Home Bibles ಯೆಶಾಯ 43:14 · ಕನ್ನಡ ಬೈಬಲ್
ಯೆಶಾಯ 43:14 · ಕನ್ನಡ ಬೈಬಲ್

ನಿಮ್ಮ ವಿಮೋಚಕನೂ ಇಸ್ರಾಯೇಲಿನ ಪರಿ ಶುದ್ಧನೂ ಆಗಿರುವ ಕರ್ತನು ಇಂತೆನ್ನುತ್ತಾನೆ--ನಾನು ನಿಮಗೋಸ್ಕರ ಬಾಬೆಲಿಗೆ ಕಳುಹಿಸಿ ಅವರ ಘನ ವಂತರನ್ನೆಲ್ಲಾ ಮತ್ತು ಹಡಗುಗಳಲ್ಲಿ ಆರ್ಭಟಿಸುವ ಕಸ್ದೀಯರನ್ನು ತಗ್ಗಿಸಿದೆನು.

Cross references

ಕೀರ್ತನೆಗಳು 19:14

ನನ್ನ ಬಲವೂ ನನ್ನ ವಿಮೋಚ ಕನೂ ಆಗಿರುವ ಕರ್ತನೇ, ನನ್ನ ಬಾಯಿಯ ಮಾತು ಗಳೂ ನನ್ನ ಹೃದಯದ ಧ್ಯಾನವೂ ನಿನ್ನ ಮುಂದೆ ಮೆಚ್ಚಿಕೆಯಾಗಿರಲಿ.

ಯೆಶಾಯ 23:13

ಇಗೋ, ಕಸ್ದೀಯರ ದೇಶವು! ಅಶ್ಶೂರರು ಅದನ್ನು ಅರಣ್ಯ ನಿವಾಸಿಗಳಿಗೆ ಈಡು ಮಾಡುವತನಕ ಈ ಜನರು ಇರಲಿಲ್ಲ. (ನಿರ್ನಾ ಮವಾಗಿರಲಿಲ್ಲ) ಅವರು ಗೋಪುರಗಳನ್ನೂ ಅದರ ಅರಮನೆಗಳನ್ನೂ ಕಟ್ಟಿಸಿಕೊಂಡು ಅದನ್ನು ಹಾಳು ಮಾಡಿದ್ದಾರೆ.

ಯೆಶಾಯ 43:1

ಈಗಲಾದರೋ ಓ ಯಾಕೋಬೇ, ಇಸ್ರಾಯೇಲೇ ನಿನ್ನನ್ನು ಸೃಷ್ಟಿಸಿದಾತನೂ ರೂಪಿಸಿದಾತನೂ ಆದ ಕರ್ತನು ಇಂತೆನ್ನುತ್ತಾನೆ--ಹೆದರಬೇಡ, ನಾನು ನಿನ್ನನ್ನು ವಿಮೋಚಿಸಿದೆನಲ್ಲಾ ನಿನ್ನ ಹೆಸರು ಹಿಡಿದು ಕರೆದೆನಲ್ಲಾ; ನೀನು ನನ್ನವನೇ.

ಯೆಶಾಯ 43:3

ನಾನೇ ನಿನ್ನ ಕರ್ತನೂ ದೇವರೂ ಇಸ್ರಾಯೇಲಿನ ಪರಿಶುದ್ಧನೂ ರಕ್ಷಕನೂ ಆಗಿದ್ದೇನೆ. ಐಗುಪ್ತವನ್ನು ನಿನ್ನ ವಿಮೋಚನೆಗೂ ಇಥಿಯೋಪ್ಯ ಮತ್ತು ಸೆಬಾ ಸೀಮೆಗಳನ್ನು ನಿನಗೊಸ್ಕರ ಕೊಟ್ಟಿದ್ದೇನೆ.

ಯೆಶಾಯ 44:6

ಇಸ್ರಾಯೇಲಿನ ಅರಸನೂ ವಿಮೋಚಕನೂ ಸೈನ್ಯ ಗಳ ಕರ್ತನೂ ಇಂತೆನ್ನುತ್ತಾನೆ--ನಾನೇ ಮೊದಲನೆಯ ವನು, ನಾನೇ ಕಡೆಯವನು, ನನ್ನ ಹೊರತು ಬೇರೆ ಯಾವ ದೇವರೂ ಇಲ್ಲ.

ಯೆಶಾಯ 44:24

ನಿನ್ನನ್ನು ಗರ್ಭದಿಂದ ರೂಪಿಸಿದವನೂ ನಿನ್ನ ವಿಮೋಚಕನೂ ಆದ ಕರ್ತನು ಹೀಗನ್ನುತ್ತಾನೆ--ಎಲವನ್ನೂ ಉಂಟುಮಾಡಿದ ಕರ್ತನು ನಾನೇ. ನಾನೊ ಬ್ಬನೇ ಆಕಾಶವನ್ನು ವಿಸ್ತರಿಸಿ ಭೂಮಿಯನ್ನು ನಾನೇ ವಿಶಾಲವಾಗಿ ಹರಡಿದವನಾಗಿದ್ದೇನೆ.

ಯೆಶಾಯ 47:4

ನಮ್ಮ ವಿಮೋಚಕನಿಗಾದರೋ, ಸೈನ್ಯಗಳ ಕರ್ತನು ಎಂಬದೇ ಆತನ ಹೆಸರು, ಆತನೇ ಇಸ್ರಾಯೇಲಿನ ಪರಿಶುದ್ಧನು.

ಯೆಶಾಯ 48:17

ನಿನ್ನ ವಿಮೋಚ ಕನೂ ಇಸ್ರಾಯೇಲಿನ ಪರಿಶುದ್ಧನೂ ಆಗಿರುವ ಕರ್ತನು ಹೀಗೆನ್ನುತ್ತಾನೆ--ನಿನ್ನ ಉಪಯೋಗಕ್ಕಾಗಿ ನಿನಗೆ ಬೋಧಿಸುವವನೂ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡಿಸುವವನೂ ಆದ ನಾನೇ ನಿನ್ನ ಕರ್ತನೂ ನಿನ್ನ ದೇವರೂ ಆಗಿದ್ದೇನೆ.

ಯೆಶಾಯ 54:5

ನಿನ್ನನ್ನು ಉಂಟುಮಾಡಿದವನೇ ನಿನ್ನ ಪತಿ; ಸೈನ್ಯಗಳ ಕರ್ತನು ಎಂಬದು ಆತನ ಹೆಸರು; ನಿನ್ನ ವಿಮೋಚಕನು ಇಸ್ರಾ ಯೇಲಿನ ಪರಿಶುದ್ಧನೇ; ಸಮಸ್ತ ಭೂಮಿಯ ದೇವರು ಎಂದು ಆತನು ಕರೆಯಲ್ಪಡುವನು.

ಯೆರೆಮಿಯ 50:2

ಬಾಬೆಲಿಗೆ ತೂರುವವರನ್ನು ಕಳುಹಿಸುವೆನು; ಅವರು ಅದನ್ನು ತೂರಿ ಅದರ ದೇಶವನ್ನು ಬರಿದುಮಾಡುವರು; ದುರ್ದಿನದಲ್ಲಿ ಸುತ್ತಲಾಗಿ ಅದಕ್ಕೆ ವಿರೋಧವಾಗಿರುವರು.

ಯೆರೆಮಿಯ 50:17

ಮನುಷ್ಯ ರೆಲ್ಲರೂ ತಮ್ಮ ತಿಳುವಳಿಕೆಯಿಂದ ಮೂಢರಾಗಿದ್ದಾರೆ; ಎರಕ ಹೊಯ್ಯುವವರೆಲ್ಲರೂ ವಿಗ್ರಹದಿಂದ ನಾಚಿಕೆ ಪಡುತ್ತಾರೆ; ಅವರ ಎರಕದ ಬೊಂಬೆಗಳು ಸುಳ್ಳೇ; ಅವುಗಳಲ್ಲಿ ಉಸಿರು ಇಲ್ಲ.

ಯೆರೆಮಿಯ 50:27

ದೇಶದಲ್ಲಿ ಧ್ವಜವನ್ನೆತ್ತಿರಿ; ಜನಾಂಗಗಳಲ್ಲಿ ತುತೂರಿಯನ್ನೂದಿರಿ; ಅದಕ್ಕೆ ವಿರೋಧವಾಗಿ ಜನಾಂಗಗಳನ್ನು ಸಿದ್ಧಮಾಡಿರಿ; ಅರರಾಟ್‌, ಮಿನ್ನಿ, ಅಷ್ಕೆನಜ್‌ ರಾಜ್ಯಗಳನ್ನು ಅದಕ್ಕೆ ವಿರೋಧವಾಗಿ ಕರೆಯಿರಿ; ಅದಕ್ಕೆ ವಿರೋಧವಾಗಿ ಸೈನ್ಯಾಧಿಪತಿಯನ್ನು ನೇಮಿಸಿರಿ; ಬಿರುಸಾದ ಮಿಡತೆ ದಂಡಿನಂತೆ ಕುದುರೆ ಗಳನ್ನು ಬರಮಾಡಿರಿ.

ಯೆರೆಮಿಯ 51:1

ಚಿದ್ಕೀಯನು ಆಳುವದಕ್ಕೆ ಆರಂಭಿಸಿದಾಗ ಇಪ್ಪತ್ತೊಂದು ವರುಷದವನಾಗಿದ್ದನು; ಅವನು ಹನ್ನೊಂದು ವರುಷ ಯೆರೂಸಲೇಮಿನಲ್ಲಿ ಆಳಿದನು; ಅವನ ತಾಯಿಯ ಹೆಸರು ಲಿಬ್ನದವನಾದ ಯೆರೆವಿಾಯನ ಮಗಳಾದ ಹಮೂಟಲ್‌.

ಯೆರೆಮಿಯ 51:2

ಅವನು ಯೆಹೋಯಾಕೀಮನು ಮಾಡಿದ್ದೆಲ್ಲಾದರ ಪ್ರಕಾರ ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು.

ಯೆರೆಮಿಯ 51:24

ಕಾವಲಿನ ಅಧಿಪತಿಯು ಪ್ರಧಾನ ಯಾಜಕನಾದ ಸೆರಾಯನನ್ನೂ ಎರಡನೇ ಯಾಜಕನಾದ ಚೆಫನ್ಯನನ್ನೂ ಮೂವರು ದ್ವಾರಪಾಲಕರನ್ನೂ ತಕ್ಕೊಂಡನು.

ಯೆರೆಮಿಯ 51:34

ಅವನ ಆಹಾರದ ವಿಷಯ ವೇನಂದರೆ--ಅವನು ಬದುಕಿದ ದಿನಗಳೆಲ್ಲಾ ಅವನು ಸಾಯುವ ದಿನದವರೆಗೆ ದಿನದಿನಕ್ಕೆ ತಕ್ಕ ಆಹಾರವು ಯಾವಾಗಲೂ ಬಾಬೆಲಿನ ಅರಸನ ಕಡೆಯಿಂದ ಕೊಡಲ್ಪಡುತ್ತಿತ್ತು.

ಯೆಹೆಜ್ಕೇಲ 27:29

ಹುಟ್ಟು ಹಾಕುವವರೆಲ್ಲರೂ ಅಂಬಿಗರೂ ಸಮುದ್ರದ ಸಕಲ ನಾವಿಕರೂ ತಮ್ಮ ತಮ್ಮ ಹಡಗುಗಳಿಂದಿಳಿದು ನೆಲದ ಮೇಲೆ ನಿಂತುಕೊಂಡು,

ಪ್ರಕಟನೆ 5:9

ಅವರು ಹೊಸ ಹಾಡನ್ನು ಹಾಡುತ್ತಾ--ನೀನು ಪುಸ್ತಕವನ್ನು ತೆಗೆದುಕೊಳ್ಳುವದಕ್ಕೂ ಅದರ ಮುದ್ರೆಗಳನ್ನು ಬಿಚ್ಚುವದಕ್ಕೂ ಯೋಗ್ಯ ನಾಗಿದ್ದೀ; ಯಾಕಂದರೆ ನೀನು ವಧಿತನಾಗಿ ನಿನ್ನ ರಕ್ತದಿಂದ ಸಕಲ ಕುಲ ಭಾಷೆ ಪ್ರಜೆ ಜನಾಂಗಗಳ ವರಿಂದ ನಮ್ಮನ್ನು ದೇವರಿಗಾಗಿ ವಿಮೋಚಿಸಿದ್ದೀ;

ಪ್ರಕಟನೆ 18:11

ಇದಲ್ಲದೆ ಭೂಲೋಕದ ವರ್ತಕರು ಅವಳ ನಿಮಿತ್ತವಾಗಿ ಅತ್ತು ಗೋಳಾಡುವರು. ಯಾಕಂದರೆ ಅವರ ಸರಕುಗಳನ್ನು ಅಂದರೆ

Interlinear

Choose Theme