ನಿನ್ನ ಭಯದ ನಿಮಿತ್ತ ನಿನ್ನನ್ನು ಗದರಿಸಿ ನಿನ್ನ ಸಂಗಡ ನ್ಯಾಯಕ್ಕೆ ಬರುವನೋ?
Cross references
ನೀನು ನನಗೆ ಕಾವಲಿಡುವದಕ್ಕೆ ನಾನೇನು ಸಮುದ್ರವೋ? ಇಲ್ಲವೆ ತಿಮಿಂಗಲವೋ?
ಶಕ್ತಿಯ ವಿಷಯದಲ್ಲಿ ಮಾತನಾಡಲೋ? ಇಗೋ, ಆತನು ಬಲವುಳ್ಳವನಾಗಿದ್ದಾನೆ. ನ್ಯಾಯದ ವಿಷಯವೋ ವಾದಿ ಸುವದಕ್ಕೆ ನನಗೆ ಕಾಲವನ್ನು ನಿಯಮಿಸುವವನು ಯಾರು?
ನಾನು ಆತನಿಗೆ ಉತ್ತರ ಕೊಡುವ ಹಾಗೆಯೂ ನಾವು ಕೂಡ ನ್ಯಾಯದಲ್ಲಿ ಸೇರುವ ಹಾಗೆಯೂ ಆತನು ನನ್ನಂಥ ಮನುಷ್ಯನಲ್ಲ.
ಹಾಗಾದರೆ ಇಂಥವನ ಮೇಲೆ ನಿನ್ನ ಕಣ್ಣುಗಳನ್ನು ತೆರೆಯುತ್ತೀಯೋ? ನನ್ನನ್ನು ನಿನ್ನ ಸಂಗಡ ನ್ಯಾಯಕ್ಕೆ ಬರಮಾಡುತ್ತೀಯೋ?
ಒಬ್ಬನು ತನ್ನ ನೆರೆಯವನಿಗೋಸ್ಕರ ವ್ಯಾಜ್ಯವಾಡುವಂತೆ ಮನುಷ್ಯನಿಗೋಸ್ಕರ ದೇವರ ಮುಂದೆ ವ್ಯಾಜ್ಯವಾಡುತ್ತಿದ್ದರೆ ಎಷ್ಟೋ ಒಳ್ಳೇದು.ಕೆಲವು ವರುಷಗಳು ಮುಗಿದಾಗ ನಾನು ತಿರುಗಿ ಬಾರದ ದಾರಿಹಿಡಿದು ಹೋಗುತ್ತೇನೆ.
ಕತ್ತಿಯ ಮುಂದೆ ಅಂಜಿಕೊಳ್ಳಿರಿ; ನ್ಯಾಯತೀರ್ವಿಕೆ ಉಂಟೆಂದು ನೀವು ತಿಳುಕೊಳ್ಳುವ ಹಾಗೆ ಕೋಪವು ಕತ್ತಿಯ ದಂಡನೆಗಳನ್ನು ಬರಮಾಡುತ್ತದೆ.
ಬಹು ಶಕ್ತಿಯಿಂದ ನನ್ನ ಸಂಗಡ ಆತನು ವಾದಿಸುವನೋ? ಇಲ್ಲ, ನನ್ನಲ್ಲಿ ಆತನು ಶಕ್ತಿ ಇಡುವನು.
ದೇವರ ಬಳಿಗೆ ನ್ಯಾಯಕ್ಕೆ ಬರುವ ಹಾಗೆ, ಮನುಷ್ಯನ ಮೇಲೆ ಆತನು ಹೆಚ್ಚು ಗಮನವಿಡುವದಿಲ್ಲ.
ಅಕ್ರಮ ಕ್ಕೋಸ್ಕರ ಗದರಿಕೆಗಳಿಂದ ನೀನು ಮನುಷ್ಯನನ್ನು ಶಿಕ್ಷಿಸಿದರೆ ಅವನ ಸೌಂದರ್ಯವನ್ನು ನುಸಿಯ ಹಾಗೆ ಹಾಳುಮಾಡುತ್ತೀ; ನಿಶ್ಚಯವಾಗಿ ಪ್ರತಿ ಮನುಷ್ಯನು ವ್ಯರ್ಥವಾದವನೇ--ಸೆಲಾ.
ಓ ಯಾಕೋಬನ ದೇವರೇ, ನಿನ್ನ ಗದರಿಕೆಯಿಂದ ರಥವೂ ಕುದುರೆಯೂ ಗಾಢ ನಿದ್ರೆಯಲ್ಲಿ ಬಿದ್ದಿವೆ.
ಅದು ಈಗ ಕೊಯ್ಯಲ್ಪಟ್ಟು ಬೆಂಕಿಯಿಂದ ಸುಡಲ್ಪಟ್ಟಿದೆ; ನಿನ್ನ ಬಾಯಿ ಗದರಿಕೆಯಿಂದ ಅವರು ನಾಶವಾಗುತ್ತಾರೆ.
ಕರ್ತನೇ, ನೀನು ಅಕ್ರಮಗಳ ಮೇಲೆ ಕಣ್ಣಿಟ್ಟರೆ ಓ ಕರ್ತನೇ, ಯಾರು ನಿಲ್ಲುವರು?
ನಿನ್ನ ಸೇವಕನನ್ನು ನ್ಯಾಯವಿಚಾರಣೆಗೆ ಗುರಿಮಾಡಬೇಡ; ಜೀವಿತರಲ್ಲಿ ಒಬ್ಬನಾದರೂ ನಿನ್ನ ಮುಂದೆ ನೀತಿವಂತನಾಗುವದಿಲ್ಲ.