Home Bibles ☰ Books ಯೋಬ 36:24 · ಕನ್ನಡ ಬೈಬಲ್
ಯೋಬ 36:24 · ಕನ್ನಡ ಬೈಬಲ್

ಮನುಷ್ಯನು ನೋಡುವ ಆತನ ಕೃತ್ಯಗಳನ್ನು ಘನ ಪಡಿಸುವದಕ್ಕೆ ನೆನಸಿಕೋ.

Cross references

ದ್ವಿತೀಯೋಪದೇಶಕಾಂಡ 4:19

ನೀನು ನಿನ್ನ ಕಣ್ಣು ಗಳನ್ನು ಆಕಾಶದ ಕಡೆಗೆ ಎತ್ತಿ ಸೂರ್ಯ, ಚಂದ್ರ, ನಕ್ಷತ್ರಗಳ ಆಕಾಶ ಸೈನ್ಯವನ್ನೆಲ್ಲಾ ನೋಡಲಾಗಿ ನಿನ್ನ ದೇವರಾದ ಕರ್ತನು ಆಕಾಶದ ಕೆಳಗಿರುವ ಎಲ್ಲಾ ಜನಾಂಗಗಳಿಗೆ ಹಂಚಿಕೊಟ್ಟ ಇವುಗಳಿಗೆ ಅಡ್ಡಬಿದ್ದು ಇವುಗಳನ್ನು ಸೇವಿಸುವದಕ್ಕೆ ನಡಿಸಲ್ಪಡದಂತೆಯೂ ನೋಡಿಕೊಳ್ಳಿರಿ.

ಯೋಬ 12:13

ಜ್ಞಾನವೂ ಪರಾಕ್ರಮವೂ ಆತನಲ್ಲಿವೆ; ಆಲೋ ಚನೆಯೂ ಗ್ರಹಿಕೆಯೂ ಆತನವೇ.

ಯೋಬ 26:5

ಸತ್ತು ಹೋದವುಗಳೂ ಅವುಗಳ ನಿವಾಸಿಗಳೂ ನೀರುಗಳ ಕೆಳಗೆ ರೂಪಿಸಲ್ಪಡುತ್ತವೆ.

ಕೀರ್ತನೆಗಳು 19:1

ಆಕಾಶಗಳು ದೇವರ ಮಹಿಮೆಯನ್ನು ಸಾರುತ್ತವೆ; ಅಂತರಿಕ್ಷವು ಆತನ ಕೈ ಕೆಲಸ ವನ್ನು ತೋರಿಸುತ್ತದೆ.

ಕೀರ್ತನೆಗಳು 28:5

ಕರ್ತನ ಕೃತ್ಯಗಳನ್ನೂ ಆತನ ಕೈಗಳ ಕೆಲಸವನ್ನೂ ಅವರು ಲಕ್ಷಿಸುವದಿಲ್ಲ, ಆದದರಿಂದ ಅವರನ್ನು ವೃದ್ಧಿಗೊಳಿಸದೆ ನಿರ್ಮೂಲಮಾಡು.

ಕೀರ್ತನೆಗಳು 34:3

ನನ್ನ ಸಂಗಡ ಕರ್ತ ನನ್ನು ಘನಪಡಿಸಿರಿ. ನಾವು ಒಟ್ಟಾಗಿ ಆತನ ಹೆಸ ರನ್ನು ಘನಪಡಿಸೋಣ.

ಕೀರ್ತನೆಗಳು 59:16

ಆದರೆ ನಾನು ನಿನ್ನ ಬಲದ ವಿಷಯವಾಗಿ ಹಾಡುವೆನು; ಹೌದು, ಹೊತ್ತಾರೆ ನಿನ್ನ ಕೃಪೆಗಾಗಿ ಉತ್ಸಾಹಪಡುವೆನು; ನೀನು ನನಗೆ ದುರ್ಗ ವಾಗಿಯೂ ನನ್ನ ಇಕ್ಕಟ್ಟಿನ ದಿವಸದಲ್ಲಿ ಆಶ್ರಯ ವಾಗಿಯೂ ಇದ್ದೀ.ಓ ನನ್ನ ಬಲವೇ, ನಿನ್ನನ್ನು ಕೀರ್ತಿಸುವೆನು; ದೇವರು ನನ್ನ ದುರ್ಗವೂ ಕರುಣೆ ಯುಳ್ಳ ನನ್ನ ದೇವರೂ ಆಗಿದ್ದಾನೆ.

ಕೀರ್ತನೆಗಳು 72:18

ಒಬ್ಬನೇ ಅದ್ಭುತಗಳನ್ನು ಮಾಡುವ ಇಸ್ರಾಯೇಲಿನ ದೇವರಾಗಿರುವ ಕರ್ತನಾದ ದೇವರಿಗೆ ಸ್ತೋತ್ರವಾಗಲಿ.

ಕೀರ್ತನೆಗಳು 86:8

ಕರ್ತನೇ, ದೇವರುಗಳಲ್ಲಿ ನಿನ್ನ ಹಾಗೆ ಒಬ್ಬನೂ ಇಲ್ಲ; ನಿನ್ನ ಕೆಲಸಗಳ ಹಾಗೆ ಒಂದೂ ಇಲ್ಲ.

ಕೀರ್ತನೆಗಳು 92:4

ಕರ್ತನೇ, ನಿನ್ನ ಕ್ರಿಯೆಯಿಂದ ನನ್ನನ್ನು ಸಂತೋಷ ಪಡಿಸಿದ್ದೀ. ನಿನ್ನ ಕೈಕೆಲಸಗಳಲ್ಲಿ ನಾನು ಜಯ ಧ್ವನಿಗೈಯುತ್ತೇನೆ.

ಕೀರ್ತನೆಗಳು 104:24

ಓ ಕರ್ತನೇ, ನಿನ್ನ ಕೆಲಸಗಳು ಎಷ್ಟೋ ಉಂಟು! ಅವುಗಳನ್ನೆಲ್ಲಾ ಜ್ಞಾನದಿಂದ ಉಂಟು ಮಾಡಿದ್ದೀ; ಭೂಮಿಯು ನಿನ್ನ ಸಂಪತ್ತಿನಿಂದ ತುಂಬಿದೆ.

ಕೀರ್ತನೆಗಳು 107:8

ಅವರು ಕರ್ತನನ್ನು ಆತನ ಒಳ್ಳೇತನಕ್ಕೋಸ್ಕರವೂ ಮನುಷ್ಯನ ಮಕ್ಕಳಿಗೆ ಆತನು ಮಾಡುವ ಅದ್ಭುತ ಗಳಿಗೋಸ್ಕರವೂ ಕೊಂಡಾಡಲಿ.

ಕೀರ್ತನೆಗಳು 107:15

ಅವರು ಕರ್ತನನ್ನು ಆತನ ಒಳ್ಳೇತನಕ್ಕೋಸ್ಕರವೂ ಆತನು ಮನುಷ್ಯನ ಮಕ್ಕಳಿಗೆ ಮಾಡುವ ಅದ್ಭುತಗಳಿಗೋ ಸ್ಕರವೂ ಕೊಂಡಾಡಲಿ.

Interlinear

Choose Theme