Home Bibles ಯೆಶಾಯ 8:18 · ಕನ್ನಡ ಬೈಬಲ್
ಯೆಶಾಯ 8:18 · ಕನ್ನಡ ಬೈಬಲ್

ಇಗೋ, ನನಗೆ ಕರ್ತನು ದಯಪಾಲಿಸಿದ ಮಕ್ಕಳೂ ನಾನೂ ಚೀಯೋನ್‌ ಪರ್ವತದಲ್ಲಿ ವಾಸವಾಗಿರುವ ಸೈನ್ಯಗಳ ಕರ್ತನಿಂದುಂಟಾದ ಗುರುತುಗಳಾಗಿಯೂ ಅದ್ಭುತ ಗಳಾಗಿಯೂ ಇಸ್ರಾಯೇಲಿನಲ್ಲಿದ್ದೇವೆ.

Cross references

1 ದಿನವೃತ್ತಾಂತ 23:25

ಅವರು ಯುಗ ಯುಗಾಂತರಕ್ಕೂ ಇಸ್ರಾಯೇಲಿನಲ್ಲಿ ವಾಸಿಸುವ ಹಾಗೆ ಇಸ್ರಾಯೇಲಿನ ದೇವರಾದ ಕರ್ತನು ತನ್ನ ಜನರಿಗೆ ವಿಶ್ರಾಂತಿಯನ್ನು ಕೊಟ್ಟಿದ್ದಾನೆ ಎಂದು ದಾವೀದನು ಹೇಳಿ

ಕೀರ್ತನೆಗಳು 9:11

ಚೀಯೋನಿನಲ್ಲಿ ವಾಸಿಸುವ ಕರ್ತನನ್ನು ಕೀರ್ತಿಸಿರಿ; ಆತನ ಕ್ರಿಯೆಗಳನ್ನು ಜನಗಳಲ್ಲಿ ತಿಳಿಸಿರಿ.

ಕೀರ್ತನೆಗಳು 9:12

ಆತನು ರಕ್ತಾಪರಾಧವನ್ನು ವಿಚಾರಿಸುವಾಗ ಅವರನ್ನು ಜ್ಞಾಪಕಮಾಡಿಕೊಳ್ಳುವನು; ಆತನು ದೀನರ ಕೂಗನ್ನು ಮರೆತುಬಿಡನು.

ಕೀರ್ತನೆಗಳು 22:30

ಒಂದು ಸಂತಾನವು ಆತನನ್ನು ಸೇವಿಸುವದು. ಅದು ಕರ್ತನ ಸಂತತಿ ಎಂದು ಎಣಿಸ ಲ್ಪಡುವದು.ಅವರು ಬಂದು ಆತನೇ ಇದನ್ನು ಮಾಡಿದ್ದಾನೆಂದೂ ಆತನ ನೀತಿಯನ್ನೂ ಹುಟ್ಟಲಿರುವ ಜನರಿಗೆ ತಿಳಿಸುವರು.

ಕೀರ್ತನೆಗಳು 71:7

ಅನೇಕರಿಗೆ ನಾನು ಆಶ್ಚರ್ಯದಂತಿದ್ದೇನೆ. ಆದರೆ ನೀನು ನನ್ನ ಬಲವಾದ ಆಶ್ರಯವಾಗಿದ್ದೀ.

ಯೆಶಾಯ 7:3

ಆಗ ಕರ್ತನು, ಯೆಶಾಯನಿಗೆ--ನೀನು ಶೆಯಾರ್‌ ಯಾಶೂಬನೆಂಬ ನಿನ್ನ ಮಗನನ್ನು ಕರೆದುಕೊಂಡು ಹೋಗಿ ಮಡಿವಾಳರ ಹೊಲದ ಮೇಲೆ ಹೋಗುವ ದಾರಿಯಲ್ಲಿ ಮೇಲಿನ ಕೆರೆಯ ಕಾಲುವೆಯ ಕೊನೆಯ ಹತ್ತಿರ ಆಹಾಜನನ್ನು ಎದುರುಗೊಂಡು ಅವನಿಗೆ ಹೀಗೆ ಹೇಳು--

ಯೆಶಾಯ 7:16

ಆ ಮಗುವು ಕೆಟ್ಟದ್ದನ್ನು ನಿರಾಕರಿಸಿ ಒಳ್ಳೆಯದನ್ನು ಆರಿಸಿಕೊಳ್ಳುವದಕ್ಕಿಂತ ಮುಂಚೆಯೇ ನೀನು ಹೇಸಿಕೊಳ್ಳುವ ದೇಶವನ್ನು ಅವಳ ಇಬ್ಬರು ಅರಸರು ತ್ಯಜಿಸಿಬಿಡುವರು.

ಯೆಶಾಯ 8:3

ಅನಂತರ ನಾನು ಪ್ರವಾದಿನಿ ಯನ್ನು ಕೂಡಲು ಆಕೆಯು ಬಸುರಾಗಿ ಒಬ್ಬ ಮಗನನ್ನು ಹೆತ್ತಳು. ಆಗ ಕರ್ತನು ನನಗೆ--ಅವನಿಗೆ ಮಹೇರ್‌ ಶಾಲಾಲ್‌ ಹಾಷ್‌ ಬಜ್‌ ಎಂದು ಹೆಸರಿಡು ಎಂದು ಹೇಳಿದನು.

ಯೆಶಾಯ 12:6

ಚೀಯೋನಿನ ನಿವಾಸಿಗಳೇ, ಆರ್ಭಟಿಸಿ ಹರ್ಷಧ್ವನಿಯನ್ನು ಗೈಯಿರಿ; ಇಸ್ರಾಯೇಲಿನ ಪರಿಶು ದ್ಧನು ನಿನ್ನ ಮಧ್ಯದಲ್ಲಿ ಮಹತ್ವವುಳ್ಳವನಾಗಿದ್ದಾನೆ.

ಯೆಶಾಯ 14:32

ಆಗ ಜನಾಂಗಗಳ ದೂತರಿಗೆ ಯಾವ ಉತ್ತರವನ್ನು ಕೊಡ ಬೇಕೆಂದರೆ? ಕರ್ತನು ಚೀಯೋನನ್ನು ಸ್ಥಾಪಿಸಿದ್ದಾನೆ, ಆತನ ಜನರಲ್ಲಿನ ಬಡವರು ಅದನ್ನು ಆಶ್ರಯಿಸಿ ಕೊಳ್ಳುವರು ಎಂಬದೇ.

ಯೆಶಾಯ 24:23

ಆಮೇಲೆ ಚೀಯೋನ್‌ ಪರ್ವತ ದಲ್ಲಿಯೂ ಯೆರೂಸಲೇಮಿನಲ್ಲಿಯೂ ತನ್ನ ಪೂರ್ವಿ ಕರ (ಪರಿವಾರದವರ) ಮುಂದೆ ಮಹಿಮೆಯಿಂದ ಆಳುವಾಗ ಚಂದ್ರನಿಗೆ ಅವಮಾನವಾಗುವದು, ಸೂರ್ಯನು ನಾಚಿಕೆ(ಲಜ್ಜೆ)ಪಡುವನು.

ಯೆಶಾಯ 53:10

ಆದಾಗ್ಯೂ ಆತನನ್ನು ಜಜ್ಜುವದು ಕರ್ತನಿಗೆ ಮೆಚ್ಚಿಕೆ ಯಾಗಿತ್ತು. ಆತನು (ದೇವರು) ಆತನನ್ನು ಸಂಕಟಕ್ಕೆ ಒಳಪಡಿಸಿದನು; ನೀನು ಆತನ ಪ್ರಾಣವನ್ನು ಪಾಪ ಕ್ಕೋಸ್ಕರ ಬಲಿಯನ್ನಾಗಿ ಮಾಡುವಾಗ ಆತನು ತನ್ನ ಸಂತಾನವನ್ನು ನೋಡುವನು. ಆತನು ತನ್ನ ದಿವಸ ಗಳನ್ನು ಹೆಚ್ಚಿಸುವನು, ಕರ್ತನ ಸಂತೋಷವು ಆತನ ಕೈಯಲ್ಲಿ ಸಫಲವಾಗುವದು.

ಯೆಹೆಜ್ಕೇಲ 14:8

ನಾನು ಆ ಮನುಷ್ಯನ ಮೇಲೆ ಉಗ್ರಕೋಪಗೊಂಡು ಅವು ನನ್ನ ಗುರುತನ್ನಾಗಿಯೂ ಗಾದೆಯನ್ನಾಗಿಯೂ ಮಾಡಿಕೊಂಡು ನನ್ನ ಜನರ ಮಧ್ಯದೊಳಗಿಂದ ಕಡಿದು ಬಿಡುವೆನು; ನಾನೇ ಕರ್ತನೆಂದು ತಿರಿಗಿ ತಿಳಿದುಕೊಳ್ಳು ವಿರಿ.

ಜೆಕರ್ಯ 3:8

ಪ್ರಧಾನ ಯಾಜಕ ನಾದ ಓ ಯೆಹೋಶುವನೇ, ನೀನೂ ನಿನ್ನ ಮುಂದೆ ಕೂತುಕೊಳ್ಳುವ ನಿನ್ನ ಸಂಗಡಿಗರೂ ಈಗ ಕೇಳಿರಿ; ಅವರು ಆಶ್ಚರ್ಯವನ್ನುಂಟು ಮಾಡುವ ಮನುಷ್ಯರಾಗಿ ದ್ದಾರೆ; ಇಗೋ, ನಾನು ಕೊಂಬೆಯೆಂಬ ನನ್ನ ಸೇವಕ ನನ್ನು ಬರಮಾಡುವೆನು.

ಜೆಕರ್ಯ 8:3

ಕರ್ತನು ಹೀಗೆ ಹೇಳುತ್ತಾನೆ--ಚೀಯೋನಿಗೆ ನಾನು ತಿರಿಗಿ ಕೊಂಡಿದ್ದೇನೆ; ಯೆರೂಸಲೇಮಿನ ಮಧ್ಯದಲ್ಲಿ ವಾಸಿಸು ವೆನು; ಯೆರೂಸಲೇಮು ಸತ್ಯದ ಪಟ್ಟಣವೆಂದೂ ಸೈನ್ಯಗಳ ಕರ್ತನ ಪರ್ವತವು ಪರಿಶುದ್ಧ ಪರ್ವತ ವೆಂದೂ ಕರೆಯಲ್ಪಡುವದು.

ಲೂಕ 2:18

ಕುರುಬರು ಹೇಳಿದ ವಿಷಯ ಗಳನ್ನು ಕೇಳಿದವರೆಲ್ಲರೂ ಆಶ್ಚರ್ಯಪಟ್ಟರು.

ಲೂಕ 2:34

ಸಿಮೆಯೋನನು ಅವರನ್ನು ಆಶೀರ್ವದಿಸಿ ಆತನ ತಾಯಿಯಾದ ಮರಿಯಳಿಗೆ-- ಇಗೋ, ಇಸ್ರಾಯೇಲಿನಲ್ಲಿ ಅನೇಕರು ಬೀಳುವದಕ್ಕೂ ತಿರಿಗಿ ಏಳುವದಕ್ಕೂ ಎದುರು ಮಾತನಾಡುವದಕ್ಕೂ ಈ ಶಿಶುವು ಗುರುತಾಗಿರುವನು.

1 ಕೊರಿಂಥದವರಿಗೆ 4:9

ಹಾಗಾಗದೆ ದೇವರು ಅಪೊಸ್ತಲರಾದ ನಮ್ಮನ್ನು ಮರಣಕ್ಕೆ ನೇಮಿಸಿದನೋ ಎಂಬಂತೆ ಕಡೆಯವರಾಗಿ ತೋರಿಸಿದ್ದಾನೆಂದು ನನಗೆ ತೋಚುತ್ತದೆ; ನಾವು ಲೋಕಕ್ಕೂ ದೂತರಿಗೂ ಮನುಷ್ಯರಿಗೂ ನೋಟವಾದೆವು.

ಹೆಬ್ರಿಯರಿಗೆ 2:13

ನಾನು ಆತನ ಮೇಲೆ ಭರವಸವಿಡುವೆನು ಎಂತಲೂ ತಿರಿಗಿ--ಇಗೋ, ನಾನೂ ದೇವರು ನನಗೆ ದಯಪಾಲಿಸಿರುವ ಮಕ್ಕಳೂ ಎಂತಲೂ ಹೇಳುತ್ತಾನೆ.

ಹೆಬ್ರಿಯರಿಗೆ 10:33

ಕೆಲವು ಸಾರಿ ನೀವು ಎರಡನ್ನು ಅಂದರೆ ನಿಂದೆಗಳನ್ನೂ ಉಪ ದ್ರವಗಳನ್ನೂ ಅನುಭವಿಸಿ ಹಾಸ್ಯದ ನೋಟಕ್ಕೆ ಗುರಿ ಯಾದಿರಿ; ಕೆಲವು ಸಾರಿ ಅಂಥವುಗಳನ್ನು ಅನುಭವಿಸು ವವರ ಜೊತೆಗಾರರಾದಿರಿ.

ಹೆಬ್ರಿಯರಿಗೆ 12:22

ಆದರೆ ನೀವು ಚೀಯೋನ್‌ ಪರ್ವತಕ್ಕೂ ಜೀವಸ್ವರೂಪನಾದ ದೇವರ ಪಟ್ಟಣವಾಗಿರುವ ಪರಲೋಕದ ಯೆರೂಸಲೇಮಿಗೂ ಎಣಿಸಲಸಾಧ್ಯವಾದ ದೂತ ಗಣಗಳ ಬಳಿಗೂ

Interlinear

Choose Theme