ಆಗ ಕರ್ತನು ನನಗೆ--ನೀನು ಚೆನ್ನಾಗಿ ನೋಡಿದ್ದೀ; ನನ್ನ ವಾಕ್ಯವನ್ನು ನೆರವೇರಿಸಲು ತ್ವರೆಪಡುವೆನು ಅಂದನು.
Cross references
ನೀವು ನನ್ನ ಹತ್ತಿರ ಮಾತನಾಡಿದಾಗ ಕರ್ತನು ನಿಮ್ಮ ಮಾತುಗಳ ಶಬ್ದವನ್ನು ಕೇಳಿ ನನಗೆ--ಈ ಜನರು ನಿನಗೆ ಹೇಳಿದ ಮಾತುಗಳ ಶಬ್ದವನ್ನು ಕೇಳಿ ದ್ದೇನೆ. ಅವರು ಹೇಳಿದ್ದೆಲ್ಲಾ ಒಳ್ಳೇದು.
ಆಗ ಕರ್ತನು ನನಗೆ--ಅವರು ಹೇಳಿದ್ದನ್ನು ಚೆನ್ನಾಗಿ ಹೇಳಿ ದ್ದಾರೆ.
ಮುಯ್ಯಿಗೆ ಮುಯ್ಯಿ ಕೊಡುವದೂ ಪ್ರತಿಫಲ ಕೊಡುವದೂ ನನ್ನದೇ; ತಕ್ಕ ಕಾಲದಲ್ಲಿ ಅವರ ಕಾಲು ಜಾರುವದು; ಅವರ ಕಳವಳದ ದಿವಸವು ಸವಿಾಪ ವಾಗಿದೆ. ಅವರ ಮೇಲೆ ಬರುವವುಗಳು ಬೇಗ ಬರುತ್ತವೆ.
ನನ್ನ ಬಾಯಿಂದ ಹೊರಡುವ ನನ್ನ ವಾಕ್ಯವು ಹಾಗೆಯೂ ಇರುವದು; ಅದು ಸುಮ್ಮನೆ ನನ್ನ ಬಳಿಗೆ ಹಿಂತಿರುಗದೆ ನಾನು ಯಾವದನ್ನು ಮೆಚ್ಚು ತ್ತೇನೋ ಅದನ್ನು ಅದು ಮಾಡುವದು; ನಾನು ಅದನ್ನು ಯಾವದರ ನಿಮಿತ್ತ ಕಳುಹಿಸಿದೆನೋ ಅದರಲ್ಲಿ ಅದು ಸಫಲವಾಗುವದು.
ಯೆಹೂದದ ಅರಸನಾದ ಅಮ್ಮೋನನ ಮಗನಾದ ಯೋಷೀಯನ ಹದಿಮೂರನೇ ವರುಷ ಮೊದಲ್ಗೊಂಡು ಇಂದಿನ ವರೆಗೂ ಈ ಇಪ್ಪತ್ತು ಮೂರು ವರುಷ ಕರ್ತನ ವಾಕ್ಯವು ನನಗೆ ಉಂಟಾಗಿ ನಾನು ಅದನ್ನು ನಿಮಗೆ ಹೇಳಿದ್ದೇನೆ, ಬೆಳಿಗ್ಗೆ ಎದ್ದು ಹೇಳಿದ್ದೇನೆ; ಆದರೆ ನೀವು ಕೇಳಲಿಲ್ಲ.
ಕಾವಲಿನವರ ಅಧಿಪತಿಯಾದ ನೆಬೂಜರದಾನನು ಯೆರೆವಿಾಯನನ್ನು ಸಂಕೋಲೆ ಗಳಿಂದ ಕಟ್ಟಿಸಿ ಬಾಬೆಲಿಗೆ ಒಯ್ಯುವ ಯೆರೂಸಲೇಮಿನ ಮತ್ತು ಯೆಹೂದದ ಸೆರೆಯವರೆಲ್ಲರ ಮಧ್ಯದಲ್ಲಿ ತಕ್ಕೊಂಡುಹೋಗಿ ರಾಮದಲ್ಲಿ ಅವನನ್ನು ಬಿಡಿಸಿ ಅಲ್ಲಿಂದ ಕಳುಹಿಸಿದ ಮೇಲೆ ಯೆರೆವಿಾಯನಿಗೆ ಕರ್ತ ನಿಂದ ಉಂಟಾದ ವಾಕ್ಯವು.
ಮನುಷ್ಯಪುತ್ರನೇ, ದಿನಗಳು ಬಹಳವಾ ಗುತ್ತಿವೆ; ಪ್ರತಿ ದರ್ಶನವು ತಪ್ಪುತ್ತದೆ ಎಂದು ಇಸ್ರಾ ಯೇಲ್ ದೇಶದಲ್ಲಿ ಹೇಳಿಕೊಳ್ಳುವ ಆ ಗಾದೆ ಏನು?
ನಾನೇ ಕರ್ತನು, ನಾನೇ ಮಾತನಾಡುತ್ತೇನೆ. ನಾನು ಆಡುವ ಮಾತು ನೆರವೇರುವದು, ಅದು ಇನ್ನು ನಿಧಾನವಾಗುವದಿಲ್ಲ. ಓ ತಿರುಗಿ ಬೀಳುವ ಮನೆತನ ದವರೇ, ನಿಮ್ಮ ದಿವಸಗಳಲ್ಲಿ ನಾನು ನುಡಿದದ್ದನ್ನು ನಡಿಸುವೆನೆಂದು ದೇವರಾದ ಕರ್ತನು ಹೇಳುತ್ತಾನೆ.
ಆದದರಿಂದ ಅವರು ಹೀಗೆ ಹೇಳುವರೆಂದು ದೇವರಾದ ಕರ್ತನು ಹೇಳುತ್ತಾನೆ; ನನ್ನ ಮಾತುಗಳಲ್ಲಿ ಒಂದಾದರೂ ಇನ್ನು ಮೇಲೆ ದೂರವಾಗುವದಿಲ್ಲ; ನಾನು ಆಡಿದ ಮಾತು ನಡಿಸಲ್ಪಡುವದೆಂದು ದೇವರಾದ ಕರ್ತನು ಹೇಳುತ್ತಾನೆ.
ಆಗ ಅವನು--ಆಮೋಸನೇ, ಏನು ನೋಡುತ್ತಿರುವೆ ಎಂದಾಗ ನಾನು--ಮಾಗಿದ ಹಣ್ಣುಗಳ ಪುಟ್ಟಿ ಅಂದೆನು. ಆಗ ಕರ್ತನು ನನಗೆ--ನನ್ನ ಜನರಾದ ಇಸ್ರಾಯೇಲ್ಯರಿಗೆ ಅಂತ್ಯವು ಬಂತು; ನಾನು ಇನ್ನು ಮೇಲೆ ಅವರನು ದಾಟಿಹೋಗುವದಿಲ್ಲ ಎಂದು ಹೇಳಿದೆನು.
ಆಗ ಆತನು ಅವನಿಗೆ--ನೀನು ಸರಿಯಾಗಿ ಉತ್ತರ ಕೊಟ್ಟಿದ್ದೀ; ಅದರಂತೆಯೇ ಮಾಡು, ಆಗ ನೀನು ಬದುಕುವಿ ಅಂದನು.
ಆಗ ಶಾಸ್ತ್ರಿಗಳಲ್ಲಿ ಕೆಲವರು ಪ್ರತ್ಯುತ್ತರ ವಾಗಿ--ಬೋಧಕನೇ, ನೀನು ಸರಿಯಾಗಿ ಹೇಳಿದ್ದೀ ಅಂದರು.