ನೀನು ಅನೇಕ ಸಂಗತಿಗಳನ್ನು ಕಂಡಿದ್ದರೂ ನಿನಗೆ ಗಮನವಿಲ್ಲ; ಅವನ ಕಿವಿಗಳು ತೆರೆದಿದ್ದರೂ ಕೇಳನು.
Cross references
ಐಗುಪ್ತ ದೇಶದಲ್ಲಿಯೂ ಅರಣ್ಯದಲ್ಲಿಯೂ ನಾನು ನಡಿಸಿದ ಸೂಚಕಕಾರ್ಯಗಳನ್ನೂ ನನ್ನ ಮಹಿಮೆಯನ್ನೂ ನೋಡಿದ ಈ ಸಕಲ ಮನುಷ್ಯರು ನನ್ನನ್ನು ಈಗ ಹತ್ತು ಸಾರಿ ಶೊಧಿಸಿ ಕೇಳದೆ ಹೋದದ್ದರಿಂದ
ನಿನ್ನ ಕಣ್ಣುಗಳು ನೋಡಿದ ಕಾರ್ಯಗಳನ್ನು ನೀನು ಮರೆಯದ ಹಾಗೆಯೂ ನೀನು ಬದುಕುವ ದಿನಗಳೆಲ್ಲಾ ಅವು ನಿನ್ನ ಹೃದಯಕ್ಕೆ ದೂರವಾಗದ ಹಾಗೆಯೂ ಬಹು ಜಾಗ್ರತೆಯಾಗಿದ್ದು ನಿನ್ನ ಪ್ರಾಣ ವನ್ನು ಬಹಳವಾಗಿ ಕಾಪಾಡು; ಅವುಗಳನ್ನು ನಿನ್ನ ಮಕ್ಕಳಿಗೂ ನಿನ್ನ ಮಕ್ಕಳ ಮಕ್ಕಳಿಗೂ ಬೋಧಿಸು.
ಮೋಶೆಯು ಇಸ್ರಾಯೇಲ್ಯರನ್ನೆಲ್ಲಾ ಕರೆದು ಅವ ರಿಗೆ--ಕರ್ತನು ಐಗುಪ್ತದೇಶದಲ್ಲಿ ನಿಮ್ಮ ಕಣ್ಣುಗಳ ಮುಂದೆ ಫರೋಹನಿಗೂ ಅವನ ಎಲ್ಲಾ ಸೇವಕ ರಿಗೂ ಅವನ ಎಲ್ಲಾ ದೇಶಕ್ಕೂ ಮಾಡಿದವುಗಳನ್ನೆಲ್ಲಾ ನೋಡಿದ್ದೀರಿ.
ಫರೋಹನ ಮೇಲೆಯೂ ಅವನ ಸಮಸ್ತ ಸೇವಕರ ಮೇಲೆಯೂ ಅವನ ಸಮಸ್ತ ದೇಶದ ಜನರ ಮೇಲೆಯೂ ಸೂಚ ಕಕಾರ್ಯಗಳನ್ನೂ ಅದ್ಭುತಗಳನ್ನೂ ತೋರಿಸಿದಿ. ಯಾಕಂದರೆ ಇವರು ಅವರಿಗೆ ಅಹಂಕಾರಿಗಳಾಗಿ ನಡೆದರೆಂದು ತಿಳಿದಿದ್ದಿ. ಈ ಪ್ರಕಾರವೇ ನೀನು ಇಂದಿನ ಹಾಗೆ ನಿನಗೆ ಹೆಸರನ್ನು ಮಾಡಿಕೊಂಡಿದ್ದೀ.
ನಮ್ಮ ತಂದೆಗಳು ಐಗುಪ್ತದಲ್ಲಿ ನಿನ್ನ ಅದ್ಭುತಗಳನ್ನು ತಿಳಿಯದೆ ನಿನ್ನ ಕರುಣಾತಿಶಯವನ್ನು ನೆನಸದೆ, ಸಮುದ್ರದ ಬಳಿಯಲ್ಲಿ, ಅಂದರೆ ಕೆಂಪು ಸಮುದ್ರದ ಹತ್ತಿರ ನಿನಗೆ ತಿರುಗಿ ಬಿದ್ದರು.
ಜ್ಞಾನಿಯು ಯಾವನೋ, ಅವನು ಇವುಗಳನ್ನು ಗಮನಿಸುವನು; ಅವರು ಕರ್ತನ ಪ್ರೀತಿ ಕರುಣೆಯನ್ನು ಗ್ರಹಿಸಿಕೊಳ್ಳುವರು.
ಎತ್ತು ತನ್ನ ಯಜಮಾನನನ್ನು ಮತ್ತು ಕತ್ತೆಯು ತನ್ನ ಒಡೆ ಯನ ಕೊಟ್ಟಿಗೆಯನ್ನು ತಿಳಿದಿರುವವು; ಆದರೆ ಇಸ್ರಾ ಯೇಲಿಗೆ ತಿಳಿದಿಲ್ಲ; ನನ್ನ ಜನರು ಆಲೋಚಿಸುವ ದಿಲ್ಲ.
ಅದಕ್ಕೆ ಆತನು -- ನೀನು ಈ ಜನರ ಬಳಿಗೆ ಹೋಗಿ -- ನೀವು ಕಿವಿಯಾರೆ ಕೇಳಿದರೂ ತಿಳಿಯಬಾರದೆಂದೂ ಕಣ್ಣಾರೆ ಕಂಡರೂ ಅದನ್ನು ಗ್ರಹಿಸಬಾರದೆಂದೂ ತಿಳಿಸು.
ನೀನು ಕೇಳಿದ್ದೀ; ಇವೆಲ್ಲ ವುಗಳನ್ನು ದೃಷ್ಟಿಸು; ನೀವು ಅದನ್ನು ತಿಳಿಸದೇ ಇದ್ದಿರೋ? ಇಂದಿನಿಂದ ಹೊಸ ಸಂಗತಿಗಳನ್ನು ನೀನು ತಿಳಿಯದಿದ್ದ ಗುಪ್ತವಾದ ವಿಷಯಗಳನ್ನು ನಿನಗೆ ಅರು ಹುತ್ತೇನೆ.
ಹೌದು, ನೀನು ಕೇಳಿಲ್ಲ, ತಿಳಿದೂ ಇಲ್ಲ; ಪುರಾತನ ಕಾಲದಿಂದ ನಿನ್ನ ಕಿವಿಯು ತೆರೆದೇ ಇಲ್ಲ; ಯಾಕಂದರೆ ನೀನು ದೊಡ್ಡ ವಂಚಕನು ಎಂದೂ ಗರ್ಭದಿಂದಲೇ ನೀನು ದ್ರೋಹಿಯೆಂದೂ ನಾನು ತಿಳಿದುಕೊಂಡಿದ್ದೇನೆ.
ಆದಾಗ್ಯೂ ಅವರು ನನ್ನನ್ನು ಪ್ರತಿನಿತ್ಯವೂ ಹುಡುಕು ತ್ತಾರೆ. ನನ್ನ ಮಾರ್ಗಗಳನ್ನು ತಿಳಿದುಕೊಳ್ಳುವದರಲ್ಲಿ ಸಂತೋಷಪಡುತ್ತಾರೆ. ತನ್ನ ದೇವರ ನ್ಯಾಯವನ್ನು ಬಿಡದೆ ನೀತಿಯನ್ನಾಚರಿಸುವ ಜನಾಂಗದ ಹಾಗೆಯೇ ನೀತಿಯುಳ್ಳ ನ್ಯಾಯಗಳನ್ನು ನನ್ನಿಂದ ಕೇಳುತ್ತಾರೆ. ದೇವರನ್ನು ಸವಿಾಪಿಸುವದರಲ್ಲಿ ಸಂತೋಷಿಸುತ್ತಾರೆ.
ಆಮೇಲೆ ಬಂದು ನನ್ನ ಹೆಸರಿನಲ್ಲಿ ಕರೆಯಲ್ಪಟ್ಟ ಈ ಆಲಯದಲ್ಲಿ ನನ್ನ ಮುಂದೆ ನಿಂತು ಕೊಂಡು--ನಾವು ಈ ಅಸಹ್ಯವಾದವುಗಳನ್ನೆಲ್ಲಾ ಮಾಡುವ ಹಾಗೆ ಒಪ್ಪಿಸಲ್ಪಟ್ಟಿದ್ದೇವೆಂದು ಹೇಳು ವಿರೋ?
ಹೋಷಾಯನ ಮಗನಾದ ಅಜರ್ಯನೂ ಕಾರೇಹನ ಮಗನಾದ ಯೋಹಾನಾನನೂ ಗರ್ವಿಷ್ಠ ಮನುಷ್ಯ ರೆಲ್ಲರೂ ಮಾತನಾಡಿ ಯೆರೆವಿಾಯನಿಗೆ ಹೇಳಿದ್ದೇ ನಂದರೆ-ನೀನು ಸುಳ್ಳು ಹೇಳುತ್ತೀ, ಅಲ್ಲಿ ಪ್ರವಾಸಿಯಾ ಗಿರುವದಕ್ಕೆ ಐಗುಪ್ತಕ್ಕೆ ಹೋಗಬಾರದೆಂದು ಹೇಳುವದಕ್ಕೆ ನಮ್ಮ ದೇವರಾದ ಕರ್ತನು ನಿನ್ನನ್ನು ಕಳುಹಿಸಲಿಲ್ಲ.
ಬೇರೆ ಜನರು ಬರುವ ಹಾಗೆ ಅವರು ನಿನ್ನ ಬಳಿಗೆ ಬಂದು ಜನರು ಕುಳಿತುಕೊಳ್ಳುವ ಹಾಗೆ ನಿನ್ನ ಮುಂದೆ ಕುಳಿತುಕೊಳ್ಳುವರು; ಅವರು ನಿನ್ನ ವಾಕ್ಯಗಳನ್ನು ಕೇಳುವರು, ಆದರೆ ಅವರು ಅವುಗಳನ್ನು ಮಾಡುವದಿಲ್ಲ. ಅವರು ತಮ್ಮ ಬಾಯಿಂದ ಹೆಚ್ಚಾದ ಪ್ರೀತಿಯನ್ನು ತೋರಿಸುವರು; ಆದರೆ ಅವರ ಹೃದಯವು ಲೋಭತ್ವದ ಕಡೆಗೆ ಹೋಗುವದು.
ಇಗೋ, ನೀನು ಅವರಿಗೆ ಇಂಪಾದ ಶಬ್ದವುಳ್ಳಂತ, ತಂತಿವಾದ್ಯಗಳನ್ನು ಚೆನ್ನಾಗಿ ಬಾರಿಸುವಂತ ಒಬ್ಬನ ಮನೋಹರವಾದ ರಾಗದ ಹಾಗಿರುವಿ; ಅವರು ನಿನ್ನ ಮಾತುಗಳನ್ನು ಕೇಳುತ್ತಾರೆ, ಆದರೆ ಅವುಗಳನ್ನು ಮಾಡುವದಿಲ್ಲ.ಯಾವಾಗ ಇದು ಬರುತ್ತದೋ ಆಗ ಅವರಿಗೆ ಪ್ರವಾದಿಯು ತಮ್ಮ ಸಂಗಡ ಇದ್ದಾನೆಂದು ತಿಳಿಯುವದು.
ಆದಕಾರಣ ಹೆರೋದ್ಯಳು ಅವನಿಗೆ ವಿರೋ ಧವಾಗಿ ಹಗೆ ಇಟ್ಟುಕೊಂಡು ಅವನನ್ನು ಕೊಲ್ಲಿಸಬೇ ಕೆಂದಿದ್ದಳು; ಆದರೆ ಅವಳಿಗೆ ಆಗಲಿಲ್ಲ.
ಯೇಸು ಅವನಿಗೆ--ನೀನು ಆತನನ್ನು ನೋಡಿದ್ದೀ; ನಿನ್ನ ಸಂಗಡ ಮಾತನಾಡುತ್ತಿರುವ ನಾನೇ ಆತನು ಎಂದು ಹೇಳಿದನು.
ಅವರಲ್ಲಿ ಕೆಲ ವರು--ಆ ಕುರುಡನ ಕಣ್ಣುಗಳನ್ನು ತೆರೆದ ಈ ಮನುಷ್ಯನು ಇವನನ್ನೂ ಸಾಯದಹಾಗೆ ಮಾಡಲಾರದೆ ಇದ್ದನೇ ಅಂದರು.
ಆದರೆ ನಿನ್ನ ಅಭಿಪ್ರಾಯ ವೇನೆಂದು ನಿನ್ನಿಂದಲೇ ಕೇಳುವದಕ್ಕೆ ನಾವು ಅಪೇಕ್ಷಿಸು ತ್ತೇವೆ; ಎಲ್ಲಾ ಕಡೆಯಲ್ಲಿಯೂ ಈ ಪಂಗಡದ ವಿಷಯ ದಲ್ಲಿ ಜನರು ವಿರುದ್ಧವಾಗಿ ಮಾತನಾಡುತ್ತಾರೆಂಬದು ನಮಗೆ ಗೊತ್ತದೆ ಎಂದು ಹೇಳಿದರು.
ಆದದರಿಂದ ಬೇರೊಬ್ಬನಿಗೆ ಬೋಧಿಸುವ ನೀನು ನಿನಗೆ ನೀನೇ ಬೋಧಿಸಿಕೊಳ್ಳುವದಿಲ್ಲವೋ? ಕದಿಯ ಬೇಡವೆಂದು ಬೇರೊಬ್ಬನಿಗೆ ಸಾರುವ ನೀನು ಕದಿಯು ತ್ತೀಯೋ?