ನ್ಯಾಯವನ್ನು ನಾವು ಆದುಕೊಳ್ಳೋಣ; ಒಳ್ಳೇದೇನೆಂದು ನಮ್ಮೊಳಗೆ ನಾವೇ ತಿಳಿದುಕೊಳ್ಳೋಣ.
Cross references
ಆಗ ಅದನ್ನು ನೋಡುವ ವರೆಲ್ಲಾ--ಇಸ್ರಾಯೇಲ್ ಮಕ್ಕಳು ಐಗುಪ್ತದಿಂದ ಬಂದ ದಿವಸ ಮೊದಲುಗೊಂಡು ಈ ಪರ್ಯಂತರ ಇಂಥಾ ಕಾರ್ಯವು ಆದದ್ದೂ ಇಲ್ಲ, ಕಾಣಲ್ಪಟ್ಟದ್ದೂ ಇಲ್ಲ. ಈ ಸಂಗತಿಯನ್ನು ಮನಸ್ಸಿಗೆ ತಂದು ವಿಚಾರಿಸತಕ್ಕದ್ದು ಅಂದುಕೊಂಡರು.
ಇಗೋ, ನೀವೆಲ್ಲರು ಇಸ್ರಾಯೇಲ್ ಮಕ್ಕಳಾಗಿದ್ದೀರಿ; ನಿಮ್ಮ ಮಾತನ್ನೂ ಆಲೋಚನೆಯನ್ನೂ ಇಲ್ಲಿ ಹೇಳಿ ಕೊಡಿರಿ ಅಂದನು.
ದುಷ್ಟರಿಗಾಗಿ ಯೋಬನ ಪ್ರತ್ಯುತ್ತರ ಗಳಿಗೋಸ್ಕರ ಅವನು ಕಡೇ ವರೆಗೆ ಶೋಧಿಸಲ್ಪಡ ಬೇಕೆಂದು ನನ್ನ ಅಪೇಕ್ಷೆ.ತನ್ನ ಪಾಪಕ್ಕೆ ದ್ರೋಹ ವನ್ನು ಕೂಡಿಸುತ್ತಾನೆ; ನಮ್ಮ ಮಧ್ಯದಲ್ಲಿ ಚಪ್ಪಾಳೆ ತಟ್ಟುತ್ತಾನೆ; ದೇವರಿಗೆ ವಿರೋಧವಾಗಿ ತನ್ನ ಮಾತು ಗಳನ್ನು ಅಧಿಕಮಾಡುತ್ತಾನೆ.
ಅವನ ಮೇಲೆ ಜ್ಞಾನ ವಿವೇಕ ದಾಯಕ ಆತ್ಮ, ಆಲೋಚನಾ ಪರಾಕ್ರಮದ ಆತ್ಮ,ತಿಳುವಳಿಕೆಯ ಆತ್ಮ ಕರ್ತನ ಭಯದ ಆತ್ಮ, ಅಂತೂ ಕರ್ತನ ಆತ್ಮನು ನೆಲೆಯಾಗುವನು;
ತೋರಿಕೆಗೆ ಅನುಸಾರವಾಗಿ ನ್ಯಾಯತೀರಿ ಸಬೇಡಿರಿ. ಆದರೆ ನೀತಿಯ ನ್ಯಾಯತೀರ್ಪನ್ನು ಮಾಡಿರಿ ಅಂದನು.
ಇಹಲೋಕವನ್ನು ಅನುಸರಿಸದೆ ಉತ್ತಮ ವಾದದ್ದೂ ಮೆಚ್ಚಿಕೆಯಾದದ್ದೂ ಪರಿಪೂರ್ಣ ವಾದದ್ದೂ ಆಗಿರುವ ದೇವರ ಚಿತ್ತವೇನೆಂದು ನೀವು ವಿವೇಚಿಸಿ ತಿಳಿದುಕೊಳ್ಳುವಂತೆ ನೂತನ ಮನಸ್ಸನ್ನು ಹೊಂದಿಕೊಂಡು ರೂಪಾಂತರಗೊಂಡವರಾಗಿರ್ರಿ.
ಪರಿಶುದ್ಧರು ಲೋಕಕ್ಕೆ ತೀರ್ಪುಮಾಡು ವರೆಂಬದು ನಿಮಗೆ ತಿಳಿಯದೋ? ಲೋಕವು ನಿಮ್ಮಿಂದ ತೀರ್ಪು ಹೊಂದಬೇಕಾಗಿರುವಾಗ ಅತ್ಯಲ್ಪವಾದವುಗಳ ವಿಷಯದಲ್ಲಿ ತೀರ್ಪುಮಾಡು ವದಕ್ಕೆ ನೀವು ಅಯೋಗ್ಯರಾಗಿದ್ದೀರೋ?
ಪೇತ್ರನು ಅಂತಿಯೋಕ್ಯಕ್ಕೆ ಬಂದಾಗ ಅವನು ದೋಷಿಯಾಗಿ ಕಾಣಿಸಿಕೊಂಡದ್ದರಿಂದ ನಾನು ಅವ ನನ್ನು ಮುಖಾಮುಖಿಯಾಗಿ ಎದುರಿಸಿದೆನು.
ಆದರೆ ಎಲ್ಲವನ್ನು ಪರಿಶೋಧಿಸಿ ಒಳ್ಳೇದನ್ನೇ ಭದ್ರವಾಗಿ ಹಿಡಿದುಕೊಳ್ಳಿರಿ.