Home Bibles ಯೆಶಾಯ 8:13 · ಕನ್ನಡ ಬೈಬಲ್
ಯೆಶಾಯ 8:13 · ಕನ್ನಡ ಬೈಬಲ್

ಸೈನ್ಯಗಳ ಕರ್ತನನ್ನೇ ಪ್ರತಿಷ್ಠೆಪಡಿಸಿ ಕೊಳ್ಳಿರಿ; ಆತನೇ ನಿಮ್ಮ ಭಯವೂ ಭಯಂಕರನೂ ಆಗಿರಲಿ.

Cross references

ಆದಿಕಾಂಡ 31:53

ಅಬ್ರಹಾ ಮನ ದೇವರು, ನಾಹೋರನ ದೇವರು, ಅವರ ತಂದೆಯ ದೇವರು ನಮ್ಮ ಮಧ್ಯದಲ್ಲಿ ನ್ಯಾಯ ತೀರಿಸಲಿ ಅಂದನು. ಆಗ ಯಾಕೋಬನು ತನ್ನ ತಂದೆಯಾದ ಇಸಾಕನು ಭಯದಿಂದ ಸೇವಿಸುವ ದೇವರ ಮೇಲೆ ಪ್ರಮಾಣಮಾಡಿದನು.

ಲೇವ್ಯಕಾಂಡ 10:3

ತರುವಾಯ ಮೋಶೆಯು ಆರೋನನಿಗೆ--ಕರ್ತನು ಹೇಳಿದ್ದು ಇದೇ, ಅದೇನಂದರೆ--ನನ್ನನ್ನು ಸವಿಾಪಿಸು ವವರನ್ನು ನಾನು ಪರಿಶುದ್ಧಪಡಿಸುವೆನು, ಜನರೆಲ್ಲರ ಮುಂದೆ ನಾನು ಘನ ಹೊಂದುವೆನು ಅಂದನು. ಆಗ ಆರೋನನು ಸುಮ್ಮನಿದ್ದನು.

ಲೇವ್ಯಕಾಂಡ 22:32

ಆದರೆ ಇಸ್ರಾಯೇಲ್‌ ಮಕ್ಕಳ ಮಧ್ಯದಲ್ಲಿ ನಾನು ಪರಿಶುದ್ಧ ಮಾಡಲ್ಪಡುವ ಹಾಗೆ ನನ್ನ ಪರಿಶುದ್ಧವಾದ ಹೆಸರನ್ನು ಅಪವಿತ್ರಮಾಡಬಾರದು;ನಿಮಗೆ ದೇವರಾಗಿರು ವದಕ್ಕೆ ನಿಮ್ಮನ್ನು ಐಗುಪ್ತದೇಶದೊಳಗಿಂದ ಹೊರಗೆ ತಂದವನೂ ನಿಮ್ಮನ್ನು ಪರಿಶುದ್ಧ ಮಾಡುವ ಕರ್ತನೂ ನಾನೇ; ನಾನೇ ಕರ್ತನು.

ಅಂಕೆಗಳ ಪುಸ್ತಕ 20:12

ಆಗ ಕರ್ತನು ಮೋಶೆ ಆರೋನನ ಸಂಗಡ ಮಾತನಾಡಿ--ನೀವು ಇಸ್ರಾಯೇಲ್‌ ಮಕ್ಕಳ ಕಣ್ಣುಗಳ ಮುಂದೆ ನನ್ನನ್ನು ಪರಿಶುದ್ಧಮಾಡುವದಕ್ಕೆ ನನ್ನಲ್ಲಿ ವಿಶ್ವಾಸಿ ಸದೆ ಇದ್ದ ಕಾರಣ ನಾನು ಅವರಿಗೆ ಕೊಟ್ಟ ದೇಶದಲ್ಲಿ ನೀವು ಸಮೂಹವನ್ನು ಸೇರಿಸುವದಿಲ್ಲ ಅಂದನು.

ಅಂಕೆಗಳ ಪುಸ್ತಕ 27:14

ನೀವು ಜಿನ್‌ ಎಂಬ ಮರುಭೂಮಿಯ ಲ್ಲಿಯೂ ಸಭೆಯ ವಾಗ್ವಾದದಲ್ಲಿಯೂ ಅವರಿಗೆದು ರಾಗಿ ನೀರಿನ ಬಳಿಯಲ್ಲಿ ನನ್ನನ್ನು ಪರಿಶುದ್ಧ ಮಾಡದೆ ನನ್ನ ಆಜ್ಞೆಯನ್ನು ವಿಾರಿದಿರಿ. ಆ ನೀರು ಅಂದರೆ ಜಿನ್‌ ಎಂಬ ಅರಣ್ಯದ ಕಾದೇಶಿನಲ್ಲಿರುವ ಮೆರೀಬಾದ ನೀರು ಅಂದನು.

1 ಸಮುವೇಲ 11:7

ಒಂದು ಜೋಡಿ ಎತ್ತುಗಳನ್ನು ತೆಗೆದುಕೊಂಡು ಅವುಗಳನ್ನು ತುಂಡು ತುಂಡಾಗಿ ಕತ್ತರಿಸಿ ದೂತರ ಕೈಯಿಂದ ಇಸ್ರಾಯೇಲಿನ ಮೇರೆಗಳಿಗೆಲ್ಲಾ ಕಳುಹಿಸಿಸೌಲನ ಹಿಂದೆಯೂ ಸಮುವೇಲನ ಹಿಂದೆಯೂ ಹೊರಡದವನ ಪಶುಗಳಿಗೆ ಈ ಪ್ರಕಾರ ಮಾಡಲ್ಪಡು ವದೆಂದು ಹೇಳಿಸಿದನು. ಆಗ ಕರ್ತನಿಂದ ಉಂಟಾದ ಭಯ ಜನರ ಮೇಲೆ ಬಿದ್ದದ್ದರಿಂದ ಅವರು ಒಂದೇ ಮನಸ್ಸಿನಿಂದ ಹಾಗೆಯೇ ಹೊರಟು ಬಂದರು.

ಕೀರ್ತನೆಗಳು 76:7

ನೀನು, ನೀನೇ, ಭಯಹುಟ್ಟಿಸುತ್ತೀ; ನೀನು ಒಂದು ಸಾರಿ ಕೋಪಿಸಿಕೊಂಡರೆ ನಿನ್ನ ಮುಂದೆ ನಿಲ್ಲುವವನಾರು?

ಯೆಶಾಯ 26:3

ದೃಢಮನಸ್ಸುಳ್ಳವನನ್ನು ಪೂರ್ಣ ಸಮಾಧಾನದಲ್ಲಿ ನೆಲೆಗೊಳಿಸಿ ಕಾಯುವಿ. ಅವನಿಗೆ ನಿನ್ನಲ್ಲಿ ಭರವಸವಿದೆ.

ಯೆಶಾಯ 29:23

ಆದರೆ ನನ್ನ ಕೈಕೆಲಸವಾದ ಅವನ ಮಕ್ಕಳನ್ನು ತನ್ನ ಮಧ್ಯದಲ್ಲಿ ನೋಡುವಾಗ ನನ್ನ ನಾಮವನ್ನು ಪರಿಶುದ್ಧವೆಂದೆಣಿಸಿ ಯಾಕೋಬನ ಪರಿ ಶುದ್ಧನನ್ನು ಪ್ರತಿಷ್ಠಿಸುವರು; ಇಸ್ರಾಯೇಲಿನ ದೇವ ರಿಗೆ ಭಯಪಡುವರು.ತಪ್ಪಿದ ಆತ್ಮವುಳ್ಳವರು ವಿವೇಕಿಗಳಾಗುವರು. ಗುಣುಗುಟ್ಟುವವರು ಬೋಧನೆ ಕಲಿಯುವರು.

ಮಲಾಕಿ 2:5

ನನ್ನ ಜೀವದ ಮತ್ತು ಸಮಾಧಾನದ ನನ್ನ ಒಡಂಬಡಿಕೆಯು ಅವನ ಸಂಗಡ ಇತ್ತು; ಅವುಗಳನ್ನು ಅವನಿಗೆ ಕೊಟ್ಟೆನು; ಅವನು ನನಗೆ ಭಯಪಟ್ಟು ನನ್ನ ಹೆಸರಿಗೆ ಅಂಜಿ ಕೊಂಡನು.

ಮತ್ತಾಯ 10:28

ಶರೀರವನ್ನು ಕೊಲ್ಲುವವರಿಗೆ ಹೆದರಬೇಡಿರಿ; ಯಾಕಂದರೆ ಅವರು ಆತ್ಮವನ್ನು ಕೊಲ್ಲಲು ಶಕ್ತರಲ್ಲ; ಆದರೆ ಆತ್ಮ ಮತ್ತು ಶರೀರ ಎರಡನ್ನೂ ನರಕದಲ್ಲಿ ನಾಶಮಾಡಲು ಶಕ್ತನಾಗಿರು ವಾತನಿಗೇ ಭಯಪಡಿರಿ.

ಲೂಕ 12:5

ಆದರೆ ಯಾರಿಗೆ ನೀವು ಭಯಪಡಬೇಕೆಂದು ಮುಂದಾಗಿ ನಾನು ನಿಮ್ಮನ್ನು ಎಚ್ಚರಿಸುತ್ತೇನೆ; ಕೊಂದಮೇಲೆ ನರಕದಲ್ಲಿ ಹಾಕುವದಕ್ಕೆ ಅಧಿಕಾರವಿರುವಾತನಿಗೇ ಭಯಪಡಿರಿ; ಹೌದು, ಆತನಿಗೆ ಭಯಪಡಿರಿ ಎಂದು ನಾನು ನಿಮಗೆ ಹೇಳುತ್ತೇನೆ.

ರೋಮಾಪುರದವರಿಗೆ 4:20

ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ ಅವನು ಅಪನಂಬಿಕೆಯಿಂದ ಚಂಚಲಚಿತ್ತನಾಗಲಿಲ್ಲ; ಆದರೆ ದೇವರನ್ನು ಘನಪಡಿಸುವವನಾಗಿ ದೃಢನಂಬಿಕೆಯುಳ್ಳ ವನಾದನು.

ಪ್ರಕಟನೆ 15:4

ಓ ಕರ್ತನೇ, ನಿನಗೆ ಭಯಪಡದವರೂ ನಿನ್ನ ನಾಮವನ್ನು ಮಹಿಮೆಪಡಿಸದವರೂ ಯಾರಿ ದ್ದಾರೆ? ಯಾಕಂದರೆ ನೀನೊಬ್ಬನೇ ಪರಿಶುದ್ಧನು; ನಿನ್ನ ತೀರ್ಪುಗಳು ಪ್ರಕಟವಾದದ್ದರಿಂದ ಎಲ್ಲಾ ಜನಾಂಗ ಗಳು ಬಂದು ನಿನ್ನ ಸನ್ನಿಧಾನದಲ್ಲಿ ಆರಾಧಿಸುವರು ಎಂದು ಹೇಳಿದರು.

Interlinear

Choose Theme