Home Bibles ಯೋವೇಲ 1:7 · ಕನ್ನಡ ಬೈಬಲ್
ಯೋವೇಲ 1:7 · ಕನ್ನಡ ಬೈಬಲ್

ಅದು ನನ್ನ ದ್ರಾಕ್ಷೇ ಬಳ್ಳಿಯನ್ನು ಹಾಳುಮಾಡಿ ನನ್ನ ಅಂಜೂರದ ಗಿಡವನ್ನು ಮುರಿದು ಹಾಕಿದೆ; ಅದನ್ನು ಸಂಪೂರ್ಣ ಸುಲಿದು ಬಿಸಾಡಿಬಿಟ್ಟಿದೆ; ಅದರ ಕೊಂಬೆ ಗಳು ಬಿಳುಪಾದವು.

Cross references

ನಿರ್ಗಮಕಾಂಡ 10:15

ಅವು ಭೂ ಮುಖವನ್ನೆಲ್ಲಾ ಮುತ್ತಿಕೊಂಡದ್ದರಿಂದ ಆ ದೇಶವು ಕತ್ತಲಾಯಿತು. ಅವು ಭೂಮಿಯ ಎಲ್ಲಾ ಸೊಪ್ಪನ್ನೂ ಆನೆಕಲ್ಲಿನ ಮಳೆಯು ಉಳಿಸಿದ ಮರಗಳ ಎಲ್ಲಾ ಫಲವನ್ನೂ ತಿಂದುಬಿಟ್ಟವು. ಮರಗಳಲ್ಲಾದರೂ ಹೊಲದ ಗಿಡಗಳಲ್ಲಾದರೂ ಹಸುರಾದದ್ದು ಐಗುಪ್ತ ದೇಶದಲ್ಲೆಲ್ಲಿಯೂ ಉಳಿಯಲಿಲ್ಲ.

ಕೀರ್ತನೆಗಳು 105:33

ಅವರ ದ್ರಾಕ್ಷೇ ಬಳ್ಳಿಯನ್ನೂ ಅಂಜೂರದ ಗಿಡಗಳನ್ನೂ ಹೊಡೆದು ಮೇರೆಗಳ ಮರ ಗಳನ್ನು ಮುರಿದನು.

ಯೆಶಾಯ 5:6

ಅದನ್ನು ನಾನು ಹಾಳಾಗಲು ಬಿಡುವೆನು: ಅದನ್ನು ಯಾರೂ ಕುಡಿ ಕತ್ತರಿಸುವದಿಲ್ಲ; ಅಗೆಯುವದೂ ಇಲ್ಲ. ಆದರೆ ಅಲ್ಲಿ ಮುಳ್ಳುಪೊದೆಗಳು ಬೆಳೆಯುವವು; ಅಲ್ಲದೆ ಅದರ ಮೇಲೆ ಮಳೆ ಸುರಿಸಬಾರದೆಂದು ಮೋಡಗಳಿಗೆ ಆಜ್ಞಾ ಪಿಸುವೆನು.

ಯೆಶಾಯ 24:7

ದ್ರಾಕ್ಷಾರಸವು ದುಃಖಿಸುತ್ತದೆ, ದ್ರಾಕ್ಷೆಯು ಕ್ಷೀಣಿಸು ವದು; ಹರ್ಷ ಹೃದಯರೆಲ್ಲಾ ನಿಟ್ಟುಸಿರುಬಿಡುತ್ತಾರೆ.

ಯೆಶಾಯ 32:12

ಇಷ್ಟವಾದ ಹೊಲಗಳ ಮತ್ತು ಫಲ ವತ್ತಾದ ದ್ರಾಕ್ಷಾಲತೆಗಳ ನಿಮಿತ್ತ ಎದೆ ಬಡುಕೊಳ್ಳು ವರು.

ಯೆರೆಮಿಯ 8:13

ಕರ್ತನು ಹೇಳುವದೇನಂದರೆ--ನಾನು ಅವರ ಮುಂದೆ ಇಟ್ಟ ನನ್ನ ನ್ಯಾಯಪ್ರಮಾಣವನ್ನು ಅವರು ಬಿಟ್ಟು ನನ್ನ ಶಬ್ದಕ್ಕೆ ಕಿವಿಗೊಡದೆ ಅದರಲ್ಲಿ ನಡೆಯದೆ

ಹೊಶೇಯ 2:12

ಮತ್ತು--ನನ್ನ ಮಿಂಡರಿಂದಾದ ಪ್ರತಿಫಲ ಇವುಗಳೇ ಎಂದು ಅವಳು ಹೇಳಿದ ಅವಳ ದ್ರಾಕ್ಷೇ ಬಳ್ಳಿಗಳನ್ನು ಅವಳ ಅಂಜೂರದ ಮರಗಳನ್ನು ನಾನು ಹಾಳುಮಾಡಿ ಅವುಗಳನ್ನು ಕಾಡನ್ನಾಗಿ ಮಾಡುವೆನು; ಅಡವಿಯ ಮೃಗಗಳು ಅವುಗಳನ್ನು ತಿನ್ನುವವು.

ಯೋವೇಲ 1:12

ದ್ರಾಕ್ಷೇ ಬಳ್ಳಿ ಒಣಗಿಹೋಗಿದೆ; ಅಂಜೂರದಮರ ಬಾಡಿ ಹೋಗಿದೆ; ದಾಳಿಂಬರದಗಿಡವೂ ಖರ್ಜೂರದ ಗಿಡವೂ ಸೇಬು ಗಿಡವೂ ಹೊಲದ ಮರಗಳೆಲ್ಲವೂ ಒಣಗಿಹೋಗಿವೆ; ಸಂತೋಷವು ಮನುಷ್ಯರ ಪುತ್ರರನ್ನು ಬಿಟ್ಟು ಒಣಗಿಹೋಗಿದೆ.

ಆಮೋಸ 4:9

ನಿಮ್ಮ ಪೈರನ್ನು ಹಾಳುಮಾಡುವ ಬಿರುಗಾಳಿಯಿಂದ ಹೊಡೆದಿದ್ದೇನೆ; ನಿಮ್ಮ ತೋಟಗಳು, ದ್ರಾಕ್ಷೇತೋಟ ಗಳು, ಅಂಜೂರದ ಗಿಡಗಳು ಮತ್ತು ಎಣ್ಣೇ ಮರಗಳು ಹೆಚ್ಚಾದಾಗ ಕಂಬಳಿ ಹುಳಗಳು ಅವುಗಳನ್ನು ತಿಂದು ಬಿಟ್ಟವು; ಆದರೂ ನೀವು ನನ್ನ ಕಡೆಗೆ ಹಿಂತಿರುಗಿ ಕೊಳ್ಳಲಿಲ್ಲವೆಂದು ಕರ್ತನು ಹೇಳುತ್ತಾನೆ.

ಹಬಕ್ಕೂಕ 3:17

ಅಂಜೂರದ ಮರವು ಚಿಗುರ ದಿದ್ದರೂ ದ್ರಾಕ್ಷೇಬಳ್ಳಿಗಳಲ್ಲಿ ಹಣ್ಣು ಇಲ್ಲದಿದ್ದರೂ ಎಣ್ಣೇ ಮರಗಳ ಉತ್ಪತ್ತಿಯು ನಿಂತುಹೋದರೂ ಹೊಲಗಳು ಆಹಾರ ಕೊಡದಿದ್ದರೂ ಹಟ್ಟಿಯೊಳಗಿಂದ ಮಂದೆಗಳು ಕಡಿದು ಬಿಡಲ್ಪಟ್ಟಿದ್ದರೂ ಗೋದಲಿಗಳಲ್ಲಿ ಮಂದೆ ಇಲ್ಲದಿದ್ದರೂ

ಮಲಾಕಿ 3:11

ಇದಲ್ಲದೆ ನಾನು ನಿಮ್ಮ ನಿಮಿತ್ತ ನುಂಗಿ ಬಿಡುವವನನ್ನು ಗದರಿಸುವೆನು; ಅವನು ನಿಮ್ಮ ಭೂಮಿಯ ಫಲವನ್ನು ಕೆಡಿಸನು; ಇಲ್ಲವೆ ನಿಮ್ಮ ದ್ರಾಕ್ಷೇಬಳ್ಳಿ ಹೊಲದಲ್ಲಿ ತನ್ನ ಫಲ ವನ್ನು ಕಾಲಕ್ಕೆ ಮುಂಚೆ ಉದುರಿಸಿಬಿಡುವದಿಲ್ಲವೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.

Interlinear

Choose Theme