Home Bibles ☰ Books ಯೋಬ 14:5 · ಕನ್ನಡ ಬೈಬಲ್
ಯೋಬ 14:5 · ಕನ್ನಡ ಬೈಬಲ್

ಅವನ ದಿವಸಗಳು ನೇಮಕವಾಗಿವೆ; ಅವನ ತಿಂಗಳುಗಳ ಲೆಕ್ಕ ನಿನ್ನ ಬಳಿಯಲ್ಲಿ ಅದೆ; ಅವನು ದಾಟಲಾರದ ಹಾಗೆ ಅವನ ಮೇರೆಗಳನ್ನು ಮಾಡಿದಿ.

Cross references

1 ಸಮುವೇಲ 26:10

ಇದಲ್ಲದೆ ಇನ್ನೂ ದಾವೀದನು--ಕರ್ತನ ಜೀವ ದಾಣೆ, ಕರ್ತನು ಅವನನ್ನು ಹೊಡೆಯುವನು; ಇಲ್ಲವೆ ಅವನ ಕಾಲ ಬಂದು ಅವನು ಸಾಯುವನು; ಇಲ್ಲವೆ ಯುದ್ಧಕ್ಕೆ ಹೋಗಿ ನಾಶವಾಗುವನು.

ಯೋಬ 7:1

ಭೂಮಿಯ ಮೇಲೆ ಮನುಷ್ಯನಿಗೆ ನೇಮಿಸಲ್ಪಟ್ಟ ಕಾಲ ಉಂಟಲ್ಲವೋ? ಅವನ ದಿವಸಗಳು ಕೂಲಿಯವನ ದಿವಸಗಳ ಹಾಗಲ್ಲವೋ?

ಯೋಬ 12:10

ಆತನ ಕೈಯಲ್ಲಿ ಎಲ್ಲಾ ಜೀವಿ ಗಳ ಪ್ರಾಣವು ಎಲ್ಲಾ ಮನುಷ್ಯರ ಶ್ವಾಸವೂ ಇವೆ.

ಯೋಬ 14:14

ಮನುಷ್ಯನು ಸತ್ತರೆ ಅವನು ತಿರುಗಿ ಬದುಕುವನೋ? ನನಗೆ ನೇಮಕ ಮಾಡಿದ ಸಮಯದ ದಿನಗಳೆಲ್ಲಾ ನನಗೆ ಬದಲು ಬರುವ ವರೆಗೆ ನಾನು ಕಾದುಕೊಂಡಿರುವೆನು.

ಯೋಬ 16:22

ಕೆಲವು ವರುಷಗಳು ಮುಗಿದಾಗ ನಾನು ತಿರುಗಿ ಬಾರದ ದಾರಿಹಿಡಿದು ಹೋಗುತ್ತೇನೆ.

ಯೋಬ 21:21

ಅವನ ಬಳಿಕ ಅವನ ತಿಂಗಳಲೆಕ್ಕ ಮಧ್ಯದಲ್ಲಿ ಹರಿದ ಮೇಲೆ ಅವನ ಮನೆಯಲ್ಲಿ ಅವನಿಗೆ ಏನು ಸಂತೋಷ?

ಯೋಬ 23:13

ಆದರೆ ಆತನು ಒಂದೇ ಮನಸ್ಸುಳ್ಳವನು, ಆತ ನನ್ನು ತಿರುಗಿಸುವವನ್ಯಾರು? ತನ್ನ ಪ್ರಾಣವು ಅಪೇ ಕ್ಷಿಸುವ ಪ್ರಕಾರವೇ ಮಾಡುತ್ತಾನೆ.

ಕೀರ್ತನೆಗಳು 39:4

ಕರ್ತನೇ, ನಾನು ಎಷ್ಟು ಅಸ್ಥಿರನೆಂದು ತಿಳಿಯುವ ಹಾಗೆ ನನ್ನ ಅಂತ್ಯವನ್ನೂ ನನ್ನ ದಿವಸಗಳು ಕೊಂಚ ವೆಂಬದನ್ನೂ ನನಗೆ ತಿಳಿಸು.

ಕೀರ್ತನೆಗಳು 104:9

ಅವು ದಾಟದ ಹಾಗೆಯೂ ಭೂಮಿಯನ್ನು ಮುಚ್ಚುವದಕ್ಕೆ ತಿರಿಗಿ ಬಾರದ ಹಾಗೆಯೂ ಮೇರೆಯನ್ನು ಇಟ್ಟಿದ್ದೀ.

ಕೀರ್ತನೆಗಳು 104:29

ನೀನು ನಿನ್ನ ಮುಖವನ್ನು ಮರೆಮಾಡಲು ತಲ್ಲಣಿಸುತ್ತವೆ; ನೀನು ಅವುಗಳ ಶ್ವಾಸವನ್ನು ತೆಗೆದು ಬಿಡಲು, ಅವು ಸತ್ತುಹೋಗಿ, ತಮ್ಮ ಧೂಳಿಗೆ ತಿರುಗುತ್ತವೆ.

ಸಭಾಪ್ರಸಂಗಿ 3:2

ಹುಟ್ಟುವದಕ್ಕೆ ಒಂದು ಸಮಯ, ಸಾಯುವದಕ್ಕೆ ಒಂದು ಸಮಯ; ನೆಡುವದಕ್ಕೆ ಒಂದು ಸಮಯ, ನೆಟ್ಟದ್ದನ್ನು ಕಿತ್ತು ಹಾಕು ವದಕ್ಕೆ ಒಂದು ಸಮಯ;

ಸಭಾಪ್ರಸಂಗಿ 8:8

ಆತ್ಮವನ್ನು ಹಿಡಿ ಯುವ ಶಕ್ತಿ ಯಾವ ಮನುಷ್ಯನಿಗೂ ಇಲ್ಲ; ಹಾಗೆಯೇ ಮರಣ ದಿನವನ್ನು ತಡೆಯುವ ಶಕ್ತಿಯು ಯಾರಿಗೂ ಇರುವದಿಲ್ಲ. ಯುದ್ಧದಿಂದ ಬಿಡುಗಡೆಯೂ ಹೇಗೆ ಇಲ್ಲವೋ ಹಾಗೆಯೇ ದುಷ್ಟನಿಗೆ ಅದರಿಂದ ಬಿಡು ಗಡೆಯೇ ಇಲ್ಲ.

ದಾನಿಯೇಲ 4:35

ಭೂ ನಿವಾಸಿಗಳೆಲ್ಲರೂ ಏನೂ ಇಲ್ಲದ ಹಾಗೆ ಎಣಿಸಲ್ಪಟ್ಟಿ ದ್ದಾರೆ; ಆತನು ಪರಲೋಕದ ಸೈನ್ಯದಲ್ಲಿಯೂ ಭೂ ನಿವಾಸಿಗಳಲ್ಲಿಯೂ ತನ್ನ ಚಿತ್ತದ ಪ್ರಕಾರವೇ ಮಾಡು ತ್ತಾನೆ. ಯಾರೂ ಆತನ ಹಸ್ತವನ್ನು ಹಿಂತೆಗೆಯಲಾರರು; ನೀನು ಏನು ಮಾಡುತ್ತಿರುವಿ ಎಂದು ಆತನಿಗೆ ಯಾರೂ ಕೇಳಲಾರರು.

Interlinear

Choose Theme