ಅವಳ ಆದರಣೆಗಳ ಮೊಲೆ ಹೀರಿಕೊಂಡು ತೃಪ್ತಿ ಯಾಗುವ ಹಾಗೆ ಅವಳ ಸಮೃದ್ಧಿಯಾದ ವೈಭವ ದೊಂದಿಗೆ ಹಾಲನ್ನು ಕುಡಿದು ಆನಂದಗೊಳ್ಳಿರಿ.
Cross references
ನಿನ್ನ ಆಲಯದ ಪರಿಪೂರ್ಣತೆಯಿಂದ ಅವರು ಸಂತೃಪ್ತಿಯಾಗುವರು; ನಿನ್ನ ಸಂಭ್ರಮದ ನದಿಯಿಂದ ಅವರಿಗೆ ಕುಡಿಯ ಮಾಡುವಿ.
ಆಗ ನೀನು ಅದನ್ನು ನೋಡುವಿ, ನೀವು ಗುಂಪು ಗುಂಪಾಗಿ ಹೋಗುವಿರಿ. ನಿನ್ನ ಹೃದಯವು ಹೆದರಿ ವಿಶಾಲವಾಗು ವದು; ಸಮುದ್ರದ (ವ್ಯಾಪಾರದ) ಸಮೃದ್ಧಿಯು ನಿನ್ನ ಕಡೆಗೆ ತಿರುಗಿಕೊಳ್ಳುವದು; ಅನ್ಯಜನಾಂಗದ ಸೇನಾ ಬಲವು ನಿನ್ನ ಬಳಿಗೆ ಬರುವದು.
ಅನ್ಯಜನಾಂಗಗಳ ಹಾಲನ್ನು ಹೀರಿಕೊಳ್ಳುವಿ; ಅರಸರ ಮೊಲೆಯನ್ನು ಸಹ ಹೀರಿಕೊಳ್ಳುವಿ; ಆಗ ಕರ್ತನಾದ ನಾನೇ ನಿನ್ನ ರಕ್ಷಕನೂ ನಿನ್ನ ವಿಮೋ ಚಕನೂ ಯಾಕೋಬನ ಪರಾಕ್ರಮಿಯೂ ಎಂದು ತಿಳುಕೊಳ್ಳುವಿ.
ಆ ದಿನದಲ್ಲಿ ಆಗುವದೇನಂ ದರೆ, ಬೆಟ್ಟಗಳು ಹೊಸ ದ್ರಾಕ್ಷಾರಸವನ್ನು ಸುರಿಯುವವು; ಗುಡ್ಡಗಳು ಹಾಲಿನಿಂದ ಹರಿಯುವವು; ಯೆಹೂದದ ಹಳ್ಳಗಳೆಲ್ಲಾ ನೀರಿನಿಂದ ಹರಿಯುವವು; ಕರ್ತನ ಆಲಯದೊಳಗಿಂದ ಬುಗ್ಗೆ ಹೊರಟು, ಶಿಟ್ಟೀಮಿನ ತಗ್ಗಿಗೆ ಜಲ ಕೊಡುವದು.
ಹೊಸದಾಗಿ ಹುಟ್ಟಿದ ಶಿಶುಗಳಂತಿರುವ ನೀವು ಬೆಳೆಯುವ ಹಾಗೆ ವಾಕ್ಯವೆಂಬ ಶುದ್ಧ ಹಾಲನ್ನು ಬಯಸಿರಿ.