Home Bibles ☰ Books ಯೆಶಾಯ 41:12 · ಕನ್ನಡ ಬೈಬಲ್
ಯೆಶಾಯ 41:12 · ಕನ್ನಡ ಬೈಬಲ್

ನಿನ್ನೊಡನೆ ಹೋರಾಡಿದವರನ್ನು ಹುಡುಕಿದರೂ ಅವರು ನಿನಗೆ ಕಾಣಿಸರು; ನಿನ್ನ ಸಂಗಡ ಯುದ್ಧಮಾಡಿದವರು ಇಲ್ಲದೆ ಹೋಗಿ ನಿರ್ನಾಮವಾಗುವರು.

Cross references

ಯೋಬ 20:7

ತನ್ನ ಅಮೇಧ್ಯದ ಹಾಗೆ ನಿತ್ಯವಾಗಿ ನಾಶವಾಗುವನು; ಅವನನ್ನು ನೋಡಿದ ವರು-- ಅವನು ಎಲ್ಲಿ ಅನ್ನುವರು.

ಕೀರ್ತನೆಗಳು 37:35

ದುಷ್ಟನು ದೊಡ್ಡ ಅಧಿಕಾರದಲ್ಲಿರು ವದನ್ನು ನಾನು ನೋಡಿದೆನು; ಅವನು ಹಸುರಾಗಿ ವಿಸ್ತರಿಸಿಕೊಂಡ ಮರದ ಹಾಗೆ ಇದ್ದನು.

ಯೆಶಾಯ 17:14

ಇಗೋ, ಸಾಯಂಕಾಲದಲ್ಲಿ ಭಯಭ್ರಾಂತಿ; ಉದ ಯಕ್ಕೆ ಮುಂಚೆ ಅವನು ಇಲ್ಲದಂತಾಗುವನು. ನಮ್ಮನ್ನು ಸೂರೆಮಾಡುವವರಿಗೆ ಇದೇ ಗತಿ. ನಮ್ಮನ್ನು ಕೊಳ್ಳೆ ಹೊಡೆಯುವವರ ಪಾಡು ಇದೇ.

ಯೆಶಾಯ 29:8

ಹಸಿದ ಮನುಷ್ಯನು ಕನಸುಕಂಡು ಇಗೋ, ಉಣ್ಣುತ್ತಾನೆ ಆದರೆ ಅವನು ಎಚ್ಚತ್ತಾಗ ಪ್ರಾಣ ತುಂಬದ ಹಾಗೆಯೂ ಇಲ್ಲವೆ ಬಾಯಾರಿದ ವನು ಸ್ವಪ್ನದಲ್ಲಿ ಇಗೋ, ಕುಡಿಯುತ್ತಾನೆ ಆದರೆ ಅವನು ಎಚ್ಚರವಾದಾಗ ಇಗೋ, ಬಲಹೀನನಾಗಿದ್ದು ಪ್ರಾಣ ಆಶಿಸುವ ಹಾಗೆಯೂ ಚೀಯೋನ್‌ ಪರ್ವ ತಕ್ಕೆ ವಿರೋಧವಾಗಿ ಯುದ್ಧಮಾಡುವ ಹಾಗೆಯೇ ಎಲ್ಲಾ ಜನಾಂಗಗಳ ಸಮೂಹವಿರುವದು.

ಯೆಶಾಯ 49:25

ಆದರೆ ಕರ್ತನು ಹೀಗ ನ್ನುತ್ತಾನೆ--ಶೂರನ ಸೆರೆಯವರು ತೆಗೆಯಲ್ಪಡುವರು; ಭಯಂಕರವಾದ ಕೊಳ್ಳೆಯು ಬಿಡಿಸಲ್ಪಡುವದು; ನಿನ್ನೊ ಡನೆ ಹೋರಾಡುವವನ ಸಂಗಡ ನಾನೇ ಹೋರಾಡಿ ನಿನ್ನ ಮಕ್ಕಳನ್ನು ನಾನು ರಕ್ಷಿಸುವೆನು.ನಿನ್ನ ಹಿಂಸಕರಿಗೆ ಅವರ ಮಾಂಸವನ್ನೇ ಅವರಿಗೆ ತಿನ್ನಿಸುವೆನು ಮತ್ತು ಸಿಹಿಯಾದ ದ್ರಾಕ್ಷಾರಸವನ್ನು ಕುಡಿಯುವಂತೆ ಅವರು ತಮ್ಮ ಸ್ವಂತ ರಕ್ತವನ್ನೇ ಕುಡಿಯುವರು. ಆಗ ಕರ್ತನಾದ ನಾನೇ ನಿನ್ನ ರಕ್ಷಕನೂ ನಿನ್ನ ವಿಮೋಚಕನೂ ಯಾಕೋಬ್ಯರ ಶೂರನೂ ಎಂದು ನರಜನ್ಮದವರೆ ಲ್ಲರಿಗೂ ಗೊತ್ತಾಗುವದು.

ಸೆಫನ್ಯ 3:19

ಇಗೋ, ಆ ಕಾಲದಲ್ಲಿ ನಿನ್ನನ್ನು ಶ್ರಮೆ ಪಡಿಸುವವರನ್ನೆಲ್ಲಾ ತೀರಿಸಿಬಿಟ್ಟು, ಕುಂಟಾದ ದ್ದನ್ನು ರಕ್ಷಿಸಿ, ಹೊರಡಿಸಲ್ಪಟ್ಟವರನ್ನು ಕೂಡಿಸಿ, ಅವರಿಗೆ ನಾಚಿಕೆಯಾದ ದೇಶಗಳಲ್ಲೆಲ್ಲಾ ಹೊಗಳಿಕೆಯನ್ನೂ ಕೀರ್ತಿಯನ್ನೂ ಉಂಟುಮಾಡುವೆನು.ಆ ಕಾಲದಲ್ಲಿ ಅಂದರೆ ನಾನು ನಿಮ್ಮನ್ನು ಕೂಡಿಸುವ ಕಾಲದಲ್ಲಿ ನಿಮ್ಮನ್ನು ಕರಕೊಂಡು ಬರುವೆನು; ನಾನು ನಿಮ್ಮ ಸೆರೆಯನ್ನು ನಿಮ್ಮ ಕಣ್ಣುಗಳ ಮುಂದೆ ತಿರುಗಿಸುವಾಗ ಭೂಮಿಯ ಎಲ್ಲಾ ಜನರಲ್ಲಿ ನಿಮಗೆ ಕೀರ್ತಿಯನ್ನೂ ಹೊಗಳಿಕೆ ಯನ್ನೂ ಉಂಟುಮಾಡುವೆನು ಎಂದು ಕರ್ತನು ಹೇಳುತ್ತಾನೆ.

Interlinear

Choose Theme