ಕರ್ತನು ತನ್ನ ಪರಿ ಶುದ್ಧವಾದ ಬಾಹುವನ್ನು ಸಕಲ ಜನಾಂಗಗಳ ಕಣ್ಣು ಗಳಿಗೆ ತೋರಮಾಡಿದ್ದಾನೆ. ಭೂಮಿಯ ಅಂತ್ಯದವ ರೆಲ್ಲಾ ನಮ್ಮ ದೇವರ ರಕ್ಷಣೆಯನ್ನು ನೋಡುವರು.
Cross references
ನಿಮ್ಮ ದೇವರಾದ ಕರ್ತನು ಕೆಂಪು ಸಮುದ್ರವನ್ನು ನಾವು ದಾಟುವ ಪರಿಯಂತರ ನಮ್ಮ ಮುಂದೆ ಒಣಗಿ ಹೋಗಮಾಡಿದ ಹಾಗೆ ನೀವು ದಾಟಿ ಬರುವ ಪರಿಯಂತರ ದೇವರಾದ ಕರ್ತನು ಯೊರ್ದನಿನ ನೀರನ್ನು ಭಾಗ ಮಾಡಿದನು.
ಇಲ್ಲವೆ ದೇವರ ಹಾಗೆ ತೋಳುಳ್ಳವನಾಗಿದ್ದೀಯೋ? ಇಲ್ಲವೆ ಆತನ ಹಾಗೆ ಗುಡುಗಿನಿಂದ ಆರ್ಭಟ ಮಾಡು ವಿಯೋ?
ಲೋಕದಂತ್ಯದಲ್ಲಿರುವ ಎಲ್ಲಾ ಜನರು ಜ್ಞಾಪಕ ಮಾಡಿ ಕರ್ತನ ಕಡೆಗೆ ತಿರಿಗಿಕೊಳ್ಳುವರು; ಜನಾಂಗ ಗಳ ಗೋತ್ರಗಳೆಲ್ಲರೂ ನಿನ್ನ ಮುಂದೆ ಆರಾಧಿಸುವರು.
ಕರ್ತನಿಗೆ ಹೊಸ ಹಾಡನ್ನು ಹಾಡಿರಿ; ಆತನು ಅದ್ಭುತಗಳನ್ನು ಮಾಡಿದ್ದಾನೆ; ಆತನ ಬಲಗೈಯೂ ಪರಿಶುದ್ಧತೋಳೂ ಆತನಿಗೆ ಜಯ ವನ್ನು ತಂದಿವೆ.
ಆಗ ಕರ್ತನು ತನ್ನ ಗಂಭೀರವಾದ ಸ್ವರವನ್ನು ಕೇಳಮಾಡಿ ತೀವ್ರ ಕೋಪ, ಕಬಳಿಸುವ ಅಗ್ನಿಜ್ವಾಲೆ, ಪ್ರಳಯ, ಬಿರುಗಾಳಿ, ಕಲ್ಮಳೆ ಇವುಗಳಿಂದ ತನ್ನ ಶಿಕ್ಷಾಹಸ್ತವನ್ನು ತೋರ್ಪಡಿ ಸುವನು.
ದೂರದಲ್ಲಿರುವವರೇ, ನಾನು ಮಾಡಿದ್ದನ್ನು ಕೇಳಿರಿ. ಸವಿಾಪದಲ್ಲಿರುವವರೇ, ನನ್ನ ಪರಾಕ್ರಮ ವನ್ನು ತಿಳಿದುಕೊಳ್ಳಿರಿ.
ಆತನೇ ಈಗ ಹೀಗನ್ನುತ್ತಾನೆ--ನೀನು ನನ್ನ ಸೇವಕನಾಗಿ ಮಾಡಬೇಕಾದವುಗಳಲ್ಲಿ ಯಾಕೋಬನ ಕುಲಗಳನ್ನು ಉನ್ನತಪಡಿ ಸುವದೂ ಇಸ್ರಾಯೇಲಿನಲ್ಲಿ ರಕ್ಷಿತರಾದವರನ್ನು ತಿರಿಗಿ ಬರಮಾಡುವದೂ ಅಲ್ಪ ಕಾರ್ಯವೇ; ನನ್ನ ರಕ್ಷಣೆಯು ಲೋಕದ ಕಟ್ಟಕಡೆಯ ವರೆಗೆ ವ್ಯಾಪಿಸುವಂತೆ ನಿನ್ನನ್ನು ಅನ್ಯಜನಾಂಗಗಳಿಗೆ ಬೆಳಕನ್ನಾಗಿ ದಯಪಾಲಿಸುವೆನು.
ಓ ಕರ್ತನ ತೋಳೇ, ಎಚ್ಚರಗೊಳ್ಳು, ಎಚ್ಚರ ಗೊಳ್ಳು, ಬಲವನ್ನು ಹೊಂದಿಕೋ; ಹಿಂದಿನ ಜನಾಂಗ ಗಳಲ್ಲಿ ಪೂರ್ವಕಾಲದ ದಿವಸಗಳಲ್ಲಿ ಎಚ್ಚರವಿದ್ದಂ ತೆಯೇ ಎಚ್ಚರವಾಗು. ರಹಬನ್ನು ಕಡಿದುಬಿಟ್ಟದ್ದೂ, ಘಟಸರ್ಪವನ್ನು ಗಾಯಪಡಿಸಿದ್ದೂ ನೀನಲ್ಲವೋ?
ನಮ್ಮ ಸುದ್ಧಿಯನ್ನು ಯಾರು ನಂಬಿದ್ದಾರೆ? ಕರ್ತನ ತೋಳು ಯಾರಿಗೆ ಪ್ರಕಟವಾ ಯಿತು?
ನಾನು ಅವರ ಕ್ರಿಯೆಗಳನ್ನೂ ಅವರ ಆಲೋಚನೆಗಳನ್ನೂ ಬಲ್ಲೆನು. ಎಲ್ಲಾ ಜನಾಂಗ ಗಳನ್ನೂ ಭಾಷೆಯವರನ್ನೂ ಇನ್ನು ಮುಂದೆ ಒಟ್ಟಿಗೆ ಬರಮಾಡುವೆನು; ಆಗ ಅವರು ಬಂದು ನನ್ನ ಮಹಿ ಮೆಯನ್ನು ನೋಡುವರು.
ಮಾನವರೆಲ್ಲರು ದೇವರ ರಕ್ಷಣೆಯನ್ನು ಕಾಣುವರು ಎಂದೂ ಬರೆದಿರುವಂತೆ ಹೀಗಾಯಿತು.
ಆಕಾಶದ ಕೆಳಗಿರುವ ಪ್ರತಿಯೊಂದು ಜನಾಂಗದವರೊಳಗಿಂದ (ಬಂದಿದ್ದ) ಭಕ್ತಿಯುಳ್ಳ ಯೆಹೂದ್ಯರು ಯೆರೂಸಲೇಮಿನಲ್ಲಿ ವಾಸ ಮಾಡುತ್ತಿದ್ದರು
ಯಾಕಂ ದರೆ--ನೀನು ಲೋಕದ ಕಟ್ಟಕಡೆಯ ವರೆಗೆ ರಕ್ಷಣೆಗೆ ಕಾರಣವಾಗಿರುವಂತೆ ನಾನು ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ನೇಮಿಸಿದ್ದೇನೆ ಎಂದು ಹೇಳಿದ ಹಾಗೆ ಕರ್ತನು ನಮಗೆ ಅಪ್ಪಣೆ ಕೊಟ್ಟಿದ್ದಾನೆ.
ಏಳನೆಯ ದೂತನು ತುತೂರಿಯನ್ನೂದಿದನು. ಆಗ ಪರಲೋಕದಲ್ಲಿ ಮಹಾಶಬ್ದಗಳುಂಟಾಗಿ-- ಈ ಲೋಕದ ರಾಜ್ಯಗಳು ನಮ್ಮ ಕರ್ತನ ಮತ್ತು ಆತನ ಕ್ರಿಸ್ತನ ರಾಜ್ಯಗಳಾದವು; ಆತನು ಯುಗ ಯುಗಾಂತರಗಳಲ್ಲಿಯೂ ಆಳುವನು ಎಂದು ಹೇಳಿ ದವು.
ಭೂಮಿಯಲ್ಲಿ ವಾಸಿಸುವ ಪ್ರತಿಯೊಂದು ಜನಾಂಗ ಕ್ಕೂ ಕುಲದವರಿಗೂ ಭಾಷೆಯವರಿಗೂ ಮತ್ತು ಜನ ರಿಗೂ ಸಾರುವದಕ್ಕೆ ನಿತ್ಯವಾದ ಸುವಾರ್ತೆ ಇದ್ದ ಇನ್ನೊಬ್ಬ ದೂತನು ಆಕಾಶದ ಮಧ್ಯದಲ್ಲಿ ಹಾರುವದನ್ನು ನಾನು ಕಂಡೆನು.
ಓ ಕರ್ತನೇ, ನಿನಗೆ ಭಯಪಡದವರೂ ನಿನ್ನ ನಾಮವನ್ನು ಮಹಿಮೆಪಡಿಸದವರೂ ಯಾರಿ ದ್ದಾರೆ? ಯಾಕಂದರೆ ನೀನೊಬ್ಬನೇ ಪರಿಶುದ್ಧನು; ನಿನ್ನ ತೀರ್ಪುಗಳು ಪ್ರಕಟವಾದದ್ದರಿಂದ ಎಲ್ಲಾ ಜನಾಂಗ ಗಳು ಬಂದು ನಿನ್ನ ಸನ್ನಿಧಾನದಲ್ಲಿ ಆರಾಧಿಸುವರು ಎಂದು ಹೇಳಿದರು.