ಅದು ಕೋಪದಿಂದಲೂ ಉಗ್ರತೆಯಿಂದಲೂ ನೆಲ ನುಂಗುತ್ತದೆ; ಇಲ್ಲವೆ ಅದು ತುತೂರಿಯ ಶಬ್ದಕ್ಕೆ --ಹಾ, ಹಾ, ಅನ್ನುತ್ತದೆ; ಅದು ನಂಬುವದಿಲ್ಲ.
Cross references
ನಾನು ಕರೆ ಯಲು ಆತನು ನನಗೆ ಉತ್ತರಕೊಟ್ಟರೂ ಆತನು ನನ್ನ ಶಬ್ಧಕ್ಕೆ ಕಿವಿಗೊಡುತ್ತಾನೆಂದು ನಂಬಲಾರೆನು.
ನಂಬಿಕೆ ಇಲ್ಲದವರ ಕಡೆಗೆ ನಗೆ ತೋರಿಸಿದೆನು; ನನ್ನ ಮುಖದ ಕಳೆಯನ್ನು ಅವರು ಕುಂದಿಸಲಿಲ್ಲ.ಅವರ ಮಾರ್ಗವನ್ನು ಆದುಕೊಂಡು ಪ್ರಧಾನನಾಗಿ ಕೂತು ಗೋಳಾಡುವವರನ್ನು ಸಂತೈಸುವವನಾಗಿಯೇ ಅರಸನಂತೆ ಸೈನ್ಯದಲ್ಲಿ ಆಸೀನನಾಗಿದ್ದೆನು.
ನಾನು ಮಾತಾಡುತ್ತೇನೆಂದು ಆತನಿಗೆ ತಿಳಿಸಲ್ಪಡಬೇಕೋ? ಮನುಷ್ಯನು ಮಾತಾಡಿದರೆ ನಿಜ ವಾಗಿ ನುಂಗಲ್ಪಡುವನು.
ನನ್ನ ಕರುಳುಗಳು, ನನ್ನ ಕರುಳುಗಳು! ನನ್ನ ಹೃದಯದಲ್ಲಿಯೇ ನೊಂದುಕೊಂಡಿದ್ದೇನೆ; ನನ್ನ ಹೃದ ಯವು ನನ್ನಲ್ಲಿ ಕೂಗುತ್ತದೆ, ಮೌನವಾಗಿರಲಾರೆನು; ಓ ನನ್ನ ಪ್ರಾಣವೇ, ತುತೂರಿಯ ಶಬ್ದವನ್ನೂ ಯುದ್ಧದ ಆರ್ಭಟವನ್ನೂ ನೀನು ಕೇಳಿದ್ದೀ.
ನಿನ್ನ ನಿವಾಸವು ಮೋಸದ ಮಧ್ಯದಲ್ಲಿ ಅದೆ; ಮೋಸದಿಂದಲೇ ನನ್ನನ್ನು ನಿರಾಕರಿಸು ತ್ತಾರೆಂದು ಕರ್ತನು ಅನ್ನುತ್ತಾನೆ.
ಪಟ್ಟಣದಲ್ಲಿ ಕೊಂಬನ್ನು ಊದಿದರೆ ಜನರು ಹೆದರುವದಿಲ್ಲವೇ? ಪಟ್ಟಣದಲ್ಲಿ ಕೇಡು ಇರು ವದಾದರೆ ಅದು ಕರ್ತನಿಂದ ಅಲ್ಲವೇ?
ಅವರ ಕುದುರೆಗಳು ಸಹ ಚಿರತೆಗಳಿಗಿಂತ ವೇಗ ವಾಗಿಯೂ ಸಂಜೆಯ ತೋಳಗಳಿಗಿಂತ ಚುರುಕಾ ಗಿಯೂ ಅವೆ; ಅವರ ಕುದುರೆ ಸವಾರರು ತಾವೇ ಹರಡಿಕೊಳ್ಳುವರು; ಅವರ ಸವಾರರು ದೂರದಿಂದ ಬರುವರು; ತಿನ್ನುವದಕ್ಕೆ ತ್ವರೆಪಡುವ ಹದ್ದಿನಂತೆ ಹಾರಿಬರುವರು.
ಆದರೆ ಅವರು ಸಂತೋಷದ ನಿಮಿತ್ತವಾಗಿ ಇನ್ನೂ ನಂಬದೆ ಆಶ್ಚರ್ಯಪಡುತ್ತಿರು ವಾಗ ಆತನು ಅವರಿಗೆ--ನಿಮ್ಮಲ್ಲಿ ಆಹಾರವೇನಾದರೂ ಇದೆಯೋ ಎಂದು ಕೇಳಿದನು.