದಲ್ಲ, ಆತನ ಕರುಣೆಯಿಂದಲೇ ಪುನರ್ಜನ್ಮದ ತೊಳೆಯುವಿಕೆಯಿಂದಲೂ ಪವಿತ್ರಾತ್ಮನು ನೂತನ ಸ್ವಭಾವವನ್ನುಂಟು ಮಾಡುವದರಿಂದಲೂ ಆತನು ನಮ್ಮನ್ನು ರಕ್ಷಿಸಿದನು.