Home Bibles ಯೆಶಾಯ 45:6 · ಕನ್ನಡ ಬೈಬಲ್
ಯೆಶಾಯ 45:6 · ಕನ್ನಡ ಬೈಬಲ್

ಮೂಡಣದಿಂದ ಪಡುವಣದ ವರೆಗೆ ಇರುವವರೆಲ್ಲರೂ ತಿಳಿದುಕೊಳ್ಳುವಂತೆ ನನ್ನ ಹೊರತು ಯಾರೂ ಇಲ್ಲ, ನಾನೇ ಕರ್ತನು ಮತ್ತೊ ಬ್ಬನು ಇಲ್ಲ.

Cross references

1 ಸಮುವೇಲ 17:46

ಕರ್ತನು ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಡುವನು; ನಾನು ನಿನ್ನನ್ನು ಹೊಡೆದುಬಿಟ್ಟು ನಿನ್ನ ತಲೆಯನ್ನು ತೆಗೆದು ಫಿಲಿಷ್ಟಿಯರ ದಂಡಿನ ಹೆಣಗಳನ್ನು ಈ ದಿನ ಆಕಾಶದ ಪಕ್ಷಿಗಳಿಗೂ ಅಡವಿಯ ಮೃಗಗಳಿಗೂ ಆಹಾರವಾಗಿ ಕೊಡುವೆನು.

ಕೀರ್ತನೆಗಳು 46:10

ಶಾಂತ ವಾಗಿರ್ರಿ, ನಾನೇ ದೇವರಾಗಿದ್ದೇನೆಂದು ತಿಳುಕೊಳ್ಳಿರಿ; ಜನಾಂಗಗಳಲ್ಲಿ ಉನ್ನತನಾಗಿರುವೆನು; ಭೂಮಿಯಲ್ಲಿ ನಾನು ಹೆಚ್ಚಿಸಲ್ಪಡುವೆನು.ಸೈನ್ಯಗಳ ಕರ್ತನು ನಮ್ಮ ಸಂಗಡ ಇದ್ದಾನೆ; ಯಾಕೋಬನ ದೇವರು ನಮಗೆ ಆಶ್ರಯವಾಗಿದ್ದಾನೆ. ಸೆಲಾ.

ಕೀರ್ತನೆಗಳು 83:18

ನೀನು ಮಾತ್ರ ಯೆಹೋವ ನೆಂಬ ಹೆಸರುಳ್ಳ ನೀನು ಸಮಸ್ತ ಭೂಮಿಯ ಮೇಲೆ ಮಹೋನ್ನತನಾಗಿದ್ದೀ ಎಂದು ತಿಳುಕೊಳ್ಳಲಿ.

ಕೀರ್ತನೆಗಳು 102:15

ಜನಾಂಗವು ಕರ್ತನ ಹೆಸರಿಗೂ ಭೂರಾಜರೆಲ್ಲರು ನಿನ್ನ ಮಹಿಮೆಗೂ ಭಯಪಡುವರು.

ಯೆಶಾಯ 37:20

ಹೀಗಿರುವದರಿಂದ ಓ ಕರ್ತನಾದ ನಮ್ಮ ದೇವರೇ, ನೀನೇ, ನೀನೊಬ್ಬನೇ ಕರ್ತನೆಂದು ಭೂಮಿಯ ಎಲ್ಲಾ ರಾಜ್ಯಗಳು ತಿಳಿದುಕೊಳ್ಳುವಂತೆ ಅವನ ಕೈಯಿಂದ ನಮ್ಮನ್ನು ರಕ್ಷಿಸು ಎಂದು ಹಿಜ್ಕೀಯನು ಕರ್ತನಿಗೆ ಪ್ರಾರ್ಥಿಸಿದನು.

ಯೆಶಾಯ 45:5

ನಾನೇ ಕರ್ತನು, ಮತ್ತೊಬ್ಬನಿಲ್ಲ; ನನ್ನ ಹೊರತು ಯಾವ ದೇವರೂ ಇಲ್ಲ; ನೀನು ನನ್ನನ್ನು ಅರಿಯದನಾಗಿದ್ದರೂ ನಿನಗೆ ನಡುಕಟ್ಟುವೆನು.

ಯೆಶಾಯ 59:19

ಆಗ ಪಶ್ಚಿ ಮದ ಕಡೆಯವರು ಕರ್ತನ ಹೆಸರಿಗೂ ಸೂರ್ಯೋ ದಯದ ಕಡೆಯವರು ಆತನ ಘನಕ್ಕೂ ಭಯಪಡು ವರು. ವೈರಿಯು ಪ್ರಳಯದಂತೆ ಬರುವಾಗ ಕರ್ತನ ಆತ್ಮನು ಅವನಿಗೆ ವಿರೋಧವಾಗಿ ಧ್ವಜವನ್ನೆತ್ತುವನು.

ಯೆಹೆಜ್ಕೇಲ 38:23

ಹೀಗೆ ನನ್ನೊಂದಿಗೆ ನಾನೇ ಹೆಚ್ಚಿಸಿಕೊಂಡು ಮತ್ತು ನನಗೆ ನಾನೇ ಪರಿಶುದ್ಧಪಡಿಸಿಕೊಂಡು ಅನೇಕ ಜನಾಂಗಗಳ ಕಣ್ಣುಗಳ ಮುಂದೆ ನಾನು ತಿಳಿಯಪಡಿಸಿಕೊಳ್ಳುತ್ತೇನೆ. ಅವರು ನಾನೇ ಕರ್ತನೆಂದು ತಿಳಿದುಕೊಳ್ಳುವರು.

ಯೆಹೆಜ್ಕೇಲ 39:21

ನಾನು ನನ್ನ ಮಹಿಮೆಯನ್ನು ಅನ್ಯಜನಾಂಗಗಳಲ್ಲಿ ಸ್ಥಾಪಿಸುತ್ತೇನೆ; ಎಲ್ಲಾ ಅನ್ಯಜನಾಂಗಗಳು ನಾನು ನಡೆಸಿದ ನನ್ನ ನ್ಯಾಯತೀರ್ಪನ್ನು ಮತ್ತು ಅವರ ಮೇಲೆ ಇರಿಸಿದ ನನ್ನ ಕೈಯನ್ನು ನೋಡುವವು.

ಯೋವೇಲ 2:27

ನಾನು ಇಸ್ರಾಯೇಲಿನ ಮಧ್ಯದಲ್ಲಿ ಇದ್ದೇನೆಂದೂ ಮತ್ತೊಬ್ಬ ನಲ್ಲ, ನಾನೇ ನಿಮ್ಮ ದೇವರಾದ ಕರ್ತನಾಗಿದ್ದೇನೆಂದೂ ನೀವು ತಿಳುಕೊಳ್ಳುವಿರಿ; ನನ್ನ ಜನರು ಎಂದೆಂದಿಗೂ ನಾಚಿಕೆಪಡರು.

ಮಲಾಕಿ 1:11

ಸೂರ್ಯೋದಯವು ಮೊದಲುಗೊಂಡು ಅದರ ಅಸ್ತಮಾನದ ವರೆಗೂ ನನ್ನ ಹೆಸರು ಅನ್ಯಜನಾಂಗ ಗಳಲ್ಲಿ ಘನವಾಗಿರುವದು; ಸಕಲ ಸ್ಥಳಗಳಲ್ಲಿ ನನ್ನ ಹೆಸರಿಗೆ ಧೂಪವೂ ಶುದ್ಧಕಾಣಿಕೆಯೂ ಅರ್ಪಿಸ ಲ್ಪಡುವದು; ನನ್ನ ಹೆಸರು ಅನ್ಯಜನಾಂಗಗಳಲ್ಲಿ ಘನ ವಾಗಿ ರುವದೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.

Interlinear

Choose Theme