ಪಶುಗಳು ಎಷ್ಟೋ ಮುಲುಗುತ್ತವೆ; ದನದ ಹಿಂಡುಗಳು ಕಳವಳಗೊಂಡಿವೆ; ಅವಕ್ಕೆ ಮೇವು ಇಲ್ಲ; ಕುರಿಮಂದೆಗಳು ಸಹ ನಾಶ ವಾಗುತ್ತವೆ.
Cross references
ಅಹಾ ಬನು ಓಬದ್ಯನಿಗೆ--ನೀನು ದೇಶದಲ್ಲಿರುವ ಎಲ್ಲಾ ನೀರು ಬುಗ್ಗೆಗಳ ಬಳಿಗೂ ಎಲ್ಲಾ ಹಳ್ಳಗಳ ಬಳಿಗೂ ಹೋಗು. ನಾವು ಸಮಸ್ತ ಪಶುಗಳನ್ನು ಕಳಕೊಳ್ಳದ ಹಾಗೆ ಕುದುರೆಗಳನ್ನೂ ಹೇಸರ ಕತ್ತೆಗಳನ್ನೂ ಜೀವ ದಿಂದ ಇರಿಸುವದಕ್ಕೆ ನಮಗೆ ಒಂದು ವೇಳೆ ಹುಲ್ಲು ದೊರಕಬಹುದು ಅಂದನು.
ದಟ್ಟಿಯನ್ನು ತಕ್ಕೊಂಡು ಎದ್ದು ಯೂಫ್ರೇಟೀಸ್‌ಗೆ ಹೋಗಿ ಅದನ್ನು ಅಲ್ಲಿ ಬಂಡೆಯ ಬಿರುಕಿನಲ್ಲಿ ಅಡಗಿಸು ಎಂದಿತು.
ಓ ಯೆರೂಸಲೇಮೇ, ನಿನ್ನ ಮೇಲೆ ಯಾರೂ ಕನಿಕರಪಡುವರು? ನಿನಗೋಸ್ಕರ ಯಾರು ದುಃಖಿಸುವರು? ನಿನ್ನ ಕ್ಷೇಮವನ್ನು ಕುರಿತು ಕೇಳುವದಕ್ಕೆ ಯಾರು ಸವಿಾಪ ಬರುವರು?
ಆದದರಿಂದ ದೇಶವು ದುಃಖಪಡುವದು; ಅದರಲ್ಲಿ ವಾಸಿಸುವ ಪ್ರತಿಯೊಬ್ಬನೂ ಕುಗ್ಗಿ ಹೋಗುವನು; ಅಡವಿಯ ಮೃಗಗಳೂ ಆಕಾಶದ ಪಕ್ಷಿಗಳೂ ಸಮುದ್ರದ ವಿಾನುಗಳೂ ತೆಗೆದುಹಾಕಲ್ಪಡುವವು.
ಅಡವಿಯ ಮೃಗಗಳು ಸಹ ನಿನ್ನ ಕಡೆಗೆ ಹೂಂಕರಿಸುತ್ತವೆ; ನೀರಿನ ಹೊಳೆಗಳು ಬತ್ತಿ ಹೋಗಿವೆ; ಬೆಂಕಿಯು ಅಡವಿಯ ಮೇವಿನ ಸ್ಥಳಗಳನ್ನು ದಹಿಸಿಬಿಟ್ಟಿದೆ.
ಹಿಗೆ ಸರ್ವಸೃಷ್ಟಿಯು ಇಂದಿನ ವರೆಗೂ ನರಳುತ್ತಾ ಪ್ರಸವವೇದನೆ ಪಡುತ್ತದೆಯೆಂದು ನಾವು ಬಲ್ಲೆವು.