Home Bibles ಯೋಬ 32:13 · ಕನ್ನಡ ಬೈಬಲ್
ಯೋಬ 32:13 · ಕನ್ನಡ ಬೈಬಲ್

ನಾವು ಜ್ಞಾನವನ್ನು ಕಂಡುಕೊಂಡೆವು; ಮನು ಷ್ಯನಲ್ಲ, ದೇವರು ಅವನನ್ನು ತಳ್ಳುತ್ತಾನೆಂದು ಹೇಳ ಬೇಡಿರಿ.

Cross references

ಆದಿಕಾಂಡ 14:23

ನಿನ್ನವುಗಳಲ್ಲಿ ನೂಲು ಮೊದಲುಗೊಂಡು ಕೆರದ ಬಾರನ್ನು ಸಹ ನಾನು ತಕ್ಕೊಳ್ಳುವದಿಲ್ಲ. ಯಾಕಂದರೆ--ನಾನು ಅಬ್ರಾಮನನ್ನು ಐಶ್ವರ್ಯವಂತನನ್ನಾಗಿ ಮಾಡಿದ್ದೇನೆ ಎಂದು ನೀನು ಹೇಳಬಾರದು.ಯೌವನಸ್ಥರು ಊಟಮಾಡಿದ್ದು, ನನ್ನ ಸಂಗಡ ಹೋದ ಆನೇರ ಎಷ್ಕೋಲ ಮಮ್ರೆ ಎಂಬ ಈ ಮನುಷ್ಯರ ಪಾಲು ಮಾತ್ರ ಇರಲಿ; ಇವರು ತಮ್ಮ ಪಾಲನ್ನು ತಕ್ಕೊಳ್ಳಲಿ ಅಂದನು.

ನ್ಯಾಯಾಧಿಪತಿಗಳು 7:2

ಆಗ ಕರ್ತನು ಗಿದ್ಯೋನನಿಗೆ--ನಾನು ಮಿದ್ಯಾನ್ಯ ರನ್ನು ಜನರ ಕೈಗಳಿಗೆ ಒಪ್ಪಿಸಿಕೊಡುವದಕ್ಕೆ ನಿನ್ನ ಸಂಗಡ ಇರುವ ಜನರು ಬಹಳವಾಗಿದ್ದಾರೆ; ಇಸ್ರಾಯೇಲ್ಯರುನನ್ನ ಕೈ ನನ್ನನ್ನು ರಕ್ಷಿಸಿತು ಎಂದು ನನಗೆ ವಿರೋಧವಾಗಿ ಹೆಚ್ಚಳ ಪಟ್ಟಾರು.

ಯೋಬ 1:21

ಬೆತ್ತಲೆಯಾಗಿ ನನ್ನ ತಾಯಿಯ ಗರ್ಭ ದಿಂದ ಹೊರಟು ಬಂದೆನು, ಬೆತ್ತಲೆಯಾಗಿ ತಿರುಗಿ ಹೋಗಬೇಕು. ಕರ್ತನು ಕೊಟ್ಟನು, ಕರ್ತನು ತಕ್ಕೊಂಡನು; ಕರ್ತನ ಹೆಸರಿಗೆ ಸ್ತೋತ್ರ ಅಂದನು. 22ಇದೆಲ್ಲಾದರಲ್ಲಿ ಯೋಬನು ಪಾಪಮಾಡಲಿಲ್ಲ. ದೇವರ ಮೇಲೆ ತಪ್ಪನ್ನು ಹೊರಿಸಲೂ ಇಲ್ಲ.ಇದೆಲ್ಲಾದರಲ್ಲಿ ಯೋಬನು ಪಾಪಮಾಡಲಿಲ್ಲ. ದೇವರ ಮೇಲೆ ತಪ್ಪನ್ನು ಹೊರಿಸಲೂ ಇಲ್ಲ.

ಯೋಬ 2:10

ಆದರೆ ಅವನು ಅವಳಿಗೆ--ಮೂರ್ಖ ಹೆಂಗಸರಲ್ಲಿ ಒಬ್ಬಳು ಮಾತನಾಡುವ ಪ್ರಕಾರ ನೀನೂ ಮಾತನಾಡುವಿಯಾ? ದೇವರ ಕೈಯಿಂದ ಒಳ್ಳೇದನ್ನು ಹೊಂದುತ್ತೇವಲ್ಲಾ? ಕೆಟ್ಟದ್ದನ್ನು ಹೊಂದುವದು ಬೇಡವೋ ಅಂದನು. ಇವೆಲ್ಲವುಗಳಲ್ಲಿ ಯೋಬನು ತನ್ನ ತುಟಿಗಳಿಂದ ಪಾಪಮಾಡಲಿಲ್ಲ.

ಯೋಬ 4:9

ದೇವರ ಸಿಡಿತದಿಂದ ಅವರು ನಾಶವಾಗುತ್ತಾರೆ. ಆತನ ಮೂಗಿನ ಉಸಿರಿ ನಿಂದ ಅವರು ಕ್ಷಯಿಸಿಹೋಗುತ್ತಾರೆ,

ಯೋಬ 6:4

ಸರ್ವ ಶಕ್ತನ ಬಾಣಗಳು ನನ್ನಲ್ಲಿ ಇವೆ; ಅವುಗಳ ವಿಷವು ನನ್ನ ಆತ್ಮವನ್ನು ಕುಡಿಯುತ್ತವೆ; ದೇವರ ಹೆದರಿಕೆಗಳು ನನಗೆ ವಿರೋಧವಾಗಿ ನನ್ನ ಸುತ್ತಲೂ ಇಳಿದವು.

ಯೋಬ 12:2

ನಿಸ್ಸಂದೇಹವಾಗಿ ನೀವೇ ಆ ಜನರು; ನಿಮ್ಮ ಸಂಗಡಲೇ ಜ್ಞಾನವು ಸಾಯುವದು.

ಯೋಬ 15:8

ದೇವರ ಗುಟ್ಟನ್ನು ಕೇಳಿದ್ದೀಯೋ? ಜ್ಞಾನವನ್ನು ನಿನಗೆ ನೀನೇ ಇಟ್ಟುಕೊಂಡಿದ್ದೀಯೋ?

ಯೋಬ 19:6

ದೇವರು ನನ್ನನ್ನು ತೊಲಗಿಸಿಬಿಟ್ಟು, ತನ್ನ ಬಲೆಯನ್ನು ನನ್ನ ಮೇಲೆ ಬೀಸಿದನೆಂದು ತಿಳಿಯಬೇಕಷ್ಟೆ.

ಯೋಬ 19:21

ನನ್ನ ಸ್ನೇಹಿತರಾದ ನೀವೇ ನನ್ನನ್ನು ಕನಿಕರಿಸಿರಿ, ನನ್ನನ್ನು ಕನಿಕರಿಸಿರಿ; ಯಾಕಂದರೆ ದೇವರ ಕೈ ನನ್ನನ್ನು ಮುಟ್ಟಿದೆ.

ಯೆಶಾಯ 5:21

ತಮ್ಮ ಸ್ವಂತ ಕಣ್ಣುಗಳಲ್ಲಿ ಜ್ಞಾನಿಗಳೂ ಸ್ವಂತ ದೃಷ್ಟಿಯಲ್ಲಿ ವಿವೇಕಿಗಳೂ ಆಗಿರುವವರಿಗೆ ಅಯ್ಯೋ!

ಯೆಶಾಯ 48:5

ಆದದರಿಂದಲೇ ಈ ಕಾರ್ಯ ಗಳನ್ನು ನನ್ನ ವಿಗ್ರಹವು ನಡಿಸಿದೆ, ನನ್ನ ಕೆತ್ತಿದ ವಿಗ್ರಹ ಮತ್ತು ಎರಕದ ವಿಗ್ರಹ ಇವುಗಳನ್ನು ವಿಧಿಸಿದೆ ಎಂದು ನೀನು ಹೇಳಿಕೊಳ್ಳದಂತೆ ನಾನು ಪುರಾತನ ಕಾಲದಲ್ಲಿಯೇ ತಿಳಿಸಿದೆನು.

ಯೆಶಾಯ 48:7

ಆರಂಭದಲ್ಲಿ ಆಗದಿದ್ದವುಗಳು ಈಗ ಉಂಟಾಗಿವೆ; ಇಗೋ, ಅವು ನನಗೆ ತಿಳಿದಿದ್ದವೆಂದು ನೀನು ಹೇಳದಂತೆ ಈ ದಿನಕ್ಕೆ ಮುಂಚೆಯೇ ಅವು ಗಳನ್ನು ಕುರಿತು ನಿನಗೆ ಕೇಳಗೊಡಿಸಲಿಲ್ಲ.

ಯೆರೆಮಿಯ 9:23

ಕರ್ತನೇ, ಮನುಷ್ಯನ ಮಾರ್ಗವು ತನ್ನಲ್ಲಿಲ್ಲವೆಂದೂ ತನ್ನ ಹೆಜ್ಜೆ ನೆಟ್ಟಗೆ ಮಾಡುವದು ನಡೆಯುವ ಮನುಷ್ಯನದಲ್ಲವೆಂದೂ ಬಲ್ಲೆನು.

ಯೆಹೆಜ್ಕೇಲ 28:3

ಇಗೋ, ನೀನು ದಾನಿಯೇಲನಿಗಿಂತ ಜ್ಞಾನಿಯಾಗಿರುವೆ; ರಹಸ್ಯವಾದದ್ದು ಏನಿದ್ದರೂ ನಿನಗೆ ಮರೆಯಾಗಿರುವದಿಲ್ಲ.

ಜೆಕರ್ಯ 12:7

ಇದಲ್ಲದೆ ದಾವೀದನ ಮನೆಯ ಘನತೆಯೂ ಯೆರೂಸಲೇಮಿನ ನಿವಾಸಿಗಳ ಗೌರವವೂ ಯೆಹೂದಕ್ಕೆ ವಿರೋಧವಾಗಿ ಹೆಚ್ಚಳ ಪಡದ ಹಾಗೆ ಕರ್ತನು ಮೊದಲು ಯೆಹೂದದ ಗುಡಾರಗಳನ್ನು ರಕ್ಷಿಸುವನು.

ಯೋಹಾನ 19:11

ಅದಕ್ಕೆ ಯೇಸು--ಮೇಲಿನಿಂದ ನಿನಗೆ ಕೊಡಲ್ಪಡದಿದ್ದರೆ ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ. ಆದಕಾರಣ ನನ್ನನ್ನು ನಿನಗೆ ಒಪ್ಪಿಸಿದವನಿಗೆ ಹೆಚ್ಚಾದ ಪಾಪ ಉಂಟು ಎಂದು ಉತ್ತರ ಕೊಟ್ಟನು.

1 ಕೊರಿಂಥದವರಿಗೆ 1:19

ನಾನು ಜ್ಞಾನಿಗಳ ಜ್ಞಾನವನ್ನು ನಾಶಮಾಡುವೆನು; ವಿವೇಕಿಗಳ ವಿವೇಕವನ್ನು ಇಲ್ಲದಂತಾಗ ಮಾಡುವೆನು ಎಂದು ಬರೆಯಲ್ಪಟ್ಟಿದೆ.

1 ಕೊರಿಂಥದವರಿಗೆ 1:27

ಆದರೆ ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿದ್ದಾನೆ; ದೇವರು ಬಲಿಷ್ಟರನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬಲಹೀನರನ್ನು ಆರಿಸಿಕೊಂಡಿದ್ದಾನೆ;

1 ಕೊರಿಂಥದವರಿಗೆ 3:18

ಯಾವನೂ ತನ್ನನ್ನು ತಾನೇ ಮೋಸಗೊಳಿಸ ದಿರಲಿ; ನಿಮ್ಮಲ್ಲಿ ಯಾವನಾದರೂ ಈ ಲೋಕ ಸಂಬಂಧವಾಗಿ ಜ್ಞಾನಿಯಾಗಿದ್ದೇನೆಂದು ಭಾವಿಸಿ ಕೊಂಡರೆ ಜ್ಞಾನಿಯಾಗುವಂತೆ ಹುಚ್ಚನಾಗಲಿ.

Interlinear

Choose Theme