ಇಗೋ, ಕರ್ತನಾದ ದೇವರು ನನಗೆ ಸಹಾಯ ಮಾಡುವನು; ನನ್ನನ್ನು ಅಪರಾಧಿ ಎಂದು ನಿರ್ಣಯಿಸುವವನು ಯಾರು? ಇಗೋ, ಅವರೆಲ್ಲರೂ ಹಳೆಯ ಬಟ್ಟೆಯಂತಾಗುವರು; ಬಟ್ಟೆ ತಿನ್ನುವ ನುಸಿಯು ಅವರನ್ನು ತಿಂದುಬಿಡುವದು.
Cross references
ನನ್ನ ಸಂಗಡ ವಾದಿಸುವವನು ಯಾರು? ಈಗ ನಾನು ನನ್ನ ನಾಲಿಗೆಯನ್ನು ತಡೆದದ್ದೆಯಾದರೆ ನಾನು ಸಾಯುವೆನು.
ಅವನು ಕೊಳೆತ ವಸ್ತುವಿನ ಹಾಗೆ, ಹುಳು ತಿಂದ ಬಟ್ಟೆಯ ಹಾಗೆ ಇಲ್ಲದಾಗುವನು.
ಅಕ್ರಮ ಕ್ಕೋಸ್ಕರ ಗದರಿಕೆಗಳಿಂದ ನೀನು ಮನುಷ್ಯನನ್ನು ಶಿಕ್ಷಿಸಿದರೆ ಅವನ ಸೌಂದರ್ಯವನ್ನು ನುಸಿಯ ಹಾಗೆ ಹಾಳುಮಾಡುತ್ತೀ; ನಿಶ್ಚಯವಾಗಿ ಪ್ರತಿ ಮನುಷ್ಯನು ವ್ಯರ್ಥವಾದವನೇ--ಸೆಲಾ.
ನಾನು ನಿನಗೆ ಉಚಿತವಾಗಿ ಬಲಿಯನ್ನು ಅರ್ಪಿಸುವೆನು. ಓ ಕರ್ತನೇ, ನಿನ್ನ ಹೆಸರನ್ನು ಕೊಂಡಾ ಡುವೆನು, ಅದು ಒಳ್ಳೇದು.ಎಲ್ಲಾ ಇಕ್ಕಟ್ಟಿನಿಂದ ಆತನು ನನ್ನನ್ನು ಬಿಡಿಸಿದ್ದಾನೆ; ನನ್ನ ಶತ್ರುವಿನ ಗತಿ ಯನ್ನು ನೋಡಿ ನನ್ನ ಕಣ್ಣು ಸಂತೋಷಿಸುತ್ತದೆ.
ಅವು ನಾಶವಾಗುವವು; ಆದರೆ ನೀನು ಸ್ಥಿರ ವಾಗಿರುತ್ತೀ; ಹೌದು, ಅವುಗಳೆಲ್ಲಾ ವಸ್ತ್ರದ ಹಾಗೆ ಜೀರ್ಣವಾಗುವವು; ಉಡುಪಿನ ಹಾಗೆ ಅವುಗ ಳನ್ನು ಬದಲಾಯಿಸುವಿ; ಆಗ ಅವು ಬದಲಾಗುವವು.
ನೀನಂತೂ ಹೆದರಬೇಡ; ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು. ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿ ಸುತ್ತೇನೆ; ಹೌದು, ನಾನು ನಿನಗೆ ಸಹಾಯ ಮಾಡು ತ್ತೇನೆ. ಹೌದು, ನನ್ನ ನೀತಿಯ ಬಲಗೈಯಿಂದ ನಿನ್ನನ್ನು ಎತ್ತಿ ಹಿಡಿಯುತ್ತೇನೆ.
ಆಕಾಶಗಳ ಕಡೆಗೆ ನಿಮ್ಮ ಕಣ್ಣುಗಳನ್ನು ಎತ್ತಿರಿ ಮತ್ತು ಕೆಳಗಿರುವ ಭೂಮಿಯನ್ನು ನೋಡಿರಿ. ಯಾಕಂದರೆ ಆಕಾಶಗಳು ಹೊಗೆಯಂತೆ ಅಗೋಚರವಾಗುವವು, ಭೂಮಿಯು ಹಳೆಯ ಬಟ್ಟೆಯಂತಾಗುವದು. ಅದರಲ್ಲಿ ವಾಸಿಸುವ ವರು ಅದೇ ರೀತಿಯಲ್ಲಿ ಸಾಯುವರು. ಆದರೆ ನನ್ನ ರಕ್ಷಣೆಯು ಶಾಶ್ವತವಾಗಿರುವದು ಮತ್ತು ನನ್ನ ನೀತಿಯು ಎಂದಿಗೂ ರದ್ದಾಗದು.
ನುಸಿಯು ಬಟ್ಟೆಯನ್ನು ತಿನ್ನುವಂತೆ ಅವರನ್ನು ತಿಂದುಬಿಡುವದು ಮತ್ತು ಹುಳವು ಅವರನ್ನು ಉಣ್ಣೆ ಯಂತೆ ತಿನ್ನುವದು; ಆದರೆ ನನ್ನ ನೀತಿಯು ಶಾಶ್ವತವಾಗಿ ರುವದು ಮತ್ತು ನನ್ನ ರಕ್ಷಣೆಯು ತಲತಲಾಂತರ ಗಳಿಗೂ ಇರುವದು.
ಅವು ನಾಶವಾಗುವವು; ಆದರೆ ನೀನು ಇರುವಾತನಾಗಿದ್ದೀ; ಅವೆಲ್ಲವೂ ವಸ್ತ್ರದಂತೆ ಹಳೆಯವಾಗುವವು;