ನನ್ನ ಮೈಮೇಲೆ ಗೋಣೀ ತಟ್ಟು ಹೊಲಿದು ಧರಿಸಿದೆನು; ಧೂಳಿನಲ್ಲಿ ನನ್ನ ಕೊಂಬನ್ನು ಅಪವಿತ್ರಮಾಡಿದೆನು.
Cross references
ಆಗ ಯಾಕೋಬನು ತನ್ನ ವಸ್ತ್ರಗಳನ್ನು ಹರಿದುಕೊಂಡು ತನ್ನ ನಡುವಿಗೆ ಗೋಣಿಯನ್ನು ಕಟ್ಟಿಕೊಂಡು ತನ್ನ ಮಗನಿಗೋಸ್ಕರ ಬಹುದಿನ ದುಃಖಪಟ್ಟನು.
ಕರ್ತನ ಸಂಗಡ ವಿವಾದಿಸುವವರು ಮುರಿದು ಚೂರಾಗುವರು. ಆತನು ಆಕಾಶದಲ್ಲಿಂದ ಅವರ ಮೇಲೆ ಗುಡುಗುವನು. ಕರ್ತನು ಲೋಕಾಂತ್ಯದ ವರೆಗೂ ನ್ಯಾಯತೀರಿಸಿ ತನ್ನ ಅರಸನಿಗೆ ಬಲಕೊಡುವನು, ತನ್ನ ಅಭಿಷಿಕ್ತನ ಕೊಂಬನ್ನು ಉನ್ನತಮಾಡುವನು ಎಂಬದು.
ಆದರೆ ಅಹಾಬನು ಆ ಮಾತುಗಳನ್ನು ಕೇಳಿದಾಗ ಏನಾಯಿತಂದರೆ, ಅವನು ತನ್ನ ವಸ್ತ್ರಗಳನ್ನು ಹರಿದು ತನ್ನ ಶರೀರದ ಮೇಲೆ ಗೋಣಿಯನ್ನು ಹಾಕಿಕೊಂಡು ಉಪವಾಸಮಾಡಿ ಗೋಣಿಯಲ್ಲಿ ಮಲಗಿಕೊಂಡು ಮೆಲ್ಲಗೆ ನಡೆದನು.
ಆತನು ನನ್ನನ್ನು ಕೆಸರಿನಲ್ಲಿ ದೊಬ್ಬಿದ್ದಾನೆ; ದೂಳಿಗೂ ಬೂದಿಗೂ ಸಮಾನನಾದೆನು.
ವೈರಿಯು ನನ್ನ ಪ್ರಾಣ ವನ್ನು ಹಿಡಿದು ಹಿಂಸಿಸಿ ನನ್ನ ಜೀವವನ್ನು ಭೂಮಿಗೆ ತುಳಿದು ನನ್ನ ಗೌರವವನ್ನು ಧೂಳಿನೊಳಗೆ ಹಾಕಿ ಬಿಡಲಿ--ಸೆಲಾ.
ನಿಮ್ಮ ಕೊಂಬನ್ನು ಉನ್ನತಕ್ಕೆ ಎತ್ತಬೇಡಿರಿ; ಬೊಗ್ಗದ ಕುತ್ತಿಗೆಯಿಂದ ಮಾತಾಡಬೇಡಿರಿ.
ದುಷ್ಟರ ಕೊಂಬುಗಳನ್ನೆಲ್ಲಾ ಕಡಿದುಬಿಡುವೆನು; ಆದರೆ ನೀತಿವಂತರ ಕೊಂಬುಗಳು ಎತ್ತಲ್ಪಡುವವು.
ಆ ದಿವಸದಲ್ಲಿ ಸೈನ್ಯಗಳ ದೇವರಾದ ಕರ್ತನು --ಅಳಬೇಕೆಂದು, ದುಃಖಿಸಬೇಕೆಂದು, ತಲೆಬೋಳಿಸಿ ಕೊಳ್ಳಬೇಕೆಂದು, ಗೋಣೀತಟ್ಟನ್ನು ಸುತ್ತಿಕೊಳ್ಳಬೇ ಕೆಂದು ಆತನು ಕರೆದನು.