Home Bibles ಯೋಬ 35:7 · ಕನ್ನಡ ಬೈಬಲ್
ಯೋಬ 35:7 · ಕನ್ನಡ ಬೈಬಲ್

ನೀನು ನೀತಿವಂತನಾಗಿ ದ್ದರೆ ಆತನಿಗೇನು ಕೊಡುವಿ? ಇಲ್ಲವೆ ಆತನು ನಿನ್ನ ಕೈಯಿಂದ ಏನು ತೆಗೆದುಕೊಳ್ಳುವನು?

Cross references

1 ದಿನವೃತ್ತಾಂತ 29:14

ಆದರೆ ನಾವು ಈ ಪ್ರಕಾರ ಇಷ್ಟಪೂರ್ತಿಯಾಗಿ ಅರ್ಪಿಸುವದಕ್ಕೆ ಶಕ್ತಿಯನ್ನು ಹೊಂದಲು ನಾನೆಷ್ಟರವನು? ನನ್ನ ಜನರು ಎಷ್ಟರವರು? ಯಾಕಂದರೆ ಸಮಸ್ತವೂ ನಿನ್ನಿಂದಲೇ; ನೀನು ಕೊಟ್ಟದ್ದನ್ನೇ ನಿನಗೆ ಅರ್ಪಿಸಿದೆವು.

ಯೋಬ 22:2

ಮನುಷ್ಯನು ದೇವರಿಗೆ ಪ್ರಯೋಜನಕರವಾಗಿರುವನೋ? ಬುದ್ಧಿ ವಂತನು ಪ್ರಯೋಜನಕರವಾಗಿರುವದು ತನಗೆ ಸರಿಯೋ?

ಕೀರ್ತನೆಗಳು 16:2

ನೀನೇ ನನ್ನ ಕರ್ತನು; ನನ್ನ ಒಳ್ಳೇತನ ನಿನಗೆ ಮಾತ್ರವಲ್ಲದೆ

ಸಾಮೇತಿಗಳು 9:12

ನೀನು ಜ್ಞಾನಿಯಾ ಗಿದ್ದರೆ ನಿನ್ನಷ್ಟಕ್ಕೆ ನೀನೇ ಜ್ಞಾನಿಯಾಗಿರುವಿ; ನೀನು ನಿಂದಿಸುವವನಾದರೆ ನೀನೇ ಅದನ್ನು ಅನುಭವಿಸುವಿ.

ಲೂಕ 17:10

ಅದೇ ರೀತಿಯಾಗಿ ನಿಮಗೆ ಆಜ್ಞಾಪಿಸಿದವುಗಳನ್ನೆಲ್ಲಾ ನೀವು ಮಾಡಿದ ಮೇಲೆ-- ನಾವು ನಿಷ್ಪ್ರಯೋಜಕರಾದ ಆಳುಗಳು; ಯಾಕಂದರೆ ನಾವು ಮಾಡಬೇಕಾದದ್ದನ್ನೇ ಮಾಡಿದ್ದೇವೆ ಎಂದು ನೀವು ಅನ್ನಿರಿ ಎಂದು ಹೇಳಿದನು.

ರೋಮಾಪುರದವರಿಗೆ 11:35

ಇಲ್ಲವೆ ಮೊದಲು ಆತನಿಗೆ ಕೊಟ್ಟು ಪ್ರತಿಫಲವನ್ನು ತೆಗೆದುಕೊಳ್ಳುವವನು ಯಾರು?ಸಮಸ್ತವು ಆತನಿಂದಲೂ ಆತನ ಮುಖಾಂತರವೂ ಆತನಿಗಾಗಿಯೂ ಇರುತ್ತದೆ; ಆತನಿಗೆ ಸದಾಕಾಲವೂ ಮಹಿಮೆಯಾಗಲಿ. ಆಮೆನ್‌.

Interlinear

Choose Theme