Home Bibles ☰ Books ಯೆಶಾಯ 58:11 · ಕನ್ನಡ ಬೈಬಲ್
ಯೆಶಾಯ 58:11 · ಕನ್ನಡ ಬೈಬಲ್

ಕರ್ತನು ನಿನ್ನನ್ನು ನಿತ್ಯವೂ ನಡಿಸುತ್ತಾ ಮಳೆಯಿಲ್ಲದ ಕಾಲದಲ್ಲಿ ನಿನ್ನ ಪ್ರಾಣವನ್ನು ತೃಪ್ತಿಗೊಳಿಸಿ ನಿನ್ನ ಎಲುಬುಗಳನ್ನು ಬಲಪಡಿಸುವನು ಮತ್ತು ನೀನು ನೀರು ಹಾಕಿದ ತೋಟದ ಹಾಗೆಯೂ ಮುಗಿಯದ ಜಲಬುಗ್ಗೆಯ ಹಾಗೆಯೂ ಇರುವಿ.

Cross references

ದ್ವಿತೀಯೋಪದೇಶಕಾಂಡ 15:4

ಬಡತನವು ನಿನ್ನ ಮಧ್ಯದಲ್ಲಿರದ ಹಾಗೆ; ನಿನ್ನ ದೇವರಾದ ಕರ್ತನು ನಿನಗೆ ಸ್ವಾಧೀನಪಡಿಸಿಕೊಳ್ಳು ವದಕ್ಕೆ ಸ್ವಾಸ್ತ್ಯವಾಗಿ ಕೊಡುವ ದೇಶದಲ್ಲಿ ಕರ್ತನು ನಿನ್ನನ್ನು ಬಹಳವಾಗಿ ಆಶೀರ್ವದಿಸುವನು.

ಯೋಬ 5:20

ಬರದಲ್ಲಿ ನಿನ್ನನ್ನು ಮರಣದೊಳ ಗಿಂದಲೂ ಯುದ್ಧದಲ್ಲಿ ಕತ್ತಿಯ ಬಲದಿಂದಲೂ ವಿಮೋಚಿಸುವನು.

ಯೋಬ 6:15

ನನ್ನ ಸಹೋದರರು ಹಳ್ಳದ ಹಾಗೆ ಮೋಸ ಮಾಡಿದ್ದಾರೆ; ಹಳ್ಳಗಳ ಪ್ರವಾಹದಂತೆ ಹಾದು ಹೋಗುತ್ತಾರೆ.

ಕೀರ್ತನೆಗಳು 1:3

ಅವನು ತನ್ನ ಕಾಲದಲ್ಲಿ ತನ್ನ ಫಲಕೊಡುವಂಥ, ಎಲೆ ಬಾಡದಂಥ, ನೀರಿನ ಹೊಳೆಗಳ ಬಳಿಯಲ್ಲಿ ನೆಡಲ್ಪಟ್ಟಂಥ ಮರದ ಹಾಗಿರುವನು; ಅವನು ಮಾಡು ವದೆಲ್ಲಾ ಸಫಲವಾಗುವದು.

ಕೀರ್ತನೆಗಳು 25:9

ದೀನರನ್ನು ನ್ಯಾಯ ದಲ್ಲಿ ನಡಿಸಿ ಅವರಿಗೆ ತನ್ನ ಮಾರ್ಗವನ್ನು ಕಲಿಸುವನು.

ಕೀರ್ತನೆಗಳು 32:8

ನಾನು -- ನಿನಗೆ ಬುದ್ದಿ ಹೇಳುವೆನು; ನೀನು ಹೋಗತಕ್ಕ ಮಾರ್ಗವನ್ನು ನಿನಗೆ ಬೋಧಿಸುವೆನು; ನನ್ನ ಕಣ್ಣಿನಿಂದ ನಿನ್ನನ್ನು ನಡಿಸುವೆನು.

ಕೀರ್ತನೆಗಳು 33:19

ಇದರಿಂದ ಅವರ ಪ್ರಾಣವನ್ನು ಮರಣದಿಂದ ಬಿಡಿಸಿ ಬರಗಾಲ ದಲ್ಲಿ ಅವರ ಜೀವವನ್ನು ಕಾಪಾಡುತ್ತಾನೆ.

ಕೀರ್ತನೆಗಳು 34:9

ಆತನ ಪರಿ ಶುದ್ಧರೇ, ನೀವು ಕರ್ತನಿಗೆ ಭಯಪಡಿರಿ; ಆತನಿಗೆ ಭಯಪಡುವವರಿಗೆ ಏನೂ ಕೊರತೆ ಇಲ್ಲ.

ಕೀರ್ತನೆಗಳು 37:19

ವಿಪತ್ಕಾಲದಲ್ಲಿ ಅವರು ಆಶಾಭಂಗ ಪಡುವದಿಲ್ಲ; ಕ್ಷಾಮದ ದಿವಸಗಳಲ್ಲಿ ತೃಪ್ತಿಪಡುವರು.

ಕೀರ್ತನೆಗಳು 48:14

ಈ ದೇವರು ಯುಗಯುಗಾಂತರಗಳಿಗೂ ನಮ್ಮ ದೇವ ರಾಗಿದ್ದಾನೆ. ಆತನು ಮರಣದ ವರೆಗೂ ನಮ್ಮನ್ನು ನಡಿಸುವನು.

ಕೀರ್ತನೆಗಳು 73:24

ನಿನ್ನ ಆಲೋಚನೆಯಂತೆ ನನ್ನನ್ನು ನಡಿಸಿದ ತರು ವಾಯ ಮಹಿಮೆಗೆ ನನ್ನನ್ನು ಅಂಗೀಕರಿಸುವಿ.

ಕೀರ್ತನೆಗಳು 84:7

ಅವರು ಬಲದಿಂದ ಬಲಕ್ಕೆ ಹೋಗಿ, ಚೀಯೋನಿನಲ್ಲಿ ದೇವರ ಮುಂದೆ ಕಾಣಿಸಿಕೊಳ್ಳುತ್ತಾರೆ.

Interlinear

Choose Theme