ಅದು ನನಗೆ ಆನಂದದ ಹೆಸರೂ ನಾನು ಅವರಿಗೆ ಒಳ್ಳೇದನ್ನೆಲ್ಲಾ ಮಾಡುವದನ್ನು ಕೇಳುವ ಭೂಮಿಯಲ್ಲಿರುವ ಎಲ್ಲಾ ಜನಾಂಗಗಳ ಮುಂದೆ ಸ್ತೋತ್ರವೂ ಮಹಿಮೆಯೂ ಆಗುವದು; ನಾನು ಅದಕ್ಕೆ ಉಂಟು ಮಾಡುವ ಮೇಲಿಗಾಗಿಯೂ ಎಲ್ಲಾ ಅಭಿವೃದ್ಧಿಗಾಗಿಯೂ ಅವರು ಹೆದರಿ ನಡುಗುವರು.
Cross references
ಒಡೆಯನೇ, ನನ್ನ ಮಾತನ್ನು ಕೇಳು, ಆ ಭೂಮಿಯು ನಾನೂರು ಬೆಳ್ಳಿಯ ಶೆಕೆಲ್ ಬೆಲೆಯುಳ್ಳದ್ದು; ಅದು ನನಗೂ ನಿನಗೂ ಏನು? ನಿನ್ನ ಹೆಂಡತಿಯ ಶವವನ್ನು ಹೂಣಿಡು ಅಂದನು.
ಅಬ್ರಹಾಮನು ಎಫ್ರೋನನ ಮಾತನ್ನು ಕೇಳಿದನು. ಆದದರಿಂದ ಹೇತನ ಮಕ್ಕಳಿಗೆ ಕೇಳುವಂತೆ ಎಫ್ರೋನನು ಹೇಳಿದ ಬೆಲೆ ಅಂದರೆ ವರ್ತಕರಲ್ಲಿ ನಡಿಯುವ ನಾಲ್ಕುನೂರು ಶೆಕೆಲು (ಬೆಳ್ಳಿಯನ್ನು) ತೂಗಿ ಅವನಿಗೆ ಕೊಟ್ಟನು.
ಈ ಪ್ರಕಾರ (ಮಿದ್ಯಾನ್ಯರ ವರ್ತಕರು ಹಾದುಹೋಗುತ್ತಿದ್ದಾಗ) ಅವರು ಯೋಸೇಫನನ್ನು ತಗ್ಗಿನಿಂದ ಮೇಲೆತ್ತಿ ಇಷ್ಮಾಯೇಲ್ಯ ರಿಗೆ ಅವನನ್ನು ಇಪ್ಪತ್ತು ಬೆಳ್ಳಿಯ ನಾಣ್ಯಗಳಿಗೆ ಮಾರಿದರು, ಅವರು ಯೋಸೇಫನನ್ನು ಐಗುಪ್ತಕ್ಕೆ ಕರಕೊಂಡು ಹೋದರು.
ಅರ ಸನು ಹಾದು ಹೋಗುತ್ತಿರುವಾಗ, ಇವನು ಅರಸನಿಗೆ ಕೂಗಿ ಹೇಳಿದ್ದೇನಂದರೆ--ನಿನ್ನ ಸೇವಕನು ಯುದ್ಧಕ್ಕೆ ಹೋಗಿರುವಾಗ ಇಗೋ, ಒಬ್ಬ ಮನುಷ್ಯನು ತೊಲಗಿ ಒಬ್ಬನನ್ನು ನನ್ನ ಬಳಿಗೆ ತಕ್ಕೊಂಡು ಬಂದು--ಈ ಮನುಷ್ಯನನ್ನು ಕಾಯಿ; ಇವನು ಹೇಗಾದರೂ ಇಲ್ಲದೆ ಹೋದರೆ ನಿನ್ನ ಪ್ರಾಣವು ಅವನ ಪ್ರಾಣಕ್ಕೆ ಬದ ಲಾಗಿರುವುದು; ಇಲ್ಲವೆ ನೀನು ಒಂದು ತಲಾಂತು ಬೆಳ್ಳಿಯನ್ನು ಕೊಡಬೇಕು ಅಂದನು.
ಅದು ಅರಸನಿಗೆ ಸಮ್ಮತಿಯಾದರೆ ಅವರು ಸಂಹರಿಸಲ್ಪಡುವ ಹಾಗೆ ಬರೆಯಲ್ಪಡಲಿ. ಆಗ ನಾನು ಅರಸನ ಬೊಕ್ಕಸಕ್ಕೆ ತರುವದಕ್ಕೆ ಈ ಕೆಲಸ ಮಾಡುವವರ ಕೈಗಳಲ್ಲಿ ಹತ್ತು ಸಾವಿರ ಬೆಳ್ಳಿಯ ತಲಾಂತುಗಳನ್ನು ಕೊಡು ವೆನು ಅಂದನು.
ಆಹಾರವಲ್ಲದ್ದಕ್ಕೆ ಹಣವನ್ನೂ ತೃಪ್ತಿಪಡಿಸ ದಕ್ಕೆ ನಿಮ್ಮ ದುಡಿತವನ್ನೂ ವ್ಯಯಮಾಡುವದು ಯಾಕೆ? ಶ್ರದ್ಧೆಯಿಂದ ನನ್ನ ಕಡೆಗೆ ಕಿವಿಗೊಡಿರಿ ಮತ್ತು ಒಳ್ಳೆಯ ದನ್ನು ನೀವು ಉಣ್ಣಿರಿ, ನಿಮ್ಮ ಪ್ರಾಣವು ಕೊಬ್ಬಿನಲ್ಲಿ ಆನಂದಿಸಲಿ!
ಹಾಗೆಯೇ ನಾನು ಅವಳನ್ನು ನನಗಾಗಿ ಹದಿನೈದು ಬೆಳ್ಳಿಯ ತುಂಡುಗಳಿಗೂ ಮತ್ತು ಹೋಮೆರ್ ಜವೆಗೋಧಿಗೂ ಒಂದುವರೆ ಹೋಮೆರ್ ಜವೆಗೋಧಿಗೂ ಕೊಂಡುಕೊಂಡೆನು.
ಆಗ ನಾನು ಅವರಿಗೆ--ನಿಮ್ಮ ಕಣ್ಣುಗಳಲ್ಲಿ ಒಳ್ಳೇದಾಗಿ ತೋರಿದರೆ ನನ್ನ ಸಂಬಳವನ್ನು ಕೊಡಿರಿ, ಇಲ್ಲದಿದ್ದರೆ ಬಿಡಿರಿ ಅಂದೆನು. ಆಗ ಅವರು ನನ್ನ ಸಂಬಳಕ್ಕಾಗಿ ಮೂವತ್ತು ರೂಪಾಯಿಗಳನ್ನು ತೂಕಮಾಡಿದರು.