ಆಗ ಆ ಮೂರು ಜನರು ಯೋಬನಿಗೆ ಉತ್ತರ ಕೊಡುವದನ್ನು ಬಿಟ್ಟರು; ಯಾಕಂ ದರೆ ಅವನು ತನ್ನ ದೃಷ್ಟಿಗೆ ನೀತಿವಂತನಾಗಿದ್ದನು.
Cross references
ತಿರುಗಿಕೊಳ್ಳಿರಿ, ಅನ್ಯಾಯವಾಗದಿರಲಿ; ಹೌದು, ತಿರುಗಿಕೊಳ್ಳಿರಿ; ಇನ್ನು ನನ್ನ ನೀತಿಯು ಇವುಗಳಲ್ಲಿ ಇರುವದು.ನನ್ನ ನಾಲಿಗೆಯಲ್ಲಿ ಅನ್ಯಾಯ ಉಂಟೋ? ನನ್ನ ಅಂಗಳವು ಕೇಡನ್ನು ರುಚಿ ನೋಡುವದಿಲ್ಲವೋ?
ನಾನು ದೇವರಿಗೆ ಹೀಗೆ ಹೇಳುತ್ತೇನೆ--ನನ್ನನ್ನು ಖಂಡಿಸಬೇಡ; ಯಾವದಕ್ಕೋ ಸ್ಕರ ನನ್ನ ಸಂಗಡ ವ್ಯಾಜ್ಯಮಾಡುತ್ತೀ ಎಂದು ನನಗೆ ತಿಳಿಸು.
ನಾನು ದುಷ್ಟನಲ್ಲವೆಂದೂ ನಿನ್ನ ಕೈಯಿಂದ ತಪ್ಪಿಸುವವನಿಲ್ಲ ವೆಂದೂ ನೀನು ತಿಳುಕೊಳ್ಳುತ್ತೀಯಲ್ಲವೇ;
ಆತನು ನನ್ನನ್ನು ಕೊಂದರೂ ನಾನು ಆತನಲ್ಲಿ ಭರವಸೆ ಇಡುವೆನು, ಆದರೆ ನನ್ನ ಮಾರ್ಗ ಗಳನ್ನು ಉಳಿಸಿಕೊಳ್ಳುವೆನು.
ನಿನ್ನ ಬಾಯಿ ನಿನ್ನ ಅಕ್ರಮವನ್ನು ಬೋಧಿಸುತ್ತದೆ; ನೀನು ಕುಯುಕ್ತಿಯುಳ್ಳವರ ನಾಲಿಗೆಯನ್ನು ಆದುಕೊಳ್ಳುತ್ತೀ.
ನಿನ್ನ ಕೆಟ್ಟ ತನವು ಬಹಳವಲ್ಲವೋ? ನಿನ್ನ ಅಕ್ರಮಗಳಿಗೆ ಅಂತ್ಯ ವಿಲ್ಲವಷ್ಟೇ.
ಅಲ್ಲಿ ನೀತಿವಂತನು ಅವನ ಸಂಗಡ ತರ್ಕ ಮಾಡುವನು; ನಾನು ನಿತ್ಯವಾಗಿ ನನ್ನ ನ್ಯಾಯಾಧಿಪತಿಗೆ ತಪ್ಪಿಸಿಕೊಳ್ಳುವೆನು.
ನನ್ನ ತುಟಿಗಳು ದುಷ್ಟತ್ವವನ್ನು ಮಾತನಾಡವು; ನನ್ನ ನಾಲಿಗೆ ಮೋಸ ನುಡಿಯದು.
ಕೇಳುವ ಕಿವಿ ನನ್ನನ್ನು ಧನ್ಯನೆಂದು ಹರಸಿತು; ನೋಡುವ ಕಣ್ಣು ನನಗೆ ಸಾಕ್ಷಿ ಕೊಡುತ್ತಿತ್ತು.
ನನ್ನ ಕಣ್ಣುಗಳೊಡನೆ ಒಡಂಬಡಿಕೆ ಮಾಡಿದೆನು; ಕನ್ನಿಕೆಯ ಮೇಲೆ ಲಕ್ಷ್ಯವಿಡುವದು ಹೇಗೆ?
ನಿಶ್ಚಯವಾಗಿ ನೀನು ನನ್ನ ಕಿವಿಗಳಲ್ಲಿ ಹೇಳಿದ್ದೀ ಮತ್ತು ನಾನು ನಿನ್ನ ಮಾತುಗಳ ಶಬ್ದವನ್ನು ಕೇಳಿದ್ದೇನೆ.
ಏನಂದರೆ--ನಾನು ದ್ರೋಹವಿಲ್ಲದವನಾಗಿ ಶುದ್ಧ ನಾಗಿದ್ದೇನೆ; ನಾನು ಯಥಾರ್ಥನಾಗಿದ್ದೇನೆ; ಇಲ್ಲವೆ ನನ್ನಲ್ಲಿ ಅಪರಾಧವಿಲ್ಲ.
ನೀನು ನನ್ನ ನ್ಯಾಯತೀರ್ವಿಕೆಯನ್ನು ತೆಗೆದುಹಾಕುವಿಯೋ? ನೀನು ನೀತಿವಂತ ನಾಗುವ ಹಾಗೆ ನನ್ನನ್ನು ಖಂಡಿಸುವಿಯೋ?