ಆದದರಿಂದ ಇನ್ನು ನಿಮ್ಮ ಸಂಗಡ ವ್ಯಾಜ್ಯ ವಾಡುವೆನೆಂದು ಕರ್ತನು ಅನ್ನುತ್ತಾನೆ; ಇದಲ್ಲದೆ ನಿಮ್ಮ ಮಕ್ಕಳ ಮಕ್ಕಳ ಸಂಗಡ ವ್ಯಾಜ್ಯವಾಡುವೆನು.
Cross references
ನೀನು ಅವುಗಳಿಗೆ ಅಡ್ಡಬೀಳಬಾರದು, ಸೇವಿಸಲೂ ಬಾರದು. ನಿನ್ನ ದೇವರಾದ ಕರ್ತನಾಗಿರುವ ನಾನು ರೋಷವುಳ್ಳ ದೇವರಾಗಿದ್ದೇನೆ. ನನ್ನನ್ನು ಹಗೆ ಮಾಡುವ ತಂದೆಗಳ ಅಪರಾಧವನ್ನು ಮಕ್ಕಳ ಮೇಲೆ ಯೂ ಮೂರನೆಯ ನಾಲ್ಕನೆಯ ತಲೆಗಳ ವರೆಗೂ ಬರಮಾಡುವೆನು.
ಆಗ ನಾನು ಆ ಮನುಷ್ಯನಿಗೂ ಅವನ ಕುಟುಂಬಕ್ಕೂ ವಿರೋಧವಾ ಗಿಯೂ ವಿಮುಖನಾಗಿಯೂ ಇರುವೆನು. ಮೋಲೆಕ ನೊಂದಿಗೆ ವ್ಯಭಿಚಾರಮಾಡಿದ್ದಕ್ಕಾಗಿ ಅವನನೂ ವ್ಯಭಿಚಾರಮಾಡುವದಕ್ಕೆ ಹಿಂಬಾಲಿಸುವವರೆಲ್ಲರನ್ನೂ ಅವರ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.
ತನ್ನ ಜನರಿಗೆ ನ್ಯಾಯ ತೀರಿಸುವದಕ್ಕೆ ಮೇಲಿನಿಂದ ಆಕಾಶಗಳನ್ನೂ ಭೂಮಿ ಯನ್ನೂ ಕರೆಯುತ್ತಾನೆ.
ಕರ್ತನು ವಾದಿಸುವದಕ್ಕೂ ಜನರಿಗೆ ನ್ಯಾಯ ತೀರಿಸುವದಕ್ಕೂ ಎದ್ದು ನಿಂತಿದ್ದಾನೆ.
ನನಗೆ ಜ್ಞಾಪಕ ಪಡಿಸು, ನಾವಿಬ್ಬರೂ ವಾದಿಸುವಾ, ನೀನು ನೀತಿವಂತ ನೆಂದು ಪ್ರಚುರಪಡಿಸು.
ಏಕೆ ನನ್ನ ಸಂಗಡ ವಾದಿಸುತ್ತೀರಿ? ನೀವೆಲ್ಲರು ನನಗೆ ವಿರೋಧವಾಗಿ ದ್ರೋಹಮಾಡಿ ದ್ದೀರಿ ಎಂದು ಕರ್ತನು ಅನ್ನುತ್ತಾನೆ.
ಆದಾಗ್ಯೂ ನೀನು--ನಾನು ನಿರಪರಾಧಿಯಾಗಿರುವ ಕಾರಣ ನಿಶ್ಚಯವಾಗಿ ಆತನ ಕೋಪವು ನನ್ನನ್ನು ಬಿಟ್ಟು ತಿರುಗುವದೆಂದು ಹೇಳುತ್ತೀ; ನಾನು ಪಾಪ ಮಾಡಲಿಲ್ಲವೆಂದು ನೀನು ಹೇಳುವದ ರಿಂದ ಇಗೋ, ನಾನು ನಿನಗೆ ನ್ಯಾಯತೀರಿಸುವೆನು.
ನಿಮ್ಮನ್ನು ಜನಗಳಿರುವ ಅರಣ್ಯದೊಳಗೆ ತಂದು ನಾನು ನಿಮ್ಮೊಂದಿಗೆ ಅಲ್ಲಿ ಮುಖಾಮುಖಿಯಾಗಿ ವಾದಿಸುವೆನು.
ನಿಮ್ಮ ತಾಯಿಯ ಸಂಗಡ ವಾದಿಸಿರಿ, ವಾದಿಸಿರಿ; ಅವಳು ನನ್ನ ಹೆಂಡತಿಯಲ್ಲ; ಇಲ್ಲವೆ ನಾನು ಅವಳ ಗಂಡನಲ್ಲ; ಆದದರಿಂದ ಅವಳು ತನ್ನ ದೃಷ್ಟಿಯಿಂದ ತನ್ನ ವ್ಯಭಿಚಾರತ್ವಗಳನ್ನು ತನ್ನ ಸ್ತನಗಳ ಮಧ್ಯದಿಂದ ತನ್ನ ವ್ಯಭಿಚಾರಗಳನ್ನು ತೊಲಗಿಸಲಿ.
ಇಸ್ರಾಯೇಲಿನ ಮಕ್ಕಳಾದ ನೀವು ಕರ್ತನ ವಾಕ್ಯವನ್ನು ಕೇಳಿರಿ; ದೇಶದ ನಿವಾಸಿಗಳ ಸಂಗಡ ಕರ್ತನಿಗೆ ತರ್ಕವುಂಟು; ದೇಶದಲ್ಲಿ ಸತ್ಯವೂ ಇಲ್ಲ, ಕನಿಕರವೂ ಇಲ್ಲ, ಇಲ್ಲವೆ ದೇವರ ತಿಳುವಳಿ ಕೆಯೂ ಇಲ್ಲ.
ಗರ್ಭದಲ್ಲಿ ಅವನು ತನ್ನ ಸಹೋದರ ನನ್ನು ಹಿಮ್ಮಡಿಯಿಂದ ಹಿಡಿದು ತನ್ನ ಶಕ್ತಿಯಿಂದ ದೇವರೊಂದಿಗೆ ಬಲಹೊಂದಿದನು.
ಓ ಬೆಟ್ಟಗಳೇ, ಭೂಮಿಯ ಬಲವಾದ ಅಸ್ತಿವಾರಗಳಾದ ಬಂಡೆಗಳೇ, ಕರ್ತನ ವ್ಯಾಜ್ಯವನ್ನು ಕೇಳಿರಿ; ಕರ್ತನಿಗೆ ತನ್ನ ಜನರ ಸಂಗಡ ವ್ಯಾಜ್ಯ ಉಂಟು, ಇಸ್ರಾಯೇಲಿನ ಸಂಗಡ ಆತನು ತರ್ಕಿಸುತ್ತಾನೆ.