ನನ್ನ ಹೆಜ್ಜೆಯು ದಾರಿಯಿಂದ ತೊಲಗಿದ್ದರೆ, ನನ್ನ ಕಣ್ಣುಗಳ ಹಿಂದೆ ನನ್ನ ಹೃದಯವು ಹೋಗಿದ್ದರೆ, ನನ್ನ ಅಂಗೈಗಳಲ್ಲಿ ದೋಷ ಹತ್ತಿದ್ದರೆ,
Cross references
ಅದನ್ನು ನೀವು ಗೊಂಡೆಯಾಗಿ ಇಟ್ಟುಕೊಂಡು ಅದನ್ನು ನೋಡುವಾಗ ಕರ್ತನ ಸಕಲ ಆಜ್ಞೆಗಳನ್ನು ನೆನಸಿ ಅವುಗಳ ಪ್ರಕಾರ ಮಾಡಿ ನಿಮ್ಮ ಹೃದಯವನ್ನೂ ಕಣ್ಣುಗಳನ್ನೂ ಅವು ಗಳಿಗನುಸಾರವಾಗಿ ಜಾರತ್ವಮಾಡುವಂತೆ ಹಿಂಬಾ ಲಿಸದೆ
ನಾನು ಹಿಮದ ನೀರಿನಲ್ಲಿ ತೊಳಕೊಂಡು ನನ್ನ ಕೈಗಳನ್ನು ಶುಚಿ ಮಾಡೇ ಮಾಡಿದಾಗ್ಯೂ
ಆದರೂ ನನ್ನ ಕೈಗಳಲ್ಲಿ ಬಲಾತ್ಕಾರವಿಲ್ಲ; ನನ್ನ ಪ್ರಾರ್ಥನೆಯು ನಿರ್ಮಲವಾಗಿದೆ.
ಆದರೆ ನೀತಿವಂತನು ತನ್ನ ಮಾರ್ಗವನ್ನು ಹಿಡಿದುಕೊಳ್ಳುವನು. ಶುದ್ಧ ಕೈಗಳು ಳ್ಳವನು ಬರಬರುತ್ತಾ ಬಲಗೊಳ್ಳುವನು.
ಆತನ ಹೆಜ್ಜೆಯನ್ನು ನನ್ನ ಕಾಲು ಹಿಡಿಯಿತು; ಆತನ ಮಾರ್ಗವನ್ನು ನಾನು ತೊಲಗದೆ ನೋಡಿಕೊಂಡೆನು.
ನಿಮ್ಮನ್ನು ನೀತಿವಂತರೆನ್ನುವದು ನನಗೆ ದೂರವಿರಲಿ; ನಾನು ಸತ್ತು ಹೋಗುವ ವರೆಗೂ ನನ್ನ ಯಥಾರ್ಥತ್ವವನ್ನು ನನ್ನಿಂದ ತೊಲ ಗಿಸುವದಿಲ್ಲ.
ನನ್ನ ನೀತಿಯನ್ನು ದೃಢವಾಗಿ ಹಿಡು ಕೊಂಡಿದ್ದೇನೆ. ಅದನ್ನು ನಾನು ಹೋಗಗೊಡಿಸು ವದಿಲ್ಲ; ನಾನು ಇರುವ ವರೆಗೂ ನನ್ನ ಹೃದಯವು ನನ್ನನ್ನು ನಿಂದಿಸುವದಿಲ್ಲ.
ಹೌದು, ನನ್ನೊಂದಿಗೆ ಸಮಾಧಾನದಿಂದ ಇದ್ದವನಿಗೆ ನಾನು ಕೇಡು ಮಾಡಿದ್ದರೆ, ಯಾವ ಕಾರಣವಿಲ್ಲದೆ ನನಗೆ ವೈರಿಯಾಗಿರುವವನನ್ನು ನಾನು ಶತ್ರುವಿಗೆ ತಪ್ಪಿಸಿಬಿಟ್ಟೆನಲ್ಲಾ,
ನಾವು ನಮ್ಮ ದೇವರ ಹೆಸರನ್ನು ಮರೆತು ಅನ್ಯ ದೇವರಿಗೆ ನಮ್ಮ ಕೈಗಳನ್ನು ಚಾಚಿದರೆ
ಕೆಟ್ಟ ಕಾರ್ಯ ವನ್ನು ನನ್ನ ಕಣ್ಣುಗಳ ಮುಂದೆ ನಾನು ಇಡುವದಿಲ್ಲ; ಅಕ್ರಮಗಾರರ ಕೆಲಸವನ್ನು ಹಗೆ ಮಾಡುತ್ತೇನೆ; ಅದು ನನಗೆ ಅಂಟಿಕೊಳ್ಳದು.
ಓ ಯೌವನಸ್ಥನೇ, ನಿನ್ನ ಯೌವನದಲ್ಲಿ ಸಂತೋಷಪಡು. ನಿನ್ನ ಯೌವನದ ದಿನಗಳಲ್ಲಿ ನಿನ್ನ ಹೃದಯವು ನಿನ್ನನ್ನು ಆನಂದಪಡಿಸಲಿ; ನೀನು ನಿನ್ನ ಹೃದಯದ ಮಾರ್ಗಗಳಲ್ಲಿಯೂ ನಿನ್ನ ಕಣ್ಣುಗಳ ನೋಟ ದಲ್ಲಿಯೂ ನಡೆ; ಆ ಎಲ್ಲಾ ಸಂಗತಿಗಳಿಗಾಗಿ ದೇವರು ನಿನ್ನನ್ನು ನ್ಯಾಯತೀರ್ಪಿಗೆ ತರುವನೆಂದು ತಿಳಿದುಕೋ.ಆದಕಾರಣ ನಿನ್ನ ಹೃದಯದಿಂದ ದುಃಖವನ್ನು ತೆಗೆದು ಹಾಕು; ನಿನ್ನ ಶರೀರದಿಂದ ಕೆಟ್ಟದ್ದನ್ನು ತೆಗೆದುಬಿಡು; ಬಾಲ್ಯವೂ ಯೌವನವೂ ವ್ಯರ್ಥವಾಗಿವೆ.
ನೀತಿಯಲ್ಲಿ ನಡೆದು ಯಥಾರ್ಥವಾಗಿ ನುಡಿದು ದೋಚಿಕೊಂಡ ಲಾಭ ಬೇಡವೆಂದು ಲಂಚ ಮುಟ್ಟದಂತೆ ಕೈ ಒದರಿ ರಕ್ತಕ್ಕೆ ಕಿವಿಗೊಡದೆ ಕೆಟ್ಟದ್ದನ್ನು ನೋಡದಂತೆ ಕಣ್ಣು ಮುಚ್ಚಿಕೊಳ್ಳುವವನೇ ಉನ್ನತ ಸ್ಥಳದಲ್ಲಿ ವಾಸಿಸುವನು.
ನಿಮ್ಮಲ್ಲಿ ತಪ್ಪಿಸಿಕೊಂಡವರು ತಾವು ಸೆರೆಗೆ ಒಯ್ಯಲ್ಪ ಡುವ ಜನಾಂಗಗಳಲ್ಲಿ ನನ್ನನ್ನು ಜ್ಞಾಪಕಮಾಡಿಕೊಳ್ಳು ವರು, ಯಾಕಂದರೆ ನನ್ನನ್ನು ಬಿಟ್ಟುಬಿಡುವ ಅವರ ಜಾರಹೃದಯದಿಂದಲೂ ಅವರ ದೇವರ ವಿಗ್ರಹಗಳ ಹಿಂದೆ ಜಾರತ್ವ ಮಾಡುವವರ ಕಣ್ಣುಗಳಿಂದಲೂ ಮುರಿದುಹೋದೆನು; ಅವರು ತಮ್ಮ ಅಸಹ್ಯಗಳಲ್ಲಿ ಮಾಡುವ ಕೇಡುಗಳ ನಿಮಿತ್ತ ತಮಗೆ ತಾವೇ ಹೇಸಿ ಕೊಳ್ಳುವರು.
ಮನುಷ್ಯಪುತ್ರನೇ, ಈ ಮನು ಷ್ಯರು ತಮ್ಮ ವಿಗ್ರಹಗಳನ್ನು ತಮ್ಮ ಹೃದಯಗಳಲ್ಲೇ ಸ್ಥಾಪಿಸಿ ತಮ್ಮ ಅಕ್ರಮವಾದ ಎಡೆತಡೆಗಳನ್ನು ತಮ್ಮ ಮುಖದ ಮುಂದೆಯೇ ಇಟ್ಟುಕೊಂಡಿದ್ದಾರೆ. ಇವರೆಲ್ಲ ರನ್ನೂ ನಾನು ವಿಚಾರಿಸಬೇಕೇ?
ನನಗೆ ತನ್ನನ್ನು ಅನ್ಯನನ್ನಾಗಿ ಮಾಡಿಕೊಂಡು ತನ್ನ ಹೃದಯದಲ್ಲಿ ವಿಗ್ರಹಗಳನ್ನು ಸ್ಥಾಪಿಸಿ ಅಕ್ರಮದ ಎಡೆತಡೆಯನ್ನು ತನ್ನ ಮುಖದ ಮುಂದೆ ಇಟ್ಟುಕೊಂಡು ಪ್ರವಾದಿಯ ಬಳಿಗೆ ನನ್ನ ವಿಷಯವಾಗಿ ವಿಚಾರಿಸಲು ಬರುವ ಪ್ರತಿಯೊಬ್ಬ ಇಸ್ರಾಯೇಲಿನ ಮನೆತನದವರಲ್ಲಿಯೂ ಇಸ್ರಾಯೇಲಿನಲ್ಲಿ ತಂಗುವ ಅನ್ಯರಲ್ಲಿಯೂ ಪ್ರತಿಯೊ ಬ್ಬನಿಗೂ ಕರ್ತನಾದ ನಾನೇ ಉತ್ತರ ಕೊಡುತ್ತೇನೆ.
ಆದದರಿಂದ ನಿನ್ನ ಬಲಗಣ್ಣು ನಿನಗೆ ಅಭ್ಯಂತರವಾಗಿದ್ದರೆ ಅದನ್ನು ಕಿತ್ತು ನಿನ್ನಿಂದ ಬಿಸಾಡಿಬಿಡು; ಯಾಕಂದರೆ ನಿನ್ನ ಇಡೀ ಶರೀರವು ನರಕದಲ್ಲಿ ಹಾಕಲ್ಪಡುವದಕ್ಕಿಂತ ನಿನ್ನ ಅಂಗಗಳಲ್ಲಿ ಒಂದು ನಾಶವಾಗುವದು ನಿನಗೆ ಲಾಭಕರವಾಗಿದೆ.