ನನ್ನನ್ನು ತಾಳಿಕೊಳ್ಳಿರಿ, ನಾನು ಮಾತನಾಡುವೆನು; ನಾನು ಮಾತ ನಾಡಿದ ಮೇಲೆ ಹಾಸ್ಯ ಮಾಡಬಹುದು.
Cross references
ನಾನು ನೆರೆಯವನಿಗೆ ನಗೆಯಾದವನು; ದೇವರಿಗೆ ಕೂಗು ತ್ತೇನೆ. ಆತನು ಉತ್ತರ ಕೊಡುತ್ತಾನೆ; ನೀತಿವಂತ ಮನು ಷ್ಯನನ್ನು ಗೇಲಿಮಾಡಿ ನಗುವರು.
ಆತನು ನಿಮ್ಮನ್ನು ಶೋಧಿಸುವದು ಒಳ್ಳೇದೋ? ಅಥವಾ ಒಬ್ಬ ಮನುಷ್ಯನು ಇನ್ನೊಬ್ಬನನ್ನು ಗೇಲಿಮಾಡುವ ಪ್ರಕಾರ ನೀವೂ ಆತನನ್ನು ಗೇಲಿಮಾಡುವಿರೋ?
ಮೌನ ವಾಗಿರ್ರಿ; ನಾನು ಮಾತನಾಡುವದಕ್ಕೆ ನನ್ನನ್ನು ಬಿಡಿರಿ, ನನ್ನ ಮೇಲೆ ಏನಾದರೂ ಬರಲಿ.
ನನ್ನ ಮೇಲೆ ತಮ್ಮ ಬಾಯಿ ತೆರೆಯುತ್ತಾರೆ; ನಿಂದೆಗಾಗಿ ನನ್ನ ಕೆನ್ನೆಗಳನ್ನು ಬಡಿಯುತ್ತಾರೆ. ಏಕವಾಗಿ ನನ್ನ ಮೇಲೆ ಕೂಡಿಕೊಳ್ಳುತ್ತಾರೆ.
ನನ್ನ ಸ್ನೇಹಿತರೇ ನನ್ನನ್ನು ಹಾಸ್ಯಮಾಡುತ್ತಾರೆ; ದೇವರಿಗೆ ನನ್ನ ಕಣ್ಣೀರನ್ನು ಸುರಿಸುತ್ತೇನೆ.
ಹಾಸ್ಯಗಾರರು ನನ್ನ ಬಳಿಯಲ್ಲಿ ಇದ್ದಾರ ಲ್ಲವೋ? ಅವರ ಕೋಪದಲ್ಲಿ ನನ್ನ ಕಣ್ಣು ಮುಂದು ವರಿಯುತ್ತದಲ್ಲಾ.
ಇಗೋ, ನೀವೆಲ್ಲರೂ ದೃಷ್ಟಿಸಿದ್ದೀರಿ; ಯಾಕೆ ಈ ಪ್ರಕಾರ ಕೇವಲ ವ್ಯರ್ಥವಾಗಿ ಹೋಗಿ ದ್ದೀರಿ?
ಓ ಯೋಬನೇ, ಚೆನ್ನಾಗಿ ಗುರುತಿಸು; ನನ್ನ ಮಾತಿಗೆ ಕಿವಿಗೊಡು. ಮೌನವಾಗಿರು, ನಾನು ಮಾತನಾಡು ತ್ತೇನೆ.