Home Bibles ☰ Books ಯೆರೆಮಿಯ 13:7 · ಕನ್ನಡ ಬೈಬಲ್
ಯೆರೆಮಿಯ 13:7 · ಕನ್ನಡ ಬೈಬಲ್

ಓ ಕರ್ತನೇ, ನಮ್ಮ ಅಕ್ರಮಗಳು ನಮಗೆ ವಿರೋಧ ವಾಗಿ ಸಾಕ್ಷಿಕೊಟ್ಟರೂ ನೀನೇ ನಿನ್ನ ಹೆಸರಿಗೋಸ್ಕರ ನಡಿಸು; ನಮ್ಮ ಹಿಂಜರಿಯುವಿಕೆಗಳು ಅನೇಕವಾಗಿವೆ; ನಿನಗೆ ವಿರೋಧವಾಗಿ ಪಾಪಮಾಡಿದ್ದೇವೆ.

Cross references

ಯೆಶಾಯ 64:6

ನಾವೆಲ್ಲರೂ ಅಶುದ್ದವಾದದ್ದರ ಹಾಗೆ ಇದ್ದೇವೆ; ನಮ್ಮ ನೀತಿ ಕಾರ್ಯಗಳು ಮೈಲಿಗೆ ವಸ್ತ್ರದ ಹಾಗಿವೆ; ನಾವೆಲ್ಲರೂ ಎಲೆಯ ಹಾಗೆ ಬಾಡುತ್ತೇವೆ; ನಮ್ಮ ಅಕ್ರಮಗಳು ಗಾಳಿಯಂತೆ ನಮ್ಮನ್ನು ಎತ್ತಿಕೊಂಡು ಹೋಗಿವೆ.

ಯೆರೆಮಿಯ 13:10

ಕರ್ತನು ಈ ಜನರಿಗೆ ಹೀಗೆ ಹೇಳುತ್ತಾನೆ--ಹೀಗೆ ತಿರುಗಾಡುವದಕ್ಕೆ ಅವರು ಪ್ರೀತಿಮಾಡಿದ್ದಾರೆ; ತಮ್ಮ ಕಾಲುಗಳನ್ನು ಹಿಂದೆಗೆಯಲಿಲ್ಲ; ಆದದರಿಂದ ಕರ್ತನು ಅವರನ್ನು ಅಂಗೀಕರಿಸುವದಿಲ್ಲ , ಈಗಲೇ ಅವರ ಅಕ್ರಮವನ್ನು ಜ್ಞಾಪಕಮಾಡಿಕೊಳ್ಳುವನು; ಅವರ ಪಾಪಗಳನ್ನು ವಿಚಾರಿಸುವನು.

ಯೆರೆಮಿಯ 24:1

ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಮೊದಲನೇ ವರುಷವಾಗಿದ್ದ ಯೆಹೂ ದದ ಅರಸನಾದ ಯೋಷೀಯನ ಮಗನಾದ ಯೆಹೋ ಯಾಕೀಮನ ನಾಲ್ಕನೇ ವರುಷದಲ್ಲಿ ಯೆಹೂದದ ಸಮಸ್ತ ಜನರ ವಿಷಯ ಯೆರೆವಿಾಯನಿಗೆ ಉಂಟಾದ ವಾಕ್ಯವು.

ಯೆರೆಮಿಯ 24:8

ಆದದರಿಂದ ಸೈನ್ಯಗಳ ಕರ್ತನು ಹೀಗೆ ಹೇಳು ತ್ತಾನೆ--

ಯೆಹೆಜ್ಕೇಲ 15:3

ಕಟ್ಟಿಗೆಯನ್ನು ತೆಗೆದುಕೊಂಡು ಅದರಿಂದ ಯಾವ ಕೆಲಸವನ್ನಾದರೂ ಮಾಡುವರೋ? ಅಥವಾ ಅದರ ಮೇಲೆ ಯಾವ ಸಾಮಗ್ರಿಯನನ್ನಾದರೂ ನೇತುಹಾಕು ವದಕ್ಕೆ ಅದರಿಂದ ಗೂಟವನ್ನು ಮಾಡಿಕೊಳ್ಳುವರೋ?

ಜೆಕರ್ಯ 3:3

ಯೆಹೋಶು ವನು ಮೈಲಿಗೆಯಾದ ವಸ್ತ್ರಗಳನ್ನು ತೊಟ್ಟುಕೊಂಡವ ನಾಗಿ ದೂತನ ಮುಂದೆ ನಿಂತನು.

ಲೂಕ 14:34

ಉಪ್ಪು ಒಳ್ಳೇದು; ಆದರೆ ಉಪ್ಪು ತನ್ನ ರುಚಿ ಯನ್ನು ಕಳೆದುಕೊಂಡರೆ ಅದಕ್ಕೆ ಇನ್ನಾತರಿಂದ ರುಚಿ ಬಂದೀತು?ಅದು ಭೂಮಿಗಾದರೂ ತಿಪ್ಪೆ ಗಾದರೂ ಪ್ರಯೋಜನವಿಲ್ಲ; ಅದನ್ನು ಜನರು ಹೊರಗೆ ಹಾಕುತ್ತಾರೆ. ಕೇಳುವದಕ್ಕೆ ಕಿವಿಗಳುಳ್ಳವನು ಕೇಳಲಿ ಅಂದನು.

ರೋಮಾಪುರದವರಿಗೆ 3:12

ಎಲ್ಲರೂ ದಾರಿತಪ್ಪಿದವರಾಗಿ ಕೆಲಸಕ್ಕೆ ಬಾರದವರಾದರು, ಒಳ್ಳೆ ಯದನ್ನು ಮಾಡುವವನು ಇಲ್ಲ, ಒಬ್ಬನಾದರೂ ಇಲ್ಲ.

ಫಿಲೇಮೋನ 1:11

ಅವನು ಕಳೆದುಹೋದ ಸಮಯದಲ್ಲಿ ನಿನಗೆ ಅಪ್ರಯೋಜಕ ನಾಗಿದ್ದನು. ಈಗ ನಿನಗೂ ನನಗೂ ಪ್ರಯೋಜನ ವಾಗಿದ್ದಾನೆ.

Interlinear

Choose Theme