ಕರ್ತನ ಕೈಯಿಂದ ಆತನ ಉಗ್ರದ ಪಾತ್ರೆಯನ್ನು ಕುಡಿದ ಓ ಯೆರೂಸಲೇಮೇ, ಎಚ್ಚರಗೊಳ್ಳು, ಎಚ್ಚರಗೊಳ್ಳು, ಎದ್ದೇಳು; ನೀನು ತತ್ತರಗೊಳಿಸುವಂಥ ಪಾತ್ರೆಯಲ್ಲಿದ್ದ ಮಡ್ಡಿಯನ್ನು ಕುಡಿದು ಹೀರಿಬಿಟ್ಟಿದ್ದೀ.
Cross references
ಕರ್ತನು ನಿನ್ನನ್ನು ಹುಚ್ಚುತನದಿಂದಲೂ ಕುರುಡುತನದಿಂದಲೂ ಹೃದಯದ ವಿಸ್ಮಯದಿಂದಲೂ ಹೊಡೆಯುವನು.
ನಿನ್ನ ಕಣ್ಣುಗಳು ನೋಡುವ ನೋಟದಿಂದ ಹುಚ್ಚನಾಗುವಿ.
ಎಚ್ಚರವಾಗು, ಎಚ್ಚರ ವಾಗು, ದೆಬೋರಳೇ, ಎಚ್ಚರವಾಗು, ಎಚ್ಚರವಾಗು, ಹಾಡನ್ನು ಹಾಡು; ಬಾರಾಕನೇ; ಏಳು; ಅಬೀನೋವ ಮನ ಮಗನೇ, ನಿನ್ನನ್ನು ಸೆರೆಹಿಡಿದವರನ್ನು ಸೆರೆಯಾಗಿ ನಡಿಸು.
ಅವನ ಕಣ್ಣುಗಳು ಅವನ ನಾಶನವನ್ನು ನೋಡುವವು; ಸರ್ವಶಕ್ತನ ಉಗ್ರವನ್ನು ಅವನು ಕುಡಿಯುವನು.
ದುಷ್ಟರ ಮೇಲೆ ಉರ್ಲುಗಳನ್ನೂ ಬೆಂಕಿಯನ್ನೂ ಗಂಧಕವನ್ನೂ ಉರಿಗಾಳಿಯನ್ನೂ ಆತನು ಸುರಿಸುವನು. ಇದು ಅವರ ಪಾನದ ಬಟ್ಟ ಲಾಗಿರುವದು;ನೀತಿಯ ಕರ್ತನು ನೀತಿಯನ್ನು ಪ್ರೀತಿ ಮಾಡುತ್ತಾನೆ; ಆತನ ಮುಖವು ಯಥಾರ್ಥನನ್ನು ದೃಷ್ಟಿಸುತ್ತದೆ.
ನಿನ್ನ ಜನರಿಗೆ ಕಠಿಣವಾದವುಗಳನ್ನು ನೀನು ತೋರಿಸಿದ್ದೀ; ವಿಸ್ಮಯದ ದ್ರಾಕ್ಷಾರಸವನ್ನು ನಮಗೆ ಕುಡಿಸಿದ್ದೀ.
ನಿನ್ನ ಪ್ರಿಯರು ಬಿಡುಗಡೆ ಯಾಗುವಂತೆ ನನ್ನ ಪ್ರಾರ್ಥನೆಯನ್ನು ಕೇಳಿ ನಿನ್ನ ಬಲಗೈಯಿಂದ ರಕ್ಷಿಸು.
ಕರ್ತನ ಕೈಯಲ್ಲಿ ಪಾತ್ರೆಯು ಉಂಟು; ದ್ರಾಕ್ಷಾರಸವು ಕೆಂಪಾಗಿದೆ. ಕಲಬೆರಿಕೆಯಿಂದ ತುಂಬಿ ಅದೆ; ಅದರಿಂದ ಆತನು ಹೊಯ್ಯುತ್ತಾನೆ; ಅದರ ಮಡ್ಡಿಯನ್ನು ಭೂಮಿಯ ದುಷ್ಟರೆಲ್ಲರೂ ಹೀರಿಕೊಂಡು ಕುಡಿಯುವರು.
ದುಷ್ಟರ ಕೊಂಬುಗಳನ್ನೆಲ್ಲಾ ಕಡಿದುಬಿಡುವೆನು; ಆದರೆ ನೀತಿವಂತರ ಕೊಂಬುಗಳು ಎತ್ತಲ್ಪಡುವವು.
ಯೆರೂಸಲೇಮಿನ ಸಂಗಡ ನೀವು ಹೃದಯಾಂಗಮ ವಾಗಿ ಮಾತಾಡಿರಿ; ಅದರ ಯುದ್ಧವು ತೀರಿತೆಂದೂ ದೋಷವು ಕ್ಷಮಿಸಲ್ಪಟ್ಟಿದೆ ಎಂದು ಕೂಗಿರಿ; ಅದು ಎಲ್ಲಾ ಪಾಪಗಳಿಗೂ ಕರ್ತನಿಂದ ಎರಡರಷ್ಟು ಹೊಂದಿ ದ್ದಾಯಿತು.
ಓ ಕರ್ತನ ತೋಳೇ, ಎಚ್ಚರಗೊಳ್ಳು, ಎಚ್ಚರ ಗೊಳ್ಳು, ಬಲವನ್ನು ಹೊಂದಿಕೋ; ಹಿಂದಿನ ಜನಾಂಗ ಗಳಲ್ಲಿ ಪೂರ್ವಕಾಲದ ದಿವಸಗಳಲ್ಲಿ ಎಚ್ಚರವಿದ್ದಂ ತೆಯೇ ಎಚ್ಚರವಾಗು. ರಹಬನ್ನು ಕಡಿದುಬಿಟ್ಟದ್ದೂ, ಘಟಸರ್ಪವನ್ನು ಗಾಯಪಡಿಸಿದ್ದೂ ನೀನಲ್ಲವೋ?
ಓ ಚೀಯೋನೇ, ಎಚ್ಚರವಾಗು, ಎಚ್ಚರವಾಗು, ನಿನ್ನ ಬಲವನ್ನು ಹೊಂದಿಕೋ, ಓ ಯೆರೂಸಲೇಮೇ, ಪರಿಶುದ್ಧ ಪಟ್ಟಣವೇ, ನಿನ್ನ ಸೌಂದರ್ಯವಾದ ಉಡುಪುಗಳನ್ನು ಧರಿಸಿಕೋ; ಯಾಕಂದರೆ ಇಂದಿನಿಂದ ಸುನ್ನತಿಯಿಲ್ಲದವರೂ ಅಶುದ್ಧರೂ ನಿನ್ನೊಳಗೆ ಬರುವದಿಲ್ಲ.
ಏಳು, ಪ್ರಕಾಶಿಸು; ಯಾಕಂದರೆ, ನಿನ್ನ ಬೆಳಕು ಬಂತು; ಕರ್ತನ ಮಹಿಮೆಯು ನಿನ್ನ ಮೇಲೆ ಉದಯವಾಯಿತು.
ನನ್ನ ಕೋಪ ದಲ್ಲಿ ಜನಗಳನ್ನು ತುಳಿದು ಬಿಟ್ಟೆನು; ನನ್ನ ರೋಷ ದಲ್ಲಿ ಅವರನ್ನು ಕುಡಿಯುವಂತೆ ಮಾಡಿದೆನು; ಅವರ ಶಕ್ತಿಯನ್ನು ಭೂಮಿಗೆ ಇಳಿಯುವಂತೆ ಮಾಡಿದೆನು.
ಆದರೂ ನೀವು ನನ್ನನ್ನು ಕೊಂದುಹಾಕಿದರೆ ನಿಮ್ಮ ಮೇಲೆಯೂ ಈ ಪಟ್ಟಣದ ಮೇಲೆಯೂ ಅದರ ನಿವಾಸಿಗಳ ಮೇಲೆಯೂ ಅಪರಾಧವಿಲ್ಲದ ರಕ್ತವನ್ನು ಬರಮಾಡು ತ್ತೀರೆಂದು ನಿಶ್ಚಯವಾಗಿ ತಿಳುಕೊಳ್ಳಿರಿ, ಈ ವಾಕ್ಯಗಳ ನ್ನೆಲ್ಲಾ ನಿಮ್ಮ ಕಿವಿಗಳಲ್ಲಿ ಹೇಳುವ ಹಾಗೆ ಸತ್ಯವಾಗಿ ಕರ್ತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ ಅಂದನು.
ನೀನು ನಿನ್ನ ಸಹೋದರಿಯ ಮಾರ್ಗದಲ್ಲಿಯೇ ನಡೆದದ್ದರಿಂದ ಅವಳ ಪಾತ್ರೆಯನ್ನು ನಿನ್ನ ಕೈಗೆ ಕೊಡುತ್ತೇನೆ.
ನೀನು ಅದರಲ್ಲಿ ಸ್ವಲ್ಪವೂ ಉಳಿಯದಂತೆ ಹೀರಿ ಕುಡಿದು ಅದನ್ನು ಬೋಕಿಗಳ ಹಾಗೆ ಒಡೆದುಹಾಕುವಿ ಮತ್ತು ನೀನೇ ನಿನ್ನ ಸ್ತನಗಳನ್ನು ಕಿತ್ತುಕೊಳ್ಳುವಿ; ನಾನೇ ಅದನ್ನು ಹೇಳಿದ್ದೇನೆಂದು ದೇವರಾದ ಕರ್ತನು ಹೇಳಿದ್ದಾನೆ.
ಇಗೋ, ನಾನು ಯೆರೂಸಲೇಮನ್ನು ಸುತ್ತಲಿರುವ ಎಲ್ಲಾ ಜನರಿಗೆ ನಡುಗುವ ಪಾತ್ರೆಯಾಗಿ ಮಾಡುತ್ತೇನೆ; ಯೆರೂಸಲೇ ಮಿಗೂ ಯೆಹೂದಕ್ಕೂ ವಿರೋಧವಾಗಿ ಮುತ್ತಿಗೆ ಹಾಕುವ
ನೀತಿಗಾಗಿ ಎಚ್ಚರಗೊಳ್ಳಿರಿ, ಪಾಪಮಾಡಬೇಡಿರಿ; ಕೆಲವರಿಗೆ ದೇವರ ವಿಷಯವಾದ ಜ್ಞಾನವೇ ಇಲ್ಲ; ನಾನು ಇದನ್ನು ನಿಮಗೆ ನಾಚಿಕೆ ಪಡಿಸುವದಕ್ಕಾಗಿ ಹೇಳುತ್ತೇನೆ.
ಆದದರಿಂದ-- ನಿದ್ರೆ ಮಾಡುವವನೇ, ಎಚ್ಚರವಾಗು, ಸತ್ತವರಿಂದ ಎದ್ದೇಳು; ಕ್ರಿಸ್ತನು ನಿನಗೆ ಪ್ರಕಾಶಕೊಡುವನು ಎಂದು ಆತನು ಹೇಳುತ್ತಾನೆ.
ಅಂಥವನು ದೇವರ ಕೋಪವೆಂಬ ಪಾತ್ರೆ ಯಲ್ಲಿ ಏನೂ ಬೆರಸದೆ ಹಾಕಿದ ಆತನ ರೌದ್ರವೆಂಬ ದ್ರಾಕ್ಷಾರಸವನ್ನು ಕುಡಿಯುವನು. ಪರಿಶುದ್ಧ ದೂತರ ಮುಂದೆಯೂ ಕುರಿಮರಿಯಾದಾತನ ಮುಂದೆಯೂ ಬೆಂಕಿಯಿಂದ ಮತ್ತು ಗಂಧಕದಿಂದ ಯಾತನೆಪಡು ವನು.
ಆ ಮಹಾಪಟ್ಟಣವು ಮೂರು ಭಾಗಗಳಾಗಿ ವಿಭಾಗವಾಯಿತು; ಜನಾಂಗಗಳ ಪಟ್ಟಣಗಳು ಬಿದ್ದವು; ಇದಲ್ಲದೆ ಮಹಾಬಾಬೆಲಿಗೆ ಉಗ್ರಕೋಪವೆಂಬ ದ್ರಾಕ್ಷಾರಸದ ಪಾತ್ರೆಯನ್ನು ಕೊಡು ವಂತೆ ದೇವರ ಮುಂದೆ ಅದು ಜ್ಞಾಪಕಕ್ಕೆ ಬಂತು.
ನಿಮಗೆ ಅವಳು ಮಾಡಿದ ಪ್ರಕಾರ ನೀವು ಅವಳಿಗೆ ಪ್ರತೀಕಾರ ಮಾಡಿರಿ; ಅವಳ ಕೃತ್ಯಗಳಿಗೆ ಸರಿಯಾಗಿ ಅವಳಿಗೆ ಎರಡರಷ್ಟು ಕೊಡಿರಿ. ಅವಳು ತುಂಬಿಸಿದ ಪಾತ್ರೆಯಲ್ಲಿ ಅವಳಿಗೆ ಎರಡರಷ್ಟು ತುಂಬಿಸಿರಿ.