Home Bibles ಯೆರೆಮಿಯ 28:14 · ಕನ್ನಡ ಬೈಬಲ್
ಯೆರೆಮಿಯ 28:14 · ಕನ್ನಡ ಬೈಬಲ್

ನಿಮಗೆ ಕಂಡುಕೊಳ್ಳಲ್ಪಡುವೆನೆಂದು ಕರ್ತನು ಅನ್ನುತ್ತಾನೆ; ನಿಮ್ಮ ಸೆರೆಯನ್ನು ತಿರುಗಿಸಿ ನಾನು ನಿಮ್ಮನ್ನು ಓಡಿಸಿ ಬಿಟ್ಟ ಎಲ್ಲಾ ಜನಾಂಗಗಳಿಂದಲೂ ಎಲ್ಲಾ ಸ್ಥಳಗಳಿಂದಲೂ ನಿಮ್ಮನ್ನು ಕೂಡಿಸುವೆನೆಂದು ಕರ್ತನು ಅನ್ನುತ್ತಾನೆ; ನಾನು ಯಾವ ಸ್ಥಳದಿಂದ ನಿಮ್ಮನ್ನು ಸೆರೆಯಾಗಿ ಕಳುಹಿಸಿ ದೆನೋ ಆ ಸ್ಥಳಕ್ಕೆ ನಿಮ್ಮನ್ನು ತಿರುಗಿ ಬರಮಾಡುವೆನು.

Cross references

ದ್ವಿತೀಯೋಪದೇಶಕಾಂಡ 4:20

ನಿಮ್ಮನ್ನೇ ಕರ್ತನು ತಕ್ಕೊಂಡು ನೀವು ಈ ದಿನ ಇರುವ ಪ್ರಕಾರ ತನಗೆ ಸ್ವಾಸ್ತ್ಯವಾದ ಜನವಾಗುವ ಹಾಗೆ ಕಬ್ಬಿಣದ ಕುಲುಮೆಯೊಳಗಿಂದ ಅಂದರೆ ಐಗುಪ್ತದಿಂದ ಹೊರಗೆ ಬರಮಾಡಿದ್ದಾನೆ.

ದ್ವಿತೀಯೋಪದೇಶಕಾಂಡ 28:48

ಹಸಿವೆಯಲ್ಲಿ, ದಾಹದಲ್ಲಿ, ಬೆತ್ತಲೆಯಲ್ಲಿ, ಎಲ್ಲವುಗಳ ಕೊರತೆಯಲ್ಲಿ ದೇವರು ನಿನ್ನ ಮೇಲೆ ಕಳುಹಿಸುವ ನಿನ್ನ ಶತ್ರುಗಳನ್ನು ಸೇವಿಸಬೇಕು; ಆತನು ನಿನ್ನನ್ನು ನಾಶಮಾಡುವ ವರೆಗೆ ಕಬ್ಬಿಣದ ನೊಗವನ್ನು ನಿನ್ನ ಕುತ್ತಿಗೆಯ ಮೇಲೆ ಹೊರಿ ಸುವನು.

ಯೆಶಾಯ 14:4

ಹೀಗೆ ಹಿಂಸಕನು ಕೊನೆ ಗೊಂಡನು, ಬಂಗಾರದ ಪಟ್ಟಣವು ಸುಮ್ಮನೆ ಇದೆ.

ಯೆರೆಮಿಯ 25:9

ಈ ಮನೆಯು ಶಿಲೋವಿನ ಹಾಗೆ ಆಗುವದೆಂದೂ ಈ ಪಟ್ಟಣವು ನಿವಾಸಿಗಳಿಲ್ಲದೆ ಹಾಳಾಗುವದೆಂದೂ ಕರ್ತನ ಹೆಸರಿನಲ್ಲಿ ಯಾಕೆ ನೀನು ಪ್ರವಾದಿಸಿದ್ದೀ ಅಂದರು. ಆಗ ಜನರೆಲ್ಲರೂ ಕರ್ತನ ಆಲಯದಲ್ಲಿ ಯೆರೆವಿಾಯನಿಗೆ ವಿರೋಧವಾಗಿ ಕೂಡಿಕೊಂಡರು.

ಯೆರೆಮಿಯ 27:4

ಯೆಹೂ ದದ ಅರಸನಾದ ಯೆಹೋಯಾಕೀಮನ ಮಗನಾದ ಯೆಕೊನ್ಯನನ್ನೂ ಬಾಬೆಲಿಗೆ ಹೋದ ಯೆಹೂದದ ಸೆರೆಯವರೆಲ್ಲರನ್ನೂ ನಾನು ತಿರುಗಿ ಈ ಸ್ಥಳಕ್ಕೆ ಬರ ಮಾಡುವೆನೆಂದು ಕರ್ತನು ಅನ್ನುತ್ತಾನೆ; ಬಾಬೆಲಿನ ಅರಸನ ನೊಗವನ್ನು ಮುರಿದುಬಿಡುವೆನು.

ಯೆರೆಮಿಯ 27:6

ಪ್ರವಾದಿಯಾದ ಯೆರೆವಿಾ ಯನು ಹೇಳಿದ್ದೇನಂದರೆ-- ಆಮೆನ್‌: ಕರ್ತನು ಹಾಗೆಯೇ ಮಾಡಲಿ: ನೀನು ಪ್ರವಾದಿಸಿದ ನಿನ್ನ ವಾಕ್ಯಗಳನ್ನು ಕರ್ತನು ನೆರವೇರಿಸಿ ಕರ್ತನ ಆಲಯದ ಪಾತ್ರೆಗಳನ್ನೂ ಸೆರೆಯವರೆಲ್ಲರನ್ನೂ ಬಾಬೆಲಿನಿಂದ ತಿರುಗಿ ಈ ಸ್ಥಳಕ್ಕೆ ಬರಮಾಡಲಿ.

ಯೆರೆಮಿಯ 40:4

ಅವನು ಗೆದಲ್ಯನನ್ನು ಕೊಂದುಹಾಕಿದ ಎರಡನೇ ದಿನದಲ್ಲಿ ಅದು ಯಾರಿಗೂ ತಿಳಿಯದಿರುವಾಗ

ದಾನಿಯೇಲ 2:38

ಮನುಷ್ಯರ ಮಕ್ಕಳು, ಭೂಮಿಯ ಮೃಗಗಳೂ ಆಕಾಶದ ಪಕ್ಷಿಗಳೂ ವಾಸಿಸುವಂತಾದ್ದೆಲ್ಲವನ್ನೂ ನಿನ್ನ ಕೈಯಲ್ಲಿ ಕೊಟ್ಟು ಅವೆಲ್ಲವುಗಳನ್ನು ಆಳುವಂತೆ ನಿನ್ನನ್ನು ಮಾಡಿದ್ದಾನೆ. ಆ ಬಂಗಾರದ ತಲೆಯು ನೀನೇ.

ಪ್ರಕಟನೆ 17:12

ನೀನು ಕಂಡ ಆ ಹತ್ತು ಕೊಂಬುಗಳು ರಾಜ್ಯವನ್ನು ಇನ್ನೂ ಹೊಂದದಿರುವ ಹತ್ತು ಮಂದಿ ರಾಜರು. ಅವರು ಮೃಗದೊಂದಿಗೆ ರಾಜರಂತೆ ಒಂದು ತಾಸಿನವರೆಗೆ ಅಧಿಕಾರವನ್ನು ಹೊಂದುತ್ತಾರೆ.

Interlinear

Choose Theme