ಆದರೆ ದುಷ್ಟರು ಸುಮ್ಮನಿರಲಾರದಂಥ, ಅದರ ನೀರುಗಳು ಕೆಸರನ್ನೂ ಮೈಲಿಗೆಯನ್ನೂ ಕಾರು ವಂಥ, ಅಲ್ಲಕಲ್ಲೋಲವಾಗಿರುವ ಸಮುದ್ರದ ಹಾಗಿ ದ್ದಾರೆ.ದುಷ್ಟರಿಗೆ ಸಮಾಧಾನವೇ ಇಲ್ಲವೆಂದು ನನ್ನ ದೇವರು ಹೇಳುತ್ತಾನೆ.
Cross references
ಆದದರಿಂದ ಅರಾಮ್ಯರ ಅರಸನ ಹೃದಯವು ಇದರ ನಿಮಿತ್ತ ಕಳವಳಗೊಂಡು ಅವನು ತನ್ನ ಸೇವಕರನ್ನು ಕರೆದು ಅವರಿಗೆ--ನಮ್ಮಲ್ಲಿ ಇಸ್ರಾಯೇ ಲಿನ ಅರಸನ ಕಡೆಯವನು ಯಾರು? ನೀವು ನನಗೆ ತಿಳಿಸುವದಿಲ್ಲವೋ ಅಂದನು.
ದುಷ್ಟನು ತನ್ನ ದಿವಸಗಳಲ್ಲೆಲ್ಲಾ ವೇದನೆ ಪಡು ತ್ತಾನೆ; ವರುಷಗಳ ಲೆಕ್ಕವು ಬಲಾತ್ಕಾರಿಗೆ ಮರೆಯಾಗಿದೆ.
ಹೌದು, ನಿಶ್ಚಯವಾಗಿ ದುಷ್ಟರ ಬೆಳಕು ಆರಿ ಹೋಗುವದು; ಅವನ ಬೆಂಕಿಯ ಜ್ವಾಲೆಯು ಪ್ರಕಾಶಿ ಸದು.
ಅವನ ಎಲುಬುಗಳು ಯೌವನ ಪಾಪದಿಂದ ತುಂಬಿದ್ದರೂ ಅದು ಅವನ ಸಂಗಡ ಧೂಳಿನಲ್ಲಿ ಮಲಗುವದು.
ನಿಶ್ಚಯವಾಗಿ ನೀನು ಅವರನ್ನು ಜಾರುವ ಸ್ಥಳಗಳಲ್ಲಿ ಇಟ್ಟಿದ್ದೀ; ಅವರನ್ನು ನಾಶನಕ್ಕೆ ಕೆಳಗೆ ದೊಬ್ಬಿದ್ದೀ.
ಕೇಡು ಮಾಡದಿದ್ದರೆ ಅವರು ನಿದ್ರೆಹೋಗುವದಿಲ್ಲ; ಯಾರ ನ್ನಾದರೂ ಬೀಳಿಸದೆ ಇದ್ದರೆ ಅವರ ನಿದ್ರೆಗೆ ಭಂಗ ವಾಗುವದು.
ಕೆಡುಕರಿಗೆ ಅಯ್ಯೋ! ಅವರಿಗೆ ಕೇಡೇ ಇರಲಿ; ಅವನ ಕೈಗಳ ಪ್ರತಿಫಲವು ಅವನಿಗೆ ಕೊಡಲ್ಪಡುವದು.
ದುಷ್ಟರಿಗೆ ಸಮಾಧಾನವೇ ಇಲ್ಲ ಎಂದು ಕರ್ತನು ನುಡಿಯುತ್ತಾನೆ.
ಎಲ್ಲಾ ಭೂಮಿಯ ಸುತ್ತಿಗೆಯೂ ಹೇಗೆ ತುಂಡಾಗಿ ಮುರಿಯಲ್ಪಟ್ಟಿತು; ಬಾಬೆಲ್ ಹೇಗೆ ಜನಾಂಗಗಳೊಳಗೆ ಹಾಳಾಯಿತು!
ಳಂಕರಾದ ಇವರು ನಿಮ್ಮ ಪ್ರೇಮ ಭೋಜನಗಳಲ್ಲಿ ನಿರ್ಭಯವಾಗಿ ತಿಂದು ತಮ್ಮನ್ನು ತಾವೇ ಪೋಷಿಸಿಕೊಳ್ಳುತ್ತಾರೆ. ಇವರು ಗಾಳಿಯಿಂದ ಬಡಿಸಿಕೊಂಡು ಹೋಗುವ ನೀರಿಲ್ಲದ ಮೇಘಗಳೂ ಎರಡು ಸಾರಿ ಸತ್ತವರೂ ಹಣ್ಣು ಬಿಡದೆ ಒಣಗಿಹೋಗಿ ಬೇರು ಸಹಿತ ಕಿತ್ತುಬಿದ್ದ ಮರಗಳೂ