ಆದರೆ ದುಷ್ಟರ ಕಣ್ಣುಗಳು ಕುಂದುವವು; ಅವರು ತಪ್ಪಿಸಿಕೊಳ್ಳುವದಿಲ್ಲ. ಅವರ ಪ್ರಾಣದ ಕೊನೆಯ ಉಸಿರೇ ಅವರ ನಿರೀಕ್ಷೆಯಾಗಿದೆ.
Cross references
ನಾನು ಸಹ ಇದನ್ನು ನಿಮಗೆ ಮಾಡು ವೆನು; ನಿಮ್ಮ ಮೇಲೆ ಭೀತಿಯನ್ನೂ ಕಣ್ಣುಗಳನ್ನು ಕ್ಷೀಣಿಸು ವಂತೆಯೂ ಹೃದಯವು ಕುಗ್ಗಿ ದುಃಖಕ್ಕೊಳಗಾಗು ವಂತೆಯೂ ಮಾಡುವ ಕ್ಷಯರೋಗವನ್ನು ಚಳಿಜ್ವರ ವನ್ನೂ ಬರಮಾಡುವೆನು. ನೀವು ವ್ಯರ್ಥವಾಗಿ ನಿಮ್ಮ ಬೀಜವನ್ನು ಬಿತ್ತುವಿರಿ; ನಿಮ್ಮ ಶತ್ರುಗಳು ಅದನ್ನು ತಿಂದುಬಿಡುವರು.
ಈ ಜನಾಂಗಗಳಲ್ಲಿ ನಿನಗೆ ನೆಮ್ಮದಿ ಇರುವದಿಲ್ಲ; ನಿನ್ನ ಅಂಗಾಲಿಗೆ ವಿಶ್ರಾಂತಿ ಆಗುವದಿಲ್ಲ; ಅಲ್ಲಿ ಕರ್ತನು ನಿನಗೆ ನಡುಗುವ ಹೃದಯವನ್ನೂ ಕ್ಷೀಣಿಸುವ ಕಣ್ಣುಗಳನ್ನೂ ಕುಗ್ಗಿದ ಮನಸ್ಸನ್ನೂ ಕೊಡು ವನು.
ಬಾರ ದಿರುವ ಮರಣಕ್ಕೋಸ್ಕರ ಕಾದುಕೊಂಡವರಿಗೂ ಅಡ ಗಿಸಿದ ನಿಧಿಗಿಂತಲೂ ಹೆಚ್ಚಾಗಿ ಅದಕ್ಕಾಗಿ ಅಗೆಯುತ್ತಾರೆ.
ಸಮಾಧಿ ಕಂಡುಕೊಂಡೆವೆಂದು ಸಂತೋಷ ಸಂಭ್ರಮವಾಗಿ ಹರ್ಷಿಸುವವರಿಗೂ
ದೇವರನ್ನು ಮರೆಯುವ ವರೆಲ್ಲರ ಹಾದಿಗಳು ಹಾಗೆಯೇ; ಕಪಟಿಯ ನಿರೀಕ್ಷೆಯು ನಾಶವಾಗುವದು.
ತನ್ನ ಸ್ನೇಹಿತರನ್ನು ಹೊಗಳಿ ಮಾತನಾಡುವವನ ಮಕ್ಕಳ ಕಣ್ಣುಗಳು ಕ್ಷೀಣವಾಗುವವು.
ಅವನ ಭರವಸವು ಅವನ ಗುಡಾರದೊಳಗಿಂದ ಕೀಳಲ್ಪಡುವುದು; ಅದು ಅವ ನನ್ನು ದಿಗಿಲುಗಳ ಅರಸನ ಬಳಿಗೆ ನಡಿಸುವದು.
ದೇವರು ಕಪಟಿಯ ಪ್ರಾಣವನ್ನು ತಕ್ಕೊಂಡರೆ ಅವನು ಲಾಭ ಮಾಡುವದರಲ್ಲಿ ನಿರೀಕ್ಷೆ ಏನು?
ಆತನು ಕರುಣೆ ಇಲ್ಲದೆ ಅವನ ಮೇಲೆ ಹಾಕು ತ್ತಾನೆ. ಆತನ ಕೈಯಲ್ಲಿಂದ ಅವನು ಓಡಿಯೇ ಓಡುತ್ತಾನೆ.ಜನರು ಅವನ ಕಡೆಗೆ ಚಪ್ಪಾಳೆ ತಟ್ಟುತ್ತಾರೆ. ಅವನ ಸ್ಥಳದೊಳಗಿಂದ ಅವನನ್ನು ಛೇ ಎಂದು ಹೊರಡಿಸುತ್ತಾರೆ.
ನಾನು ಬಡವರ ಇಷ್ಟವನ್ನು ಹಿಂತೆಗೆದಿದ್ದರೆ ವಿಧ ವೆಯ ಕಣ್ಣುಗಳನ್ನು ನಿರಾಶೆಪಡಿಸಿದ್ದರೆ,
ದುಷ್ಟತನ ಮಾಡುವವರು ಅಡಗಿ ಕೊಳ್ಳುವ ಹಾಗೆ ಕತ್ತಲೂ ಇಲ್ಲ, ಮರಣದ ನೆರಳೂ ಇಲ್ಲ.
ನಾನು ಕೂಗಿ ದಣಿದಿದ್ದೇನೆ; ನನ್ನ ಗಂಟಲು ಒಣಗಿದೆ; ನಾನು ದೇವ ರನ್ನು ಎದುರು ನೋಡುವದರಿಂದ ನನ್ನ ಕಣ್ಣುಗಳು ಕ್ಷೀಣಿಸುತ್ತವೆ.
ದುಷ್ಟನ ಭಯವು ಅವನ ಮೇಲೆ ಬರುವದು; ನೀತಿವಂತರ ಇಷ್ಟವು ಸಫಲವಾಗುವದು.
ತನ್ನ ತಂದೆ ತಾಯಿಯನ್ನಾ ಗಲಿ ಶಪಿಸುವವನ ದೀಪವು ಮಂಕಾದ ಕತ್ತಲೆಯಲ್ಲಿ ಆರಿಹೋಗುವದು.
ನಮಗಾದರೋ ನಮ್ಮ ಕಣ್ಣುಗಳು ನಮ್ಮ ವ್ಯರ್ಥವಾದ ಸಹಾಯಕ್ಕಾಗಿ ನೋಡಿ ಸೋತು ಹೋದವು; ನಮ್ಮ ಕಣ್ಣುಗಳು ನಮ್ಮನ್ನು ರಕ್ಷಿಸಲಾರದಂಥ ಜನಾಂಗಕ್ಕಾಗಿ ಕಾವಲಾಗಿದ್ದವು.
ಆದ ದರಿಂದ ತ್ವರೆಯಾಗಿ ಓಡುವವನು ನಾಶವಾಗುವನು. ಬಲಿಷ್ಠನು ತನ್ನ ತ್ರಾಣವನ್ನು ಬಲಪಡಿಸಿಕೊಳ್ಳಲಾರನು; ಪರಾಕ್ರಮಿಯು ತನ್ನ ಪ್ರಾಣವನ್ನು ಉಳಿಸಿಕೊಳ್ಳನು.
ಒಬ್ಬ ಮನುಷ್ಯನು ಸಿಂಹದಿಂದ ತಪ್ಪಿಸಿಕೊಂಡು ಓಡಿಹೋಗಿ ಕರಡಿಯನ್ನು ಎದುರುಗೊಂಡ ಹಾಗೆಯೂ ಇಲ್ಲವೆ ಅವನು ಮನೆಗೆ ಹೋಗಿ ಗೋಡೆಗೆ ತನ್ನ ಕೈ ಒರಗಿ ಸಿದಾಗ ಸರ್ಪವು ಕಚ್ಚಿದ ಹಾಗೆಯೂ ಇರುವದು.
ಕರ್ತನು ಯಜ್ಞವೇದಿಯ ಮೇಲೆ ನಿಂತಿರು ವದನ್ನು ನಾನು ಕಂಡೆನು. ಆತನು ಹೇಳಿದ್ದೇ ನಂದರೆ--ಹೊಸ್ತಿಲುಗಳು ಕದಲುವಂತೆ ಆಧಾರ ಬೋದಿಗೆಗಳನ್ನು ಬಲವಾಗಿ ಹೊಡೆದು ಅವು ಎಲ್ಲರ ತಲೆಗಳ ಮೇಲೆ ಬೀಳುವ ಹಾಗೆ ಅವುಗಳನ್ನು ಕಡಿದು ಬಿಡು; ಅವರಲ್ಲಿ ಉಳಿದವರನ್ನು ನಾನು ಕೊಲ್ಲುವೆನು; ಅವರಲ್ಲಿ ಓಡಿ ಹೋಗುವವನು ಓಡಿಹೋಗಲಾಗು ವದಿಲ್ಲ; ಅವರಲ್ಲಿ ತಪ್ಪಿಸಿಕೊಳ್ಳುವವನು ತಪ್ಪಿಸಿಕೊಳ್ಳ ಲಾಗುವದಿಲ್ಲ.
ಆಗ ಅವನು ಪಾತಾಳದೊಳಗೆ ಯಾತನೆಯಲ್ಲಿ ದ್ದವನಾಗಿ ತನ್ನ ಕಣ್ಣುಗಳನ್ನು ಮೇಲಕ್ಕೆತ್ತಿ ದೂರದಿಂದ ಅಬ್ರಹಾಮನನ್ನೂ ಅವನ ಎದೆಯಲ್ಲಿದ್ದ ಲಾಜರನನೂ ನೋಡಿದನು.
ಎಷ್ಟೋ ದೊಡ್ಡ ಈ ರಕ್ಷಣೆಯನ್ನು ನಾವು ಅಲಕ್ಷ್ಯಮಾಡಿದರೆ ತಪ್ಪಿಸಿ ಕೊಳ್ಳುವದು ಹೇಗೆ? ಇದು ಕರ್ತನಿಂದ ಮೊದಲು ಹೇಳಲಾರಂಭಿಸಿತು. ಆತನಿಂದ ಕೇಳಿದವರು ಇದನ್ನು ನಮಗೆ ಸ್ಥಿರಪಡಿಸಿದರು.