ಆಕಾಶವನ್ನು ಹಾಸಿ, ಭೂಮಿಗೆ ಅಸ್ತಿವಾರವನ್ನು ಹಾಕಿ, ನಿನ್ನನ್ನು ಉಂಟು ಮಾಡಿದ ಕರ್ತನನ್ನು ನೀನು ಮರೆತುಬಿಟ್ಟು ಹಿಂಸಕನ ಉಗ್ರಕ್ಕೆ ಎಡೆಬಿಡದೆ ಪ್ರತಿದಿನವೂ ಅವನು ನಾಶ ಪಡಿಸುವನೋ ಎಂಬಂತೆ ಅಂಜಿಕೊಂಡಿದ್ದಿಯಲ್ಲಾ? ಮತ್ತು ಆ ಹಿಂಸಕನ ಉಗ್ರವು ಎಲ್ಲಿ?
Cross references
ಫರೋಹನು ಸವಿಾಪಕ್ಕೆ ಬರುತ್ತಿರಲು ಇಗೋ, ಇಸ್ರಾಯೇಲ್ ಮಕ್ಕಳು ತಮ್ಮ ಕಣ್ಣುಗಳನ್ನೆತ್ತಿ ಹಿಂದೆ ಬರುತ್ತಿರುವ ಐಗುಪ್ತ್ಯರನ್ನು ಕಂಡು ಇಸ್ರಾಯೇಲ್ ಮಕ್ಕಳು ಬಹಳವಾಗಿ ಭಯಪಟ್ಟು ಕರ್ತನಿಗೆ ಮೊರೆಯಿ ಟ್ಟರು.
ಶತ್ರುವು--ನಾನು ಹಿಂದಟ್ಟಿ, ಹಿಡಿ ಯುವೆನು, ಕೊಳ್ಳೆಯನ್ನು ಹಂಚಿಕೊಳ್ಳುವೆನು, ನನ್ನ ಆಶೆಗಳು ಅವರಿಂದ ತೃಪ್ತಿಹೊಂದುವವು. ನಾನು ನನ್ನ ಖಡ್ಗವನ್ನು ಹಿರಿಯುವೆನು, ನನ್ನ ಕೈ ಅವರನ್ನು ಸಂಹಾರ ಮಾಡುವದು ಅಂದನು.
ನಿನ್ನನ್ನು ಹುಟ್ಟಿಸಿದ ಬಂಡೆಯನ್ನು ನೆನಸದೆ ನಿನ್ನನ್ನು ರೂಪಿಸಿದ ದೇವರನ್ನು ಮರೆತುಬಿಟ್ಟಿದ್ದಿ.
ಆಗ ಅವನ ಹೆಂಡತಿಯಾದ ಜೆರೆಷಳೂ ಅವನ ಸಮಸ್ತ ಸ್ನೇಹಿತರೂ ಅವನಿಗೆಐವತ್ತು ಮೊಳ ಉದ್ದವಾದ ಒಂದು ಗಲ್ಲಿನ ಮರವು ಮಾಡಲ್ಪಡಲಿ; ಮೊರ್ದೆಕೈ ಅದರಲ್ಲಿ ಹಾಕಲ್ಪಡುವ ಹಾಗೆ ನಾಳೆ ಅರಸನ ಸಂಗಡ ಮಾತನಾಡು; ತರುವಾಯ ಅರಸನ ಸಂಗಡ ಔತಣಕ್ಕೆ ಸಂತೋಷ ವಾಗಿ ಹೋಗು ಅಂದರು. ಈ ಮಾತು ಹಾಮಾನನಿಗೆ ಚೆನ್ನಾಗಿ ಕಾಣಿಸಿದ್ದರಿಂದ ಗಲ್ಲಿನ ಮರವನ್ನು ಸಿದ್ಧ ಮಾಡಿಸಿದನು.
ಅವರು ಮೊರ್ದೆಕೈ ಗೋಸ್ಕರ ಹಾಮಾನನು ಸಿದ್ಧ ಮಾಡಿಸಿದ್ದ ಗಲ್ಲಿನ ಮರದಲ್ಲಿ ಅವನನ್ನು ಹಾಕಿದರು. ಆಗ ಅರಸನ ಕೋಪವು ಶಾಂತವಾಯಿತು.
ಆತನೊಬ್ಬನೇ ಆಕಾಶಗಳನ್ನು ಹರಡಿಸುತ್ತಾನೆ; ಸಮುದ್ರದ ತೆರೆಗಳ ಮೇಲೆ ನಡೆಯುತ್ತಾನೆ.
ಏನಂದರೆ, ದುಷ್ಟರ ಜಯವು ಸ್ವಲ್ಪ ಕಾಲದ್ದೂ ಕಪಟಿಗಳ ಸಂತೋಷವು ಕ್ಷಣ ಮಾತ್ರದ್ದೂ.
ಎರಕ ಹೊಯ್ದ ಕನ್ನಡಿಯ ಹಾಗೆ ಬಲವಾಗಿರುವ ಆಕಾಶವನ್ನು ಆತನ ಸಂಗಡ ಮಂಡಲವಾಗಿ ನೀನು ವಿಸ್ತರಿಸಿದ್ದೀಯೋ?
ಓ ಶತ್ರುವೇ, ನಾಶನ ಗಳು ಸದಾಕಾಲಕ್ಕೆ ಮುಗಿದಿವೆ; ನೀನು ಪಟ್ಟಣಗಳನ್ನು ನಾಶಮಾಡಿದ್ದೀ; ಅವರ ಜ್ಞಾಪಕವು ಅವರೊಂದಿಗೆ ನಾಶವಾಯಿತು.
ದುಷ್ಟನು ದೊಡ್ಡ ಅಧಿಕಾರದಲ್ಲಿರು ವದನ್ನು ನಾನು ನೋಡಿದೆನು; ಅವನು ಹಸುರಾಗಿ ವಿಸ್ತರಿಸಿಕೊಂಡ ಮರದ ಹಾಗೆ ಇದ್ದನು.
ನಿಶ್ಚಯವಾಗಿ ಮನುಷ್ಯನ ಕೋಪವು ನಿನ್ನನ್ನು ಕೊಂಡಾಡುವದು; ಕೋಪಶೇಷವನ್ನು ನೀನು ಬಿಗಿ ಹಿಡಿದು ಕೊಳ್ಳುವಿ.
ನೀನು ಪೂರ್ವಕಾಲದಲ್ಲಿ ಭೂಮಿ ಯನ್ನು ಸ್ಥಾಪಿಸಿದಿ; ಆಕಾಶಗಳು ನಿನ್ನ ಕೈ ಕೆಲಸಗಳಾ ಗಿವೆ.
ಆತನು ವಸ್ತ್ರದ ಹಾಗೆ ಬೆಳಕನ್ನು ಧರಿಸಿಕೊಳ್ಳುವಾತನೂ ಆಕಾಶ ವನ್ನು ಪರದೆ ಹಾಗೆ ಹಾಸುವಾತನೂ ಆಗಿದ್ದಾನೆ.
ಆತನ ಕೆಲಸಗಳನ್ನು ಬೇಗ ಮರೆತುಬಿಟ್ಟು ಆತನ ಆಲೋಚನೆಗೆ ಅವರು ಕಾದುಕೊಳ್ಳದೆ ಇದ್ದರು.
ಜಾಗ ರೂಕನಾಗಿ ಸುಮ್ಮನಿರು; ಭಯಪಡಬೇಡ ಇಲ್ಲವೆ ರೆಚೀನ ಅರಾಮ್ಯ ರೆಮಲ್ಯನ ಮಗ ಇವರ ಕೋಪವು ಎಷ್ಟು ಹೆಚ್ಚಿದರೂ ಹೊಗೆಯಾಡುವ ಈ ಎರಡು ಮೋಟು ಕೊಳ್ಳಿಗಳಿಗೆ ನಿನ್ನ ಹೃದಯವು ಕುಂದದಿರಲಿ.
ಇವರು ಯಾವದನ್ನು ಒಪ್ಪಂದ ಎಂದು ಹೇಳುತ್ತಾರೋ ನೀವು ಅದನ್ನು ಒಪ್ಪಂದವೆನ್ನಬೇಡಿರಿ; ಅವರ ಭಯಕ್ಕೆ ನೀವು ಭಯಪಡಬೇಡಿರಿ, ಇಲ್ಲವೆ ಹೆದರಬೇಡಿರಿ.
ಅವರು ಕಣಿವೆಯನ್ನು ದಾಟಿದ್ದಾರೆ; ಗೆಬಾದಲ್ಲಿ ಇಳುಕೊಂಡಿದ್ದಾರೆ; ರಾಮಾ ಹೆದರುತ್ತದೆ; ಸೌಲನ ಗಿಬ್ಯಾ ಓಡಿಹೋಯಿತು.
ನಿನ್ನನ್ನು ನೋಡುವ ವರು ನಿನ್ನನ್ನು ಸೂಕ್ಷ್ಮವಾಗಿ ದೃಷ್ಟಿಸಿ ಯೋಚಿಸುತ್ತಾ --ಭೂಮಿಯನ್ನು ನಡುಗಿಸಿ ರಾಜ್ಯಗಳನ್ನು ಕದಲಿಸಿ ಪಟ್ಟಣವನ್ನು ನಾಶಮಾಡಿ
ಮೋವಾಬೇ, ನನ್ನಿಂದ ತಳ್ಳಿಬಿಟ್ಟವರು ನಿನ್ನೊಂದಿಗೆ ವಾಸಿಸಲಿ; ಹಾಳುಮಾಡುವವರ ಮುಖಗಳಿಂದ ಅವ ರಿಗೆ ಮರೆಯಾಗಿರು: ಹಿಂಸಿಸುವದು ಮುಗಿಯುತ್ತಾ ಬಂತು, ಸೂರೆಮಾಡುವದು ನಿಲ್ಲುವದು. ಪೀಡಿಸು ವವರು ದೇಶದಿಂದ ದಹಿಸಲ್ಪಡುವರು.
ನೀನು ನಿನ್ನ ರಕ್ಷಣೆಯ ದೇವರನ್ನು ಮರೆತು ನಿನ್ನ ಬಲದ ಬಂಡೆ ಯನ್ನು ನೆನಸದೆ ಇದ್ದದರಿಂದ ನೀನು ರಮ್ಯವಾದ ಗಿಡಗಳನ್ನು ಸಸಿಯನ್ನು ನೆಡುವಿ, ಅಪರೂಪವಾದ ಸಸಿಗಳನ್ನು ಹಾಕುವಿ.
ಆಗ ಭಯವನ್ನು ಮನಸ್ಸಿಗೆ ತಂದುಕೊಳ್ಳುತ್ತಾ ಬರೆಯು ವವನು ಎಲ್ಲಿ? ಅಂಗೀಕರಿಸುವವನು ಎಲ್ಲಿ? ಬುರುಜು ಗಳನ್ನು (ಗೋಪುರಗಳನ್ನು) ಲೆಕ್ಕಮಾಡಿದವನು ಎಲ್ಲಿ ಎಂದು ಅಂದುಕೊಳ್ಳುವಿರಿ.
ಆಗ ಕರ್ತನ ದೂತನು ಹೊರಟು ಬಂದು ಅಶ್ಶೂರ್ಯರ ಪಾಳೆಯದಲ್ಲಿ ಲಕ್ಷದ ಎಂಭತ್ತೈದು ಸಾವಿರ ಮಂದಿಯನ್ನು ಹೊಡೆದನು. ಇನ್ನೂ ಮೊಬ್ಬಿರು ವಾಗಲೇ ಎದ್ದಾಗ ಇಗೋ, ಅವರು ಸತ್ತ ಹೆಣಗಳಾ ಗಿದ್ದರು.
ಆಕಾಶ ಮಂಡಲವನ್ನು ತೆರೆಯಂತೆ ವಿಸ್ತರಿಸಿ ಅದರೊಳಗೆ ವಾಸಮಾಡುವ ಗುಡಾರದಂತೆ ಹರಡಿ ಭೂನಿವಾಸಿಗಳು ಮಿಡತೆಯಂತೆ ಕಾಣಿಸುವಷ್ಟು ಭೂವೃತ್ತದ ಮೇಲೆ ಕೂತಿರುವಾತನು ಆತನೇ.
ಆಕಾಶವನ್ನು ನಿರ್ಮಿಸಿ ಹಾಸಿದವನು ಭೂಮಿಯನ್ನು ಅದರಿಂದ ಉತ್ಪತ್ತಿ ಯನ್ನೂ ವಿಸ್ತರಿಸಿ, ಅದರ ಮೇಲಿರುವ ಜನರಿಗೆ ಶ್ವಾಸವನ್ನೂ ಸಂಚರಿಸುವವರಿಗೆ ಆತ್ಮವನ್ನು ಕೊಡು ತ್ತೇನೆಂದು ದೇವರಾದ ಕರ್ತನು ಹೇಳುತ್ತಾನೆ--
ಈಗಲಾದರೋ ಓ ಯಾಕೋಬೇ, ಇಸ್ರಾಯೇಲೇ ನಿನ್ನನ್ನು ಸೃಷ್ಟಿಸಿದಾತನೂ ರೂಪಿಸಿದಾತನೂ ಆದ ಕರ್ತನು ಇಂತೆನ್ನುತ್ತಾನೆ--ಹೆದರಬೇಡ, ನಾನು ನಿನ್ನನ್ನು ವಿಮೋಚಿಸಿದೆನಲ್ಲಾ ನಿನ್ನ ಹೆಸರು ಹಿಡಿದು ಕರೆದೆನಲ್ಲಾ; ನೀನು ನನ್ನವನೇ.
ನಿನ್ನನ್ನು ಗರ್ಭದಿಂದ ರೂಪಿಸಿದವನೂ ನಿನ್ನ ವಿಮೋಚಕನೂ ಆದ ಕರ್ತನು ಹೀಗನ್ನುತ್ತಾನೆ--ಎಲವನ್ನೂ ಉಂಟುಮಾಡಿದ ಕರ್ತನು ನಾನೇ. ನಾನೊ ಬ್ಬನೇ ಆಕಾಶವನ್ನು ವಿಸ್ತರಿಸಿ ಭೂಮಿಯನ್ನು ನಾನೇ ವಿಶಾಲವಾಗಿ ಹರಡಿದವನಾಗಿದ್ದೇನೆ.
ನಾನು ಭೂಮಿಯನ್ನು ಉಂಟುಮಾಡಿ, ಅದರ ಮೇಲೆ ಮನು ಷ್ಯನನ್ನು ಸೃಷ್ಟಿಸಿದೆನು; ನನ್ನ ಕೈಗಳೇ ಆಕಾಶಗಳನ್ನು ವಿಸ್ತರಿಸಿದವು ಮತ್ತು ನಾನು ಅದರ ಸೈನ್ಯಕ್ಕೆಲ್ಲಾ ಅಪ್ಪಣೆ ಕೊಟ್ಟೆನು.
ನನ್ನ ಕೈ ಭೂಮಿಗೆ ಅಸ್ತಿವಾರವನ್ನು ಹಾಕಿತು; ನನ್ನ ಬಲಗೈ ಆಕಾಶವನ್ನು ಹರಡಿತು; ನಾನು ಅವುಗಳನ್ನು ಕರೆಯಲು ಅವು ಒಟ್ಟಾಗಿ ನಿಂತುಕೊಂಡವು.
ನೀನು ಸುಳ್ಳು ಹೇಳಿ ನನ್ನನ್ನು ಜ್ಞಾಪಕ ಮಾಡದೆ ಇಲ್ಲವೆ ಅದನ್ನು ಮನಸ್ಸಿಗೆ ತಾರದೆ ಇರುವಾಗ ಯಾರಿಗೆ ಅಂಜಿಕೊಂಡು ಭಯಪಟ್ಟಿ?
ಯುವತಿಯು ತನ್ನ ಆಭರಣಗಳನ್ನೂ ಮದಲಗಿತ್ತಿಯು ತನ್ನ ಒಡ್ಯಾಣವನ್ನೂ ಮರೆತುಬಿಡುವಳೋ? ಆದಾಗ್ಯೂ ನನ್ನ ಜನರು ಲೆಕ್ಕವಿಲ್ಲದಷ್ಟು ದಿನಗಳು ನನ್ನನ್ನು ಮರೆತುಬಿಟ್ಟಿದ್ದಾರೆ.
ಆದದರಿಂದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಅವರು ತಪ್ಪಿಸಿಕೊಳ್ಳ ಲಾರದ ಕೇಡನ್ನು ಅವರ ಮೇಲೆ ತರುವೆನು; ಅವರು ನನ್ನನ್ನು ಕೂಗಿದರೂ ನಾನು ಅದನ್ನು ಕೇಳುವದಿಲ್ಲ,
ಕಾವಲಿನ ಅಧಿಪತಿಯಾದ ನೆಬೂಜರದಾನನು ಜನರಲ್ಲಿ ಬಡವ ರಾದ ಕೆಲವರನ್ನೂ ಪಟ್ಟಣದಲ್ಲಿ ಉಳಿದ ಜನರನ್ನೂ ಬಾಬೆಲಿನ ಅರಸನ ಕಡೆಗೆ ಬಿದ್ದವರನ್ನೂ ಸಮೂಹದಲ್ಲಿ ಮಿಕ್ಕಾದವರನ್ನೂ ಸೆರೆಯಾಗಿ ಒಯ್ದನು.
ಇದಲ್ಲದೆ ಬೋಗುಣಿಗಳನ್ನೂ ಅಗ್ನಿಪಾತ್ರೆಗಳನ್ನೂ ಬಟ್ಟಲುಗ ಳನ್ನೂ ಗುಡಾಣಗಳನ್ನೂ ದೀಪಸ್ತಂಭಗಳನ್ನೂ ಸೌಟುಗ ಳನ್ನೂ ಬಟ್ಟಲುಗಳನ್ನೂ ಬಂಗಾರದ್ದಾದರೆ, ಅದರ ಬಂಗಾರವನ್ನೂ ಬೆಳ್ಳಿಯದ್ದಾದರೆ, ಅದರ ಬೆಳ್ಳಿಯನ್ನೂ ಕಾವಲಿನ ಅಧಿಪತಿಯು ತಕ್ಕೊಂಡನು.
ಈಗ ನೀವು ಸಿದ್ಧ ವಾಗಿದ್ದು ಕೊಂಬು, ಕೊಳಲು, ತಂಬೂರಿ, ವೀಣೆ, ಕಿನ್ನರಿ, ನಾದಸ್ವರ ಎಲ್ಲಾ ವಿಧವಾದ ವಾದ್ಯಗಳ ಶಬ್ದವನ್ನು ಕೇಳುವ ಸಮಯದಲ್ಲಿ ನಾನು ಮಾಡಿಸಿದ ಪ್ರತಿಮೆ ಯನ್ನು ಆರಾಧಿಸಿದರೆ ಸರಿ; ಆದರೆ ನೀವು ಆರಾಧಿಸ ದಿದ್ದರೆ ಅದೇ ಗಳಿಗೆಯಲ್ಲಿ ಉರಿಯುವ ಬೆಂಕಿಯ ಆವಿಗೆಯ ಮಧ್ಯದಲ್ಲಿ ಹಾಕಲ್ಪಡುವಿರಿ. ನನ್ನ ಕೈಯಿಂದ ನಿಮ್ಮನ್ನು ಬಿಡಿಸುವ ಆ ದೇವರು ಯಾರು ಎಂದು ಹೇಳಿದನು.
ಆಗ ನೆಬೂಕದ್ನೆಚ್ಚರನು ಉಗ್ರದಿಂದ ತುಂಬಿದವನಾಗಿ ಅವನ ಮುಖದ ರೂಪವು ಶದ್ರಕ್ ಮೇಷಕ್‌ಅಬೇದ್ ನೇಗೋ ಎಂಬ ವರಿಗೆ ವಿರೋಧವಾಗಿ ಬೇರೆಯಾಯಿತು. ಆಗ ಅವನು ಮಾತನಾಡಿ ಆ ಆವಿಗೆಯನ್ನು ಸಾಧಾರಣವಾದ ಉರಿ ಗಿಂತ ಏಳರಷ್ಟು ಹೆಚ್ಚಾಗಿ ಉರಿಹಾಕಬೇಕೆಂದು ಆಜ್ಞಾಪಿ ಸಿದನು.
ಅವರು ನಿನ್ನನ್ನು ಮನುಷ್ಯರೊಳಗಿಂದ ತಳ್ಳಿಬಿಡುವರು. ನಿನ್ನ ನಿವಾಸವು ಕಾಡುಮೃಗಗಳ ಸಂಗಡ ಇರುವದು, ನಿನಗೆ ಎತ್ತುಗಳ ಹಾಗೆ ಹುಲ್ಲನ್ನು ಮೇಯಿಸುವರು. ಮಹೋ ನ್ನತನು ಮನುಷ್ಯರ ರಾಜ್ಯವನ್ನಾಳುವನೆಂದೂ ತನ್ನ ಮನಸ್ಸಿಗೆ ಸರಿಬಂದವರಿಗೆ ಅದನ್ನು ಕೊಡುವೆನೆಂದೂ ನೀನು ತಿಳಿಯುವಷ್ಟರಲ್ಲಿ ಏಳು ಕಾಲಗಳು ನಿನ್ನನ್ನು ದಾಟಿ ಹೋಗುವವು.
ಆಗ ಜ್ಞಾನಿಗಳು ತನ್ನನ್ನು ಪರಿಹಾಸ್ಯ ಮಾಡಿ ದರೆಂದು ಹೆರೋದನು ತಿಳಿದು ಅತಿ ರೋಷಗೊಂಡ ವನಾಗಿ ತಾನು ಅವರ ಮೂಲಕ ಪರಿಷ್ಕಾರವಾಗಿ ಶೋಧಿಸಿದ ಕಾಲಕ್ಕನುಸಾರ ಬೆತ್ಲೆಹೇಮಿನಲ್ಲಿಯೂ ಅದರ ಎಲ್ಲಾ ಪ್ರಾಂತ್ಯಗಳ ಮೇರೆಗಳಲ್ಲಿಯೂ ಎರಡು ವರುಷ ಮತ್ತು ಅದರೊಳಗಿದ್ದ ಎಲ್ಲಾ ಮಕ್ಕ
ಅವನು ದೇವರಿಗೆ ಮಹಿಮೆ ಸಲ್ಲಿಸದೆ ಹೋದದರಿಂದ ಕರ್ತನ ದೂತನು ಆ ಕ್ಷಣದಲ್ಲೇ ಅವನನ್ನು ಹೊಡೆದನು; ಆಗ ಅವನನ್ನು ಹುಳಗಳು ತಿಂದದ್ದರಿಂದ ಅವನು ಪ್ರಾಣ ಬಿಟ್ಟನು.
ಜ್ಞಾನಿಯು ಎಲ್ಲಿ? ಶಾಸ್ತ್ರಿಯು ಎಲ್ಲಿ? ಲೋಕದ ತರ್ಕವಾದಿ ಎಲ್ಲಿ? ದೇವರು ಈ ಲೋಕದ ಜ್ಞಾನವನ್ನು ಹುಚ್ಚುತನವನ್ನಾಗಿ ಮಾಡಿದ್ದಾನಲ್ಲವೇ?
ಓ ಮರಣವೇ, ನಿನ್ನ ಕೊಂಡಿಯೆಲ್ಲಿ? ಓ ಸಮಾಧಿಯೇ ನಿನ್ನ ಜಯವೆಲ್ಲಿ?