ಇಗೋ, ದೇವರು ಪರಿಶುದ್ಧನನ್ನು ತಿರಸ್ಕರಿಸು ವದಿಲ್ಲ; ಕೆಡುಕರಿಗೆ ಆತನು ಸಹಾಯ ಮಾಡುವದಿಲ್ಲ.
Cross references
ನೆನಪುಮಾಡಿಕೋ, ನಿರಪರಾಧಿಯಾಗಿ ನಾಶವಾದವನು ಯಾವನು? ನೀತಿ ವಂತರು ಕಡಿಯಲ್ಪಟ್ಟದ್ದು ಎಲ್ಲಿ?
ಇದೊಂದು ವಿಷಯ ಆದದರಿಂದ ನಾನು ಅದನ್ನು ಹೇಳಿದ್ದೇನೆ. ಪರಿಪೂರ್ಣರನ್ನೂ ಕೆಟ್ಟ ವರನ್ನೂ ಆತನು ನಾಶಮಾಡುತ್ತಾನೆ.
ಆಪತ್ತಿನ ದಿವಸಕ್ಕೆ ಕೆಟ್ಟ ವನು ಇರಿಸಲ್ಪಟ್ಟಿದ್ದಾನೆ. ಉಗ್ರದ ದಿವಸಕ್ಕೆ ಹೊರಗೆ ತರಲ್ಪಡುವನು.
ನೀತಿವಂತರು ಕೂಗು ತ್ತಾರೆ; ಆಗ ಕರ್ತನು ಕೇಳಿ ಅವರ ಎಲ್ಲಾ ಇಕ್ಕಟ್ಟುಗಳೊಳಗಿಂದ ಅವರನ್ನು ಬಿಡಿಸುತ್ತಾನೆ.
ಅವನು ಬಿದ್ದು ಹೋದಾಗ್ಯೂ ಪೂರ್ಣ ವಾಗಿ ಕೆಡವಲ್ಪಡುವದಿಲ್ಲ. ಯಾಕಂದರೆ ಕರ್ತನು ತನ್ನ ಕೈಯಿಂದ ಅವನನ್ನು ಮೇಲೆ ಎತ್ತುತ್ತಾನೆ.
ಸಂಪೂರ್ಣನನ್ನು ಗಮನಿಸು, ಯಥಾರ್ಥನನ್ನು ನೋಡು; ಆ ಮನುಷ್ಯನ ಅಂತ್ಯವು ಸಮಾಧಾನವಾಗಿದೆ.
ಕರ್ತನು ತನ್ನ ಜನರನ್ನು ತೊರೆಯನು; ಇಲ್ಲವೆ ತನ್ನ ಸ್ವಾಸ್ಥ್ಯವನ್ನು ಬಿಟ್ಟುಬಿಡನು.
ಯಥಾರ್ಥವಾಗಿ ನಡೆಯುತ್ತಿರುವವನು ದೃಢವಾಗಿ ನಡೆಯುತ್ತಾನೆ; ತನ್ನ ಮಾರ್ಗಗಳನ್ನು ಡೊಂಕು ಮಾಡು ತ್ತಿರುವವನು ಬಯಲಿಗೆ ಬರುವನು.
ಕರ್ತನು ತನ್ನ ಅಭಿಷಿಕ್ತನಾದ ಕೋರೆಷನಿಗೆ, ಯಾವನ ಕೈಯನ್ನು ಹಿಡಿದು, ಯಾವನ ಮುಂದೆ ಜನಾಂಗಗಳನ್ನು ಕೆಡವಿಬಿಟ್ಟು, ಅರಸುಗಳ ನಡುವುಗಳನ್ನು ಬಿಚ್ಚಿ ಯಾವನ ಮುಂದೆ ಎರಡು ಕದಗಳುಳ್ಳ ಬಾಗಿಲುಗಳನ್ನು ತೆರೆಯುತ್ತೇನೋ, ಯಾವನ ಮುಂದೆ ದ್ವಾರಗಳು ಮುಚ್ಚಲ್ಪಡುವವೋ ಅವನಿಗೆ ಹೇಳುವದೇನಂದರೆ--