ತಮಗೆ ಹಾಳಾದ ಸ್ಥಳಗಳನ್ನು ಕಟ್ಟುವ ಅರಸುಗಳ ಸಂಗಡಲೂ; ಭೂಮಿಯ ಸಲಹೆಗಾರರ ಸಂಗಡಲೂ
Cross references
ಹೀಗೆಯೇ ದಾವೀದನು ತನ್ನ ಪಿತೃಗಳ ಸಂಗಡ ಮಲಗಿಕೊಂಡನು; ಅವನು ದಾವೀದನ ಪಟ್ಟಣದಲ್ಲಿ ಹೂಣಲ್ಪಟ್ಟನು.
ಸೊಲೊಮೋನನು ತನ್ನ ಪಿತೃ ಗಳ ಸಂಗಡ ಮಲಗಿದನು; ಅವನು ತನ್ನ ತಂದೆ ಯಾದ ದಾವೀದನ ಪಟ್ಟಣದಲ್ಲಿ ಹೂಣಲ್ಪಟ್ಟನು; ಅವನ ಮಗನಾದ ರೆಹಬ್ಬಾಮನು ಅವನಿಗೆ ಬದಲಾಗಿ ಆಳಿದನು.
ಆತನು ಸಲಹೆಗಾರ ರನ್ನು ಕೇಡಿಗೆ ನಡಿಸುತ್ತಾನೆ; ನ್ಯಾಯಾಧಿಪತಿಗಳನ್ನು ಮೂರ್ಖರನ್ನಾಗಿ ಮಾಡುತ್ತಾನೆ.
ಹಾಳಾದ ಪಟ್ಟಣ ಗಳಲ್ಲಿಯೂ ನಿವಾಸಿಗಳು ಇಲ್ಲದಂಥ ದಿಬ್ಬೆಗಳಾ ಗುವದಕ್ಕೆ ಸಿದ್ಧವಾದಂಥ ಮನೆಗಳಲ್ಲಿಯೂ ವಾಸ ಮಾಡುತ್ತಾನೆ.
ಮರಣಕ್ಕೂ ಎಲ್ಲಾ ಜೀವಿಗಳ ನೇಮಕವಾದ ಮನೆಗೂ ನನ್ನನ್ನು ತಿರುಗಿಸುವಿ ಎಂದು ತಿಳಿದಿದ್ದೇನೆ.
ಅವರು ತಮ್ಮ ಸಂಪತ್ತಿನಲ್ಲಿ ಭರವಸವಿಟ್ಟು ಅಧಿಕ ಐಶ್ವರ್ಯಗಳಲ್ಲಿ ಹೆಚ್ಚಳಪಡುವರು.
ಅವರು ಕುರಿ ಗಳಂತೆ ಸಮಾಧಿಯಲ್ಲಿ ಹಾಕಲ್ಪಡುತ್ತಾರೆ; ಮರಣವು ಅವರನ್ನು ತಿನ್ನುತ್ತದೆ; ಯಥಾರ್ಥರು ಬೆಳಿಗ್ಗೆ ಅವರ ಮೇಲೆ ಆಳುವರು; ಅವರಿಗೆ ನಿವಾಸವಿರದ ಹಾಗೆ ಸಮಾಧಿಯಲ್ಲಿ ಅವರ ರೂಪವು ಕ್ಷಯಿಸುವದು.
ಮರಣವನ್ನು ನೋಡದೆ ಬದುಕುವಂಥ, ಸಮಾಧಿಯ ವಶದಿಂದ ತನ್ನ ಪ್ರಾಣವನ್ನು ತಪ್ಪಿಸಿಕೊಳ್ಳುವಂಥ, ಪುರುಷನು ಯಾರು ಸೆಲಾ.
ಆತ್ಮವನ್ನು ಹಿಡಿ ಯುವ ಶಕ್ತಿ ಯಾವ ಮನುಷ್ಯನಿಗೂ ಇಲ್ಲ; ಹಾಗೆಯೇ ಮರಣ ದಿನವನ್ನು ತಡೆಯುವ ಶಕ್ತಿಯು ಯಾರಿಗೂ ಇರುವದಿಲ್ಲ. ಯುದ್ಧದಿಂದ ಬಿಡುಗಡೆಯೂ ಹೇಗೆ ಇಲ್ಲವೋ ಹಾಗೆಯೇ ದುಷ್ಟನಿಗೆ ಅದರಿಂದ ಬಿಡು ಗಡೆಯೇ ಇಲ್ಲ.
ಸ್ಥಳ ಮಿಗಿಸದೆ ನೀವು ಭೂಮಿಯ ಮಧ್ಯದಲ್ಲಿ ಒಂಟಿಯಾಗಿ ವಾಸಿಸುವಂತೆ ಮನೆಗೆ ಮನೆ ಕೂಡಿಸಿ ಹೊಲಕ್ಕೆ ಹೊಲ ಸೇರಿಸುವವರಿಗೆ ಅಯ್ಯೋ!
ಅವರೆಲ್ಲರು ನಿನಗೆ--ನಮ್ಮ ಹಾಗೆ ನೀನು ಸಹ ಬಲಹೀನನಾಗಿದ್ದೀ, ನೀನು ನಮ್ಮ ಸಮಾನನಾಗಿದ್ದೀ ಎಂದು ಮಾತಾಡಿ ಹೇಳುವರು.
ಜನಾಂಗಗಳ ಅರಸುಗಳೆಲ್ಲಾ ಅವರೆಲ್ಲರೂ ವೈಭವ ದಿಂದ ತಮ್ಮತಮ್ಮ ಮನೆಗಳಲ್ಲಿ ಮಲಗುತ್ತಾರೆ.
ನಿನಗೆ ಇಲ್ಲಿ ಏನು ಕೆಲಸ? ಇಲ್ಲಿ ನಿನಗೆ ಯಾರಿದ್ದಾರೆ? ನೀನು ಉನ್ನತದಲ್ಲಿ ತನಗೆ ಸಮಾಧಿ ಯನ್ನು ತೋಡಿಸಿ, ಬಂಡೆಯಲ್ಲಿ ತನಗೆ ನಿವಾಸವನ್ನು ಕೆತ್ತಿಸುವವನ ಹಾಗೆ, ನಿನಗೆ ಇಲ್ಲಿ ಸಮಾಧಿಯನ್ನು ತೋಡಿಸಿದ್ದಿ ಅಲ್ಲವೆ?
ಆಗ ನಿನ್ನವರು ಪುರಾತನ ಕಾಲದ ಹಾಳಾದ ಸ್ಥಳಗಳನ್ನು ಕಟ್ಟುವರು, ತಲತಲಾ ಂತರಕ್ಕಿದ್ದ ಅಸ್ತಿವಾರಗಳನ್ನು ನೀನು ಎಬ್ಬಿಸುವಿ; ಸೀಳಿ ದ್ದನ್ನು ಸರಿ ಮಾಡುವವನೆಂದೂ ನಿವಾಸಿಗಳಿಗಾಗಿ ಹಾದಿಗಳನ್ನು ತಿರಿಗಿ ಸರಿಮಾಡುವವನೆಂದೂ ನೀನು ಕರೆಯಲ್ಪಡುವಿ.
ನಿನ್ನನ್ನು ಅಧೋಲೋಕಕ್ಕೆ ತಳ್ಳಿ ಪಾತಾಳಕ್ಕೆ ಇಳಿದ ನಿಮ್ಮ ಪೂರ್ವ ಕಾಲದವರೊಂದಿಗೆ ವಾಸಿಸುವಂತೆ ಮಾಡುವೆನು. ನಾನು ನಿನ್ನ ಮಹಿಮೆಯನ್ನು ಜೀವ ಲೋಕದಲ್ಲಿ ನೆಲೆಗೊಳಿಸದ ನಿರ್ನಿವಾಸಿಯಾಗುವಂತೆ ನಿನ್ನನ್ನು ಪಾತಾಳಕ್ಕಿಳಿದವರ ಸಹವಾಸಕ್ಕೆ ಸೇರಿಸುವೆನು.ನಾನೂ ನಿನ್ನನ್ನು ದಿಗಿಲುಪಡಿಸುವೆನು, ಇನ್ನು ಮೇಲೆ ನೀನು ಇರುವದಿಲ್ಲ; ಆಮೇಲೆ ನಿನ್ನನ್ನು ಎಷ್ಟು ಹುಡು ಕಿದರೂ ನೀನು ಸಿಗುವದಿಲ್ಲ ಎಂದು ದೇವರಾದ ಕರ್ತನು ಹೇಳುತ್ತಾನೆ.
ನಿನ್ನ ಕೈಕೆಲಸದ ವಸ್ತುಗಳು ನಿನ್ನಲ್ಲಿ ಅಪಾರವಾಗಿ ದ್ದದರಿಂದಲೂ ಅಪರಿಮಿತವಾದ ಬಗೆ ಬಗೆಯ ಆಸ್ತಿಯೂ ನಿನಗೆ ಬೇಕಾಗಿದ್ದರಿಂದಲೂ