Home Bibles ಯೆರೆಮಿಯ 42:6 · ಕನ್ನಡ ಬೈಬಲ್
ಯೆರೆಮಿಯ 42:6 · ಕನ್ನಡ ಬೈಬಲ್

ಅಂದರೆ ಗಂಡಸರನ್ನೂ ಹೆಂಗಸರನ್ನೂ ಮಕ್ಕಳನ್ನೂ ಅರಸನ ಕುಮಾರ್ತೆಯ ರನ್ನೂ ಕಾವಲಿನವರ ಅಧಿಪತಿಯಾದ ನೆಬೂಜರದಾ ನನು ಶಾಫಾನನ ಮಗನಾದ ಅಹೀಕಾಮನ ಮಗನಾದ ಗೆದಲ್ಯನ ಸಂಗಡ ಬಿಟ್ಟವರೆಲ್ಲರನ್ನೂ ಪ್ರವಾದಿಯಾದ ಯೆರೆವಿಾಯನನ್ನೂ ನೇರೀಯನ ಮಗನಾದ ಬಾರೂಕನನ್ನೂ ತೆಗೆದುಕೊಂಡು ಐಗುಪ್ತದೇಶಕ್ಕೆ ಹೋದರು.

Cross references

ನಿರ್ಗಮಕಾಂಡ 24:7

ಇದಲ್ಲದೆ ಒಡಂಬಡಿಕೆಯ ಪ್ರುಸ್ತಕವನ್ನು ತೆಗೆದುಕೊಂಡು ಜನರ ಮುಂದೆ ಓದಿದನು. ಆಗ ಅವರು--ಕರ್ತನು ಹೇಳುವದನ್ನೆಲ್ಲಾ ನಾವು ಮಾಡಿ ವಿಧೇಯರಾಗುವೆವು ಅಂದರು.

ದ್ವಿತೀಯೋಪದೇಶಕಾಂಡ 5:29

ಅವರು ನನಗೆ ಭಯಪಟ್ಟು ನನ್ನ ಆಜ್ಞೆಗಳನ್ನೆಲ್ಲಾ ಎಂದೆಂದಿಗೂ ಕೈಕೊಳ್ಳುವಂಥ ಹೃದಯವು ಅವರಲ್ಲಿದ್ದರೆ ಎಷ್ಟೋ ಒಳ್ಳೇದು; ಆಗ ಅವರಿಗೂ ಅವರ ಮಕ್ಕಳಿಗೂ ಎಂದೆಂ ದಿಗೂ ಒಳ್ಳೆಯದಾಗುವದು.

ದ್ವಿತೀಯೋಪದೇಶಕಾಂಡ 5:33

ನೀವು ಬದುಕುವ ಹಾಗೆಯೂ ನಿಮಗೆ ಒಳ್ಳೆಯದಾಗುವ ಹಾಗೆಯೂ ನೀವು ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ನಿಮ್ಮ ದಿವಸಗಳು ಬಹಳವಾಗುವ ಹಾಗೆಯೂ ನಿಮ್ಮ ದೇವರಾದ ಕರ್ತನು ನಿಮಗೆ ಆಜ್ಞಾಪಿಸಿದ ಮಾರ್ಗ ಗಳಲ್ಲಿ ನಡಕೊಳ್ಳಬೇಕು.

ದ್ವಿತೀಯೋಪದೇಶಕಾಂಡ 6:2

ನೀನು ನಿನ್ನ ದೇವರಾದ ಕರ್ತನಿಗೆ ಭಯಪಟ್ಟು ನಾನು ನಿನಗೆ ಆಜ್ಞಾಪಿಸುವ ಆತನ ಎಲ್ಲಾ ನಿಯಮಗಳನ್ನು ಮತ್ತು ಆಜ್ಞೆಗಳನ್ನು ನೀನೂ ನಿನ್ನ ಮಗನೂ ನಿನ್ನ ಮೊಮ್ಮ ಗನೂ ನಿನ್ನ ಜೀವಿತದ ದಿವಸಗಳಲ್ಲೆಲ್ಲಾ ಕೈಕೊ ಳ್ಳುವ ಹಾಗೆಯೂ ನಿನ್ನ ದಿವಸಗಳು ಬಹಳವಾಗುವ ಹಾಗೆಯೂ ನಿಮಗೆ ಬೋಧಿಸಬೇಕೆಂದು ನಿಮ್ಮ ದೇವ ರಾದ ಕರ್ತನು ಆಜ್ಞಾಪಿಸಿದ ಆಜ್ಞೆ ವಿಧಿ ನ್ಯಾಯ ಗಳು ಇವೇ.

ಯೆಹೋಶುವ 24:24

ಜನರು ಯೆಹೋಶುವನಿಗೆ--ನಾವು ನಮ್ಮ ದೇವರಾದ ಕರ್ತನನ್ನು ಸೇವಿಸಿ ಆತನ ಮಾತಿಗೆ ವಿಧೇಯರಾಗುವೆವು ಅಂದರು.

ಕೀರ್ತನೆಗಳು 78:36

ಆದಾಗ್ಯೂ ತಮ್ಮ ಬಾಯಿಗಳಿಂದ ಆತನಿಗೆ ಮುಖಸ್ತುತಿ ಮಾಡಿ ತಮ್ಮ ನಾಲಿಗೆಯಿಂದ ಆತನಿಗೆ ಸುಳ್ಳು ಹೇಳಿದರು.

ಕೀರ್ತನೆಗಳು 81:13

ಹಾ, ನನ್ನ ಜನರು ನನ್ನ ಮಾತನ್ನು ಕೇಳಿ, ಇಸ್ರಾಯೇಲು ನನ್ನ ಮಾರ್ಗದಲ್ಲಿ ನಡೆದುಕೊಂಡರೆ,

ಕೀರ್ತನೆಗಳು 128:2

ಹೀಗಾದರೆ ನಿನ್ನ ಕೈಗಳ ಕಷ್ಟಾರ್ಜಿತವನ್ನು ನೀನು ಊಟಮಾಡಿ ಸಂತೋಷ ವುಳ್ಳವನಾಗಿರುವಿ, ನಿನಗೆ ಒಳ್ಳೇಯದಾಗುವದು.

ಯೆಶಾಯ 3:10

ನೀತಿವಂತನಿಗೆ ನೀವು--ಅವನಿಗೆ ಒಳ್ಳೇದಿರಲಿ ಎಂದು ಹೇಳಿರಿ; ಅವರು ತಮ್ಮ ಕ್ರಿಯೆಗಳ ಫಲವನ್ನು ತಿನ್ನುವರು.

ರೋಮಾಪುರದವರಿಗೆ 7:7

ಹಾಗಾದರೆ ನಾವು ಏನು ಹೇಳೋಣ? ನ್ಯಾಯ ಪ್ರಮಾಣವು ಪಾಪವೋ? ಹಾಗೆ ಎಂದಿಗೂ ಅಲ್ಲ; ನ್ಯಾಯಪ್ರಮಾಣದಿಂದಲೇ ಹೊರತು ಪಾಪವೆಂಬದು ಏನೋ ನನಗೆ ಗೊತ್ತಿರಲಿಲ್ಲ. ಯಾಕಂದರೆ--ನೀನು ಆಶಿಸಬಾರದು ಎಂದು ನ್ಯಾಯಪ್ರಮಾಣವು ಹೇಳ ದಿದ್ದರೆ ದುರಾಶೆಯೆಂದರೆ ಏನೋ ನನಗೆ ತಿಳಿಯು ತ್ತಿರಲಿಲ್ಲ.

ರೋಮಾಪುರದವರಿಗೆ 7:13

ಹಾಗಾದರೆ ಹಿತವಾದದ್ದು ನನಗೆ ಮರಣಕ್ಕೆ ಕಾರಣವಾಯಿತೋ? ಹಾಗೆ ಎಂದಿಗೂ ಅಲ್ಲ; ಆದರೆ ಪಾಪವು ಹಿತವಾದದ್ದರ ಮೂಲಕ ನನ್ನಲ್ಲಿ ಮರಣವನ್ನು ಉಂಟುಮಾಡಿದ್ದರಿಂದ ಅದು ಪಾಪವೇ ಎಂದು ಕಾಣಿಸಿಕೊಂಡಿತು. ಹೀಗೆ ಆಜ್ಞೆಯ ಮೂಲಕ ಪಾಪವು ಅತ್ಯಧಿಕವಾದ ಪಾಪವಾಗಿ ತೋರಿಬಂತು.

ರೋಮಾಪುರದವರಿಗೆ 8:7

ಶರೀರ ಸಂಬಂಧವಾದ ಮನಸ್ಸು ದೇವರಿಗೆ ಶತ್ರುತ್ವವು; ಕಾರಣವೇನಂದರೆ ಅಂಥ ಮನಸ್ಸು ದೇವರ ನಿಯಮಕ್ಕೆ ಒಳಪಡುವದಿಲ್ಲ, ಒಳಪಡುವದಕ್ಕಾಗುವದೂ ಇಲ್ಲ.

Interlinear

Choose Theme