Home Bibles ಯೋವೇಲ 1:10 · ಕನ್ನಡ ಬೈಬಲ್
ಯೋವೇಲ 1:10 · ಕನ್ನಡ ಬೈಬಲ್

ಹೊಲವು ಹಾಳಾಗಿದೆ; ಭೂಮಿಯು ಗೋಳಾಡುತ್ತದೆ; ಧಾನ್ಯವು ಹಾಳಾಗಿದೆ; ಹೊಸ ದ್ರಾಕ್ಷಾರಸವು ಒಣಗಿದೆ; ಎಣ್ಣೆ ಬಾಡಿಹೋಗಿದೆ.

Cross references

ಲೇವ್ಯಕಾಂಡ 26:20

ಆಗ ನಿಮ್ಮ ಶಕ್ತಿಯು ವ್ಯರ್ಥವಾಗಿ ಮುಗಿದು ಹೋಗುವದು. ನಿಮ್ಮ ಭೂಮಿಯು ತನ್ನ ಬೆಳೆಯನ್ನೂ ಮರಗಳ ಫಲಗಳನ್ನೂ ಕೊಡದೆ ಇರುವದು.

ಯೆಶಾಯ 24:3

ಭೂಮಿಯು ಬರಿದೇ ಬರಿದಾಗುವದು ಮತ್ತು ಸಂಪೂರ್ಣ ಸುಲಿಗೆಯಾಗು ವದು. ಕರ್ತನು ತಾನೇ ಈ ಮಾತನ್ನು ಹೇಳಿದ್ದಾನೆ.

ಯೆಶಾಯ 24:11

ದ್ರಾಕ್ಷಾರಸದ ಕೊರತೆಯಿಂದ ಬೀದಿಗಳಲ್ಲಿ ಅರಚುತ್ತಾರೆ; ಉಲ್ಲಾಸವೆಲ್ಲ ಅಸ್ತಮಿಸಿದೆ; ದೇಶದ ಸಡಗರವು ತೊಲಗಿಹೋಗಿದೆ.

ಯೆರೆಮಿಯ 12:4

ದಟ್ಟಿಯನ್ನು ತಕ್ಕೊಂಡು ಎದ್ದು ಯೂಫ್ರೇಟೀಸ್‌ಗೆ ಹೋಗಿ ಅದನ್ನು ಅಲ್ಲಿ ಬಂಡೆಯ ಬಿರುಕಿನಲ್ಲಿ ಅಡಗಿಸು ಎಂದಿತು.

ಯೆರೆಮಿಯ 12:11

ಯಾವ ಪ್ರಕಾರ ದಟ್ಟಿಯು ಮನುಷ್ಯನ ನಡುವಿಗೆ ಹತ್ತಿಕೊ ಳ್ಳುವದೋ ಅದೇ ಪ್ರಕಾರ ನಾನು ಇಸ್ರಾಯೇಲಿನ ಮನೆತನವನ್ನೆಲ್ಲವನ್ನೂ ಯೆಹೂದದ ಮನೆತನವ ನ್ನೆಲ್ಲವನ್ನೂ ನನಗೆ ಜನರೂ ಹೆಸರೂ ಸ್ತೋತ್ರವೂ ಮಹಿಮೆಯೂ ಆಗುವ ಹಾಗೆ ನನಗೆ ಹತ್ತಿಕೊಳ್ಳುವಂತೆ ಮಾಡಿದೆನು; ಆದರೆ ಅವರು ಕೇಳಲಿಲ್ಲ.

ಯೆರೆಮಿಯ 14:2

ಅವರು ನಿನಗೆ--ನಾವು ಎಲ್ಲಿ ಹೋಗಬೇಕು ಎಂದು ಹೇಳಿದರೆ, ನೀನು ಅವ ರಿಗೆ--ಕರ್ತನು ಹೀಗೆ ಹೇಳುತ್ತಾನೆ--ಮರಣಕ್ಕೆ ಇರುವವರು ಮರಣಕ್ಕೆ; ಕತ್ತಿಗೆ ಇರುವವರು ಕತ್ತಿಗೆ; ಕ್ಷಾಮಕ್ಕೆ ಇರುವವರು ಕ್ಷಾಮಕ್ಕೆ, ಸೆರೆಗೆ ಇರು ವವರು ಸೆರೆಗೆ ಎಂದು ಹೇಳಬೇಕು.

ಯೆರೆಮಿಯ 48:33

ಹಾಚೋರು ಮೃಗಗಳ ನಿವಾಸವೂ ಎಂದೆಂದಿಗೂ ಹಾಳಾದ ಸ್ಥಳವೂ ಆಗುವದು; ಅಲ್ಲಿ ಯಾವನಾದರೂ ವಾಸಮಾಡುವದಿಲ್ಲ; ಅಲ್ಲಿ ಯಾವ ನರಪುತ್ರನಾದರೂ ತಂಗುವದಿಲ್ಲ.

ಹೊಶೇಯ 4:3

ಆದದರಿಂದ ದೇಶವು ದುಃಖಪಡುವದು; ಅದರಲ್ಲಿ ವಾಸಿಸುವ ಪ್ರತಿಯೊಬ್ಬನೂ ಕುಗ್ಗಿ ಹೋಗುವನು; ಅಡವಿಯ ಮೃಗಗಳೂ ಆಕಾಶದ ಪಕ್ಷಿಗಳೂ ಸಮುದ್ರದ ವಿಾನುಗಳೂ ತೆಗೆದುಹಾಕಲ್ಪಡುವವು.

ಹೊಶೇಯ 9:2

ಕಣವು ಮತ್ತು ದ್ರಾಕ್ಷೆಯ ತೋಟವು ಅವರನ್ನು ಪೋಷಿಸುವದಿಲ್ಲ; ಹೊಸ ದ್ರಾಕ್ಷಾರಸವು ಅವಳಲ್ಲಿ ನಿಂತುಹೋಗುವದು.

ಯೋವೇಲ 1:5

ಅಮಲೇರಿದವರೇ, ನೀವು ಎಚ್ಚತ್ತು ಅಳಿರಿ; ದ್ರಾಕ್ಷಾರಸ ಕುಡಿಯುವವರೆಲ್ಲರೇ, ಹೊಸ ದ್ರಾಕ್ಷಾ ರಸದ ನಿಮಿತ್ತ ಗೋಳಾಡಿರಿ; ಅದು ನಿಮ್ಮ ಬಾಯಿ ಯೊಳಗಿಂದ ತೆಗೆಯಲ್ಪಟ್ಟಿದೆ.

ಯೋವೇಲ 1:12

ದ್ರಾಕ್ಷೇ ಬಳ್ಳಿ ಒಣಗಿಹೋಗಿದೆ; ಅಂಜೂರದಮರ ಬಾಡಿ ಹೋಗಿದೆ; ದಾಳಿಂಬರದಗಿಡವೂ ಖರ್ಜೂರದ ಗಿಡವೂ ಸೇಬು ಗಿಡವೂ ಹೊಲದ ಮರಗಳೆಲ್ಲವೂ ಒಣಗಿಹೋಗಿವೆ; ಸಂತೋಷವು ಮನುಷ್ಯರ ಪುತ್ರರನ್ನು ಬಿಟ್ಟು ಒಣಗಿಹೋಗಿದೆ.

ಯೋವೇಲ 1:17

ಬೀಜವು ಅವರ ಹೆಂಟೆಗಳ ಕೆಳಗೆ ಕೆಟ್ಟುಹೋಗಿದೆ; ಉಗ್ರಾಣಗಳು ನಾಶವಾಗಿವೆ; ಕಣಜಗಳು ಕೆಡವಲ್ಪ ಟ್ಟಿವೆ; ಧಾನ್ಯವು ಒಣಗಿದೆ.

ಹಗ್ಗಾಯ 1:11

ಇದಲ್ಲದೆ ನಾನು ಭೂಮಿಯ ಮೇಲೆಯೂ ಬೆಟ್ಟಗಳ ಮೇಲೆಯೂ ಧಾನ್ಯದ ಮೇಲೆಯೂ ಹೊಸ ದ್ರಾಕ್ಷಾರಸದ ಮೇಲೆ ಯೂ ಎಣ್ಣೆಯ ಮೇಲೆಯೂ ಭೂಮಿ ಹುಟ್ಟುವಳಿಯ ಮೇಲೆಯೂ ಮನುಷ್ಯರ ಮೇಲೆಯೂ ದನಗಳ ಮೇಲೆಯೂ ಕೈ ಕಷ್ಟಗಳೆಲ್ಲಾದರ ಮೇಲೆಯೂ ಕ್ಷಾಮ ವನ್ನು ಕರೆದೆನು.

ಮಲಾಕಿ 2:3

ಇಗೋ, ನಾನು ನಿಮ್ಮ ಸಂತತಿಯನ್ನು ಕೆಡಿಸಿ, ನಿಮ್ಮ ಮುಖಗಳ ಮೇಲೆ ಕಸವನ್ನು ಚೆಲ್ಲುತ್ತೇನೆ; ನಿಮ್ಮ ಪವಿತ್ರ ಹಬ್ಬಗಳನ್ನು ಸಹ ಕಸವೆಂದು ಚೆಲ್ಲುತ್ತೇನೆ. ಆಗ ಒಬ್ಬನು ನಿಮ್ಮನ್ನು ಅದರೊಂದಿಗೆ ತೆಗೆದುಬಿಡುವನು.

Interlinear

Choose Theme