ನಾವು ಎದುರು ನೋಡದೆ ಇದ್ದ ಭಯಂಕರವಾದವುಗಳನ್ನು ನೀನು ಮಾಡಿದಾಗ ಇಳಿದು ಬಂದಿ; ಬೆಟ್ಟಗಳು ನಿನ್ನ ಪ್ರಸನ್ನತೆಯಿಂದ ಕರಗಿಹೋದವು.
Cross references
ಅದಕ್ಕೆ ಕರ್ತನು--ಇಗೋ, ನಾನು ಒಂದು ಒಡಂಬಡಿಕೆಯನ್ನು ಮಾಡುತ್ತೇನೆ. ಸಮಸ್ತ ಭೂಮಿ ಯಲ್ಲಿಯೂ ಯಾವ ಜನಾಂಗದಲ್ಲಿಯೂ ಮಾಡ ದಿರುವಂಥ ಅದ್ಭುತಗಳನ್ನು ನಿನ್ನ ಜನರೆಲ್ಲರ ಮುಂದೆ ಮಾಡುವೆನು. ನೀನು ಯಾರ ಮಧ್ಯದಲ್ಲಿ ಇರುವಿಯೋ ಆ ಜನರೆಲ್ಲರು ಕರ್ತನ ಕಾರ್ಯವನ್ನು ನೋಡುವರು. ನಾನು ನಿಮಗೆ ಮಾಡುವಂಥದ್ದು ಭಯಂಕರ ವಾಗಿರುವದು.
ಇಲ್ಲವೆ ನಿಮ್ಮ ದೇವರಾದ ಕರ್ತನು ಐಗುಪ್ತದಲ್ಲಿ ನಿಮ್ಮ ಕಣ್ಣುಗಳ ಮುಂದೆ ನಿಮಗೆ ಮಾಡಿದ್ದೆಲ್ಲಾದರ ಹಾಗೆ ಬೇರೆ ದೇವರು ಹೋಗಿ ಒಂದು ಜನಾಂಗವನ್ನು ಮತ್ತೊಂದು ಜನಾಂಗದ ಮಧ್ಯ ದಿಂದ ಶೋಧನೆಗಳು ಗುರುತುಗಳು ಅದ್ಭುತಗಳು ಇವುಗಳ ಮೂಲಕವಾಗಿಯೂ ಯುದ್ಧದಿಂದಲೂ ಬಲವಾದ ಕೈಯಿಂದಲೂ ಚಾಚಿದ ತೋಳಿನಿಂದಲೂ ಮಹಾಭೀತಿಯಿಂದಲೂ ತಕ್ಕೊಳ್ಳುವದಕ್ಕೆ ಪ್ರಯತ್ನ ಮಾಡಿದನೋ?
ನಿನ್ನ ಕಣ್ಣುಗಳು ನೋಡಿದ ಆ ಮಹಾ ಭಯಂಕರವಾದ ಕಾರ್ಯಗಳನ್ನು ನಿನಗೆ ಮಾಡಿದ ಆತನೇ ನಿನ್ನ ಸ್ತೋತ್ರವು, ಆತನೇ ನಿನ್ನ ದೇವರು.ಎಪ್ಪತ್ತು ಮಂದಿಯಾಗಿ ನಿನ್ನ ಪಿತೃಗಳು ಐಗುಪ್ತಕ್ಕೆ ಇಳಿದುಹೋದರು; ಈಗ ನಿನ್ನ ದೇವರಾದ ಕರ್ತನು ನಿನ್ನನ್ನು ಆಕಾಶದ ನಕ್ಷತ್ರಗಳ ಹಾಗೆ ಅಸಂಖ್ಯ ವಾಗಿ ಮಾಡಿದ್ದಾನೆ.
ಕರ್ತನೇ, ನೀನು ಸೇಯಾರಿನಿಂದ ಹೊರಟು ಎದೋ ಮಿನ ಹೊಲದಿಂದ ಮುನ್ನಡೆಯುವಾಗ ಭೂಮಿ ನಡುಗಿತು, ಆಕಾಶವು ಸುರಿಯಿತು; ಮೇಘಗಳು ಸಹ ನೀರು ಸುರಿದವು.
ಭೂಲೋಕದಲ್ಲಿ ನಿನ್ನ ಜನರಾದ ಇಸ್ರಾಯೇಲ್ಯರಿಗೆ ಸಮಾನವಾದ ಜನಾಂಗ ಯಾವದು? ಅವರನ್ನು ಸ್ವಜನರಾಗಿ ವಿಮೋಚಿಸು ವಂತೆಯೂ ತನಗೆ ಹೆಸರನ್ನು ಪಡಕೊಳ್ಳುವಂತೆಯೂ ದೇವರು ಹೋದನು; ಅವರಿಗೋಸ್ಕರ ನಿನ್ನ ದೇಶಕ್ಕೆ, ಐಗುಪ್ತದಿಂದ ಜನಾಂಗಗಳಿಂದಲೂ ಅವರ ದೇವರು ಗಳಿಂದಲೂ ವಿಮೋಚಿಸಿದ ನಿನ್ನ ಜನರ ಮುಂದೆ ಈ ಮಹಾಭಯಂಕರವಾದ ಕಾರ್ಯಗಳನ್ನು ಮಾಡು ವದಕ್ಕಾಗಿಯೇ ದೇವರು ಹೋದನು.
ನಮ್ಮ ರಕ್ಷಣೆಯ ಓ ದೇವರೇ, ಭಯಂಕರವಾದ ವುಗಳಿಂದ ನೀತಿಯಲ್ಲಿ ನೀನು ನಮಗೆ ಉತ್ತರ ಕೊಡುವಿ; ಭೂಮಿಯ ಎಲ್ಲಾ ಅಂತ್ಯಗಳಿಗೂ ಸಮುದ್ರ ದಲ್ಲಿ ದೂರವಾದವರಿಗೂ ನೀನು ಭರವಸವಾಗಿದ್ದೀ.
ದೇವರಿಗೆ--ನಿನ್ನ ಕೆಲಸಗಳಿಂದ ನೀನು ಎಷ್ಟು ಭಯಂಕರನಾಗಿದ್ದೀ ಎಂದು ಹೇಳಿರಿ. ನಿನ್ನ ಮಹಾಬಲದ ನಿಮಿತ್ತ ನಿನ್ನ ಶತ್ರುಗಳು ತಾವೇ ನಿನಗೆ ಅಧೀನರಾಗುವರು;
ಬನ್ನಿರಿ, ದೇವರ ಕಾರ್ಯಗಳನ್ನು ನೋಡಿರಿ; ಮನುಷ್ಯರ ಮಕ್ಕಳ ಕಡೆಗೆ ಆತನು ತನ್ನ ಕಾರ್ಯಗಳಲ್ಲಿ ಭಯಂಕರನಾಗಿದ್ದಾನೆ.
ದೇವರು ಪ್ರತ್ಯಕ್ಷನಾಗಿ ದ್ದಾನೆಂದು ಭೂಮಿಯು ಕಂಪಿಸಿತು; ಮೇಘ ಮಂಡ ಲವು ಮಳೆಗರಿಯಿತು. ಇಸ್ರಾಯೇಲ್ಯರ ದೇವನಾದ ದೇವರು ಪ್ರತ್ಯಕ್ಷನಾಗಿದ್ದಾನೆಂದು ಆ ಸೀನಾಯಿ ಬೆಟ್ಟವು ಕದಲಿತು.
ಆತನು ಪ್ರಧಾನರ ಪ್ರಾಣವನ್ನು ತೆಗೆದು ಹಾಕು ತ್ತಾನೆ; ಭೂಮಿಯ ಅರಸುಗಳಿಗೆ ಭಯಂಕರ ನಾಗಿದ್ದಾನೆ.
ಇವರು ಆತನ ಗುರುತುಗಳನ್ನೂ ಹಾಮನ ದೇಶದಲ್ಲಿ ಅದ್ಭುತಗಳನ್ನೂ ಅವರೊಳಗೆ ತೋರಿಸಿದರು.
ಹಾಮನ ದೇಶದಲ್ಲಿ ಅದ್ಭುತಗಳನ್ನೂ ಕೆಂಪು ಸಮುದ್ರದ ಬಳಿ ಯಲ್ಲಿ ಭಯಂಕರವಾದವುಗಳನ್ನೂ ಮಾಡಿದ ದೇವ ರನ್ನು ಅವರು ಮರೆತರು.
ಆಹಾ, ನೀನು ಆಕಾಶಗಳನ್ನು ಹರಿದು ಬಿಟ್ಟು, ಇಳಿದು ಬಂದಿದ್ದರೆ ಎಷ್ಟೋ ಚೆನ್ನಾ ಗಿತ್ತು! ಬಾ! ಬೆಟ್ಟಗಳು ನಿನ್ನ ಸಮ್ಮುಖದಲ್ಲಿ ಕರಗಲಿ! ಜನಾಂಗಗಳು ನಿನ್ನ ಸಮ್ಮುಖದಲ್ಲಿ ನಡುಗುವ ಹಾಗೆ,
ದೇವರು ತೇಮಾನಿ ನಿಂದಲೂ ಪರಿಶುದ್ಧನು ಪಾರಾನ್ ಪರ್ವತದಿಂದಲೂ ಬಂದನು. ಸೆಲಾ. ಆತನ ಮಹಿಮೆ ಆಕಾಶಗಳನ್ನು ಮುಚ್ಚಿತು: ಆತನ ಸ್ತೋತ್ರವು ಭೂಮಿಯನ್ನು ತುಂಬಿ ಸಿತು.
ಆತನು ನಿಂತುಕೊಂಡು ಭೂಮಿಯನ್ನು ಅಳೆದನು. ಆತನು ನೋಡಿ ಜನಾಂಗ ಗಳನ್ನು ಓಡಿಸಿಬಿಟ್ಟನು; ಶಾಶ್ವತವಾದ ಪರ್ವತಗಳು ಚದುರಿಸಲ್ಪಟ್ಟವು; ನಿತ್ಯವಾದ ಗುಡ್ಡಗಳು ನಡುಗಿ ದವು; ಆತನ ಮಾರ್ಗಗಳು ನಿತ್ಯವಾದವುಗಳೇ.