Home Bibles ಯೋಬ 37:22 · ಕನ್ನಡ ಬೈಬಲ್
ಯೋಬ 37:22 · ಕನ್ನಡ ಬೈಬಲ್

ಉತ್ತರದಿಂದ ಉತ್ತಮ ಹವಾಮಾನ ಬರುತ್ತದೆ; ದೇವರ ಬಳಿಯಲ್ಲಿ ಭಯಂಕರವಾದ ಘನ ಉಂಟು.

Cross references

1 ದಿನವೃತ್ತಾಂತ 29:11

ಕರ್ತನೇ, ದೊಡ್ಡಸ್ತಿಕೆಯೂ ಪರಾಕ್ರಮವೂ ಸೌಂದರ್ಯವೂ ಜಯವೂ ಮಹಿಮೆಯೂ ನಿನ್ನದೇ; ಆಕಾಶಗಳಲ್ಲಿಯೂ ಭೂಮಿಯಲ್ಲಿಯೂ ಇರುವದೆಲ್ಲಾ ನಿನ್ನದೇ. ಕರ್ತನೇ, ರಾಜ್ಯವು ನಿನ್ನದು; ನೀನು ಸಮಸ್ತಕ್ಕೂ ತಲೆಯಾಗಿ ಉನ್ನತವಾಗಿದ್ದೀ. ಐಶ್ವರ್ಯವೂ ಘನವೂ ನಿನ್ನ ಬಳಿ ಯಿಂದ ಬರುತ್ತದೆ.

ಯೋಬ 40:10

ಗಾಂಭೀರ್ಯದಿಂದಲೂ ಘನತೆಯಿಂದ ಲೂ ನಿನ್ನನ್ನು ಅಲಂಕರಿಸಿಕೋ; ಮಹಿಮೆಯನ್ನೂ ಪ್ರಭೆಯನ್ನೂ ಧರಿಸಿಕೋ.

ಕೀರ್ತನೆಗಳು 29:4

ಕರ್ತನ ಧನ್ವಿಯು ಶಕ್ತಿ ಯುಳ್ಳದ್ದು; ಪ್ರಭೆಯುಳ್ಳದ್ದು.

ಕೀರ್ತನೆಗಳು 66:5

ಬನ್ನಿರಿ, ದೇವರ ಕಾರ್ಯಗಳನ್ನು ನೋಡಿರಿ; ಮನುಷ್ಯರ ಮಕ್ಕಳ ಕಡೆಗೆ ಆತನು ತನ್ನ ಕಾರ್ಯಗಳಲ್ಲಿ ಭಯಂಕರನಾಗಿದ್ದಾನೆ.

ಕೀರ್ತನೆಗಳು 68:7

ಓ ದೇವರೇ, ನೀನು ನಿನ್ನ ಜನರ ಮುಂದೆ ಹೊರಟು ಕಾಡಿನಲ್ಲಿ ನಡೆದಾಗ, ಸೆಲಾ.

ಕೀರ್ತನೆಗಳು 68:35

ಓ ದೇವರೇ, ನಿನ್ನ ಪರಿಶುದ್ಧ ಸ್ಥಳಗಳಿಂದ ನೀನು ಭಯಂಕರನಾಗಿದ್ದೀ; ಇಸ್ರಾಯೇಲಿನ ದೇವರಾದ ಈತನೇ ಜನರಿಗೆ ಬಲವನ್ನೂ ಶಕ್ತಿಯನ್ನೂ ಕೊಡುತ್ತಾನೆ. ದೇವರಿಗೆ ಸ್ತುತಿಯಾಗಿಲಿ.

ಕೀರ್ತನೆಗಳು 76:12

ಆತನು ಪ್ರಧಾನರ ಪ್ರಾಣವನ್ನು ತೆಗೆದು ಹಾಕು ತ್ತಾನೆ; ಭೂಮಿಯ ಅರಸುಗಳಿಗೆ ಭಯಂಕರ ನಾಗಿದ್ದಾನೆ.

ಕೀರ್ತನೆಗಳು 89:8

ಸೈನ್ಯಗಳ ದೇವರಾದ ಕರ್ತನೇ, ನಿನ್ನ ಹಾಗೆ ಶಕ್ತನಾದ ಕರ್ತನು ಯಾರು? ಇಲ್ಲವೆ ನಿನ್ನ ನಂಬಿಗಸ್ತಿಕೆಯು ನಿನ್ನ ಸುತ್ತಲೂ ಅದೆ.

ಕೀರ್ತನೆಗಳು 93:1

ಕರ್ತನು ಆಳುತ್ತಾನೆ, ಆತನು ಘನತೆಯನ್ನು ಹೊದ್ದುಕೊಂಡಿದ್ದಾನೆ; ಕರ್ತನು ಬಲ ದಿಂದ ಹೊದ್ದುಕೊಂಡಿದ್ದಾನೆ, ಅದರಿಂದ ತನ್ನ ನಡು ವನ್ನು ಕಟ್ಟಿಕೊಂಡಿದ್ದಾನೆ; ಲೋಕವು ಸಹ ಸ್ಥಿರವಾಗಿದೆ; ಕದಲುವದಿಲ್ಲ.

ಕೀರ್ತನೆಗಳು 104:1

ಓ ನನ್ನ ಮನವೇ, ಕರ್ತನನ್ನು ಸ್ತುತಿಸು; ನನ್ನ ದೇವರಾದ ಓ ಕರ್ತನೇ, ನೀನು ಬಹಳ ದೊಡ್ಡವನಾಗಿದ್ದು ಗೌರವ ವನ್ನೂ ಪ್ರಭೆಯನ್ನೂ ಹೊದ್ದುಕೊಂಡಿದ್ದೀ.

ಕೀರ್ತನೆಗಳು 145:5

ನಿನ್ನ ಮಹಿಮೆಯ ಘನದ ಪ್ರಭೆಯ ವಿಷಯ ವಾಗಿಯೂ ನಿನ್ನ ಅದ್ಭುತಕಾರ್ಯಗಳ ವಿಷಯ ವಾಗಿಯೂ

ಸಾಮೇತಿಗಳು 25:23

ಉತ್ತರದ ಗಾಳಿಯು ಮಳೆಯನ್ನು ನೂಕುತ್ತದೆ; ಅದರಂತೆಯೇ ಚಾಡಿಯ ನಾಲಿಗೆ ಕೋಪದ ಮುಖ ಮಾಡುವದೆ.

ಯೆಶಾಯ 2:10

ಕರ್ತನ ಭಯಕ್ಕೂ ಆತನ ಮಹಿಮೆಯ ಘನತೆಗೂ ಬಂಡೆಗಳಲ್ಲಿ ಸೇರಿಕೋ, ದೂಳಿನಲ್ಲಿ ನೀನು ಅಡಗಿಕೋ.

ಯೆಶಾಯ 2:19

ಕರ್ತನು ಭೂಮಿಯನ್ನು ಭಯಂಕರವಾಗಿ ನಡುಗಿಸಲು ಏಳು ವಾಗ ಕರ್ತನಿಗೂ ಆತನ ಮಹಿಮೆಗೂ ಆತನ ಘನಕ್ಕೂ ಹೆದರಿ ಬಂಡೆಗಳ ಸಂದುಗಳಿಗೂ ಭೂಮಿಯ ಗವಿಗ ಳಿಗೂ ಅವರು ಸೇರಿಕೊಳ್ಳುವರು.

ಮೀಕ 5:4

ಆತನು ಕರ್ತನ ಬಲದಲ್ಲಿಯೂ ತನ್ನ ದೇವರಾದ ಕರ್ತನ ಹೆಸರಿನಲ್ಲಿ ಘನತೆಯಲ್ಲಿಯೂ ನಿಂತುಕೊಂಡು ಮೇಯಿಸುವನು; ಮತ್ತು ಅವರು ನೆಲೆಯಾಗಿರುವರು, ಈಗ ಆತನು ಭೂಮಿಯ ಅಂತ್ಯಗಳ ಮಟ್ಟಿಗೂ ದೊಡ್ಡವನಾಗಿ ರುವನು.

ನಹೂಮ 1:3

ಕರ್ತನು ಕೋಪಿಸುವದರಲ್ಲಿ ನಿಧಾನ ಮಾಡುವವನಾದರೂ ಶಕ್ತಿಯಲ್ಲಿ ಮಹತ್ತಾದವನು; ದುರ್ಮಾರ್ಗದವರನ್ನು ಎಷ್ಟು ಮಾತ್ರಕ್ಕೂ ನಿರ್ಮಲರೆಂದು ತೀರ್ಮಾನಿಸ ದವನು; ಕರ್ತನ ಮಾರ್ಗವು ಸುಳಿಗಾಳಿಯಲ್ಲಿಯೂ ಬಿರುಗಾಳಿಯಲ್ಲಿಯೂ ಉಂಟು; ಮೇಘಗಳು ಆತನ ಕಾಲುಗಳ ಧೂಳೇ.

ಹಬಕ್ಕೂಕ 3:3

ದೇವರು ತೇಮಾನಿ ನಿಂದಲೂ ಪರಿಶುದ್ಧನು ಪಾರಾನ್‌ ಪರ್ವತದಿಂದಲೂ ಬಂದನು. ಸೆಲಾ. ಆತನ ಮಹಿಮೆ ಆಕಾಶಗಳನ್ನು ಮುಚ್ಚಿತು: ಆತನ ಸ್ತೋತ್ರವು ಭೂಮಿಯನ್ನು ತುಂಬಿ ಸಿತು.

ಹೆಬ್ರಿಯರಿಗೆ 1:3

ಈತನು ದೇವರ ಮಹಿಮೆಯ ಪ್ರಕಾಶವೂ ಆತನ ವ್ಯಕ್ತಿತ್ವದ ಪ್ರತಿರೂಪವೂ ತನ್ನ ಬಲವುಳ್ಳ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ತಾನೇ ನಮ್ಮ ಪಾಪಗಳನ್ನು ತೊಳೆದ ಮೇಲೆ ಉನ್ನತದೊಳಗೆ ಮಹೋನ್ನತನ ಬಲ ಗಡೆಯಲ್ಲಿ ಕೂತುಕೊಂಡನು.

ಹೆಬ್ರಿಯರಿಗೆ 12:29

ಯಾಕಂದರೆ ನಮ್ಮ ದೇವರು ದಹಿಸುವ ಅಗ್ನಿಯಾಗಿದ್ದಾನೆ.

ಯೂದ 1:25

ಒಬ್ಬನೇ ಜ್ಞಾನವುಳ್ಳ ನಮ್ಮ ರಕ್ಷಕನಾದ ದೇವರಿಗೆ ಪ್ರಭಾವ ಮಹತ್ವ ಆಧಿಪತ್ಯ ಅಧಿಕಾರಗಳು ಈಗಲೂ ಯಾವಾಗಲೂ ಇರಲಿ. ಆಮೆನ್‌.

Interlinear

Choose Theme