ಪಟ್ಟಣದೊಳಗಿಂದ ಮನುಷ್ಯರು ನರಳುತ್ತಾರೆ; ಗಾಯಪಟ್ಟವರ ಪ್ರಾಣವು ಕೂಗುತ್ತದೆ; ಆದರೂ ದೇವರು ತಪ್ಪುಹೊರಿಸುವದಿಲ್ಲ.
Cross references
ಆತನು--ನೀನು ಮಾಡಿದ್ದೇನು? ನಿನ್ನ ಸಹೋದರನ ರಕ್ತದ ಸ್ವರವು ಭೂಮಿಯಿಂದ ನನ್ನನ್ನು ಕೂಗುತ್ತದೆ.
ಆದ ದರಿಂದ ಐಗುಪ್ತ್ಯರು ಇಸ್ರಾಯೇಲನ ಮಕ್ಕಳಿಂದ ಕ್ರೂರವಾಗಿ ಸೇವೆ ಮಾಡಿಸಿಕೊಂಡರು.
ಹೀಗಿರಲಾಗಿ ಬಹಳ ದಿನಗಳಾದ ಮೇಲೆ ಐಗುಪ್ತದ ಅರಸನು ಸತ್ತನು. ಇಸ್ರಾಯೇಲ್ ಮಕ್ಕಳು ದಾಸತ್ವದ ಕಾರಣದಿಂದ ನಿಟ್ಟುಸುರುಬಿಟ್ಟು ಕೂಗು ತ್ತಿದ್ದರು. ದಾಸತ್ವದ ನಿಮಿತ್ತವಾಗಿ ಅವರ ಕೂಗು ದೇವರ ಬಳಿಗೆ ಬಂತು.
ಅದು ಅವನಿಗೆ ಒಂದೇ ಹೊದಿಕೆಯಾಗಿದೆ. ಅದೇ ಅವನ ಮೈಗೆ ಉಡುಪು. ಅವನು ಯಾವದನ್ನು ಹೊದ್ದುಕೊಂಡು ಮಲಗಿ ಯಾನು? ಅವನು ನನಗೆ ಮೊರೆಯಿಟ್ಟರೆ ನಾನು ಕೇಳುವೆನು. ನಾನು ಕೃಪಾಳುವು.
ಅವರು ಅನ್ಯದೇವರುಗಳನ್ನು ತಮ್ಮ ಮಧ್ಯದಲ್ಲಿಂದ ತೊರೆದುಬಿಟ್ಟು ಕರ್ತನನ್ನು ಸೇವಿಸಿ ದರು. ಆಗ ಆತನ ಮನಸ್ಸು ಇಸ್ರಾಯೇಲಿನ ಕಷ್ಟ ಕ್ಕೋಸ್ಕರ ನೊಂದುಕೊಂಡಿತು.
ಕೊರಡೆಯು ಫಕ್ಕನೆ ಕೊಂದರೆ, ನಿರಪರಾಧಿಗಳ ಪರೀಕ್ಷೆಗೆ ಅವನು ಗೇಲಿ ಮಾಡುತ್ತಾನೆ.
ದುಷ್ಟನು ದೇವರನ್ನು ಅಲಕ್ಷ್ಯಮಾಡುವದು ಯಾಕೆ? --ನೀನು ಅದನ್ನು ವಿಚಾರಿಸುವದಿಲ್ಲವೆಂದು ಅವನು ತನ್ನ ಹೃದಯದಲ್ಲಿ ಹೇಳಿಕೊಂಡಿದ್ದಾನೆ.
ಬಡವರ ವ್ಯಥೆಗೋಸ್ಕರವೂ ಗತಿಯಿಲ್ಲದವರ ನರ ಳುವಿಕೆಗೋಸ್ಕರವೂ ಈಗ ನಾನು ಏಳುವೆನು ಎಂದು ಕರ್ತನು ಹೇಳುತ್ತಾನೆ; ಉಬ್ಬಿಕೊಂಡವನಿಂದ ನಾನು ಬಡವನನ್ನು ಕಾಪಾಡುವೆನು.
ಇವುಗಳನ್ನು ನೀನು ಮಾಡಿದಾಗ್ಯೂ ನಾನು ಮೌನವಾಗಿದ್ದೆನು; ಆದದರಿಂದ ನಾನೂ ಸಹ ನಿನ್ನ ಹಾಗೆ ಒಬ್ಬನೆಂದು ನೀನು ನೆನಸಿದಿ; ಆದರೆ ನಾನು ನಿನ್ನನ್ನು ಗದರಿಸಿ ನಿನ್ನ ಕಣ್ಣುಗಳ ಮುಂದೆ ಈ ಕೃತ್ಯಗಳನ್ನು ಕ್ರಮವಾಗಿಡುವೆನು.
ನೀನು ಹೊಡೆದ ವನನ್ನು ಅವರು ಹಿಂಸಿಸುತ್ತಾರೆ, ನೀನು ಗಾಯಮಾಡಿ ದವರ ವ್ಯಸನವನ್ನು ಮಾತನಾಡಿಕೊಳ್ಳುತ್ತಾರೆ.
ನಾನು ದೀನನೂ ಬಡವನೂ ಆಗಿದ್ದೇನೆ. ನನ್ನ ಹೃದಯವು ಅಂತರಂಗದಲ್ಲಿ ಗಾಯಗೊಂಡಿದೆ.
ಹೀಗೆ ನಾನು ತಿರುಗಿಕೊಂಡು ಸೂರ್ಯನ ಕೆಳಗೆ ನಡೆಯುತ್ತಿರುವ ಹಿಂಸೆಗಳನ್ನೆಲ್ಲಾ ನಾನು ಯೋಚಿಸಿದೆನು; ಹಿಂಸಿಸಲ್ಪಟ್ಟವರ ಕಣ್ಣೀರನ್ನೂ ಅವರನ್ನು ಆದರಿಸುವವರು ಯಾರೂ ಇಲ್ಲದಿರುವ ದನ್ನೂ ನೋಡಿದೆನು; ಅವರನ್ನು ಹಿಂಸೆಪಡಿಸುವವರ ಕಡೆಗೆ ಶಕ್ತಿ ಇತ್ತು; ಆದರೆ ಇವರನ್ನು ಆದರಿಸುವವನು ಯಾವನೂ ಇಲ್ಲ.