Home Bibles ಯೆಶಾಯ 4:1 · ಕನ್ನಡ ಬೈಬಲ್
ಯೆಶಾಯ 4:1 · ಕನ್ನಡ ಬೈಬಲ್

ಆ ದಿವಸದಲ್ಲಿ ಏಳು ಮಂದಿ ಹೆಂಗಸರು ಒಬ್ಬ ಮನುಷ್ಯನನ್ನು ಹಿಡಿದು--ನಾವು ಸ್ವಂತವಾಗಿ ದುಡಿದು ಉಣ್ಣುವೆವು; ನಾವೇ ಸಂಪಾದಿಸಿ ವಸ್ತ್ರಗಳನ್ನು ಉಟ್ಟುಕೊಳ್ಳುವೆವು; ನಮ್ಮ ನಿಂದೆಯನ್ನು ನೀಗಿಸುವದಕ್ಕೆ ನಿನ್ನ ಹೆಸರು ನಮಗಿದ್ದರೆ ಸಾಕು ಎಂದು ಕೇಳಿಕೊಳ್ಳುವರು ಎಂಬದೇ.

Cross references

ಆದಿಕಾಂಡ 30:23

ಆಕೆಯು ಗರ್ಭಿಣಿಯಾಗಿ ಮಗನನ್ನು ಹೆತ್ತು--ದೇವರು ನನ್ನ ನಿಂದೆಯನ್ನು ತೆಗೆದುಬಿಟ್ಟಿದ್ದಾನೆ ಅಂದಳು.

1 ಸಮುವೇಲ 1:6

ಕರ್ತನು ಅವಳ ಗರ್ಭವನ್ನು ಮುಚ್ಚಿದ್ದರಿಂದ ಅವಳ ವಿರೋಧಿಯಾದವಳು ಅವಳಿಗೆ ಮನಗುಂದುವ ಹಾಗೆ ಬಹಳವಾಗಿ ಕೆಣಕಿ ಬಾಧಿಸಿದಳು.

2 ಸಮುವೇಲ 6:23

ಆದದರಿಂದ ಸೌಲನ ಮಗಳಾದ ವಿಾಕಲಳು ತನ್ನ ಮರಣದ ದಿವಸದ ವರೆಗೂ ಮಕ್ಕಳಿಲ್ಲದವಳಾಗಿದ್ದಳು.

ಯೆಶಾಯ 2:11

ಮನು ಷ್ಯನ ಅಹಂಭಾವದ ದೃಷ್ಟಿಯು ಕುಗ್ಗುವದು, ಮನು ಷ್ಯರ ಗರ್ವವು ತಗ್ಗುವದು, ಆಗ ಕರ್ತನೊಬ್ಬನೇ ಆ ದಿನದಲ್ಲಿ ಉನ್ನತನಾಗಿರುವನು.

ಯೆಶಾಯ 2:17

ಮನುಷ್ಯನ ಅಹಂಭಾವವು ಕುಗ್ಗುವದು, ಮನುಷ್ಯರ ಗರ್ವವು ತಗ್ಗಿಸಲ್ಪಡುವದು; ಆ ದಿನದಲ್ಲಿ ಕರ್ತನೊಬ್ಬನೇ ಉನ್ನತ ನಾಗಿರುವನು.

ಯೆಶಾಯ 3:25

ನಿನ್ನ ಗಂಡಸರು ಕತ್ತಿಯಿಂದಲೂ ನಿನ್ನ ಶೂರರು ಯುದ್ಧದಲ್ಲಿಯೂ ಬೀಳುವರು.ಅವರ ಬಾಗಲುಗಳಲ್ಲಿ ಪ್ರಲಾಪವು ದುಃಖವು ತುಂಬಿರು ವದು; ಅವಳು ಹಾಳಾಗಿ ನೆಲದ ಮೇಲೆ ಕುಳಿತು ಕೊಳ್ಳುವಳು.

ಯೆಶಾಯ 10:20

ಆ ದಿನದಲ್ಲಿ ಇಸ್ರಾಯೇಲ್ಯರಲ್ಲಿ ಉಳಿದವರೂ ಯಾಕೋಬಿನ ಮನೆತನದಿಂದ ತಪ್ಪಿಸಿಕೊಂಡವರೂ ಇನ್ನು ಮೇಲೆ ತಮ್ಮನ್ನು ಹೊಡೆದವನ ಆಧಾರವನ್ನು ಬಿಟ್ಟು ಇಸ್ರಾಯೇಲಿನ ಪರಿಶುದ್ಧನಾದ ಕರ್ತನ ಸತ್ಯವನ್ನು ಆಧಾರ ಮಾಡಿಕೊಳ್ಳುವರು.

ಯೆಶಾಯ 13:12

ನಾನು ಮನುಷ್ಯನನ್ನು ಚೊಕ್ಕ ಬಂಗಾರಕ್ಕಿಂತಲೂ ಇಲ್ಲವೆ ಒಫೀರಿನ ಬಂಗಾರಕ್ಕಿಂತಲೂ ಅಮೂಲ್ಯನನ್ನಾಗಿ ಮಾಡುವೆನು.

ಯೆಶಾಯ 17:7

ಆ ದಿನದಲ್ಲಿ ಮನುಷ್ಯನು ತನ್ನನ್ನು ಉಂಟು ಮಾಡಿದವನ ಮೇಲೆ ದೃಷ್ಟಿಯಿಡು ವನು ಇಸ್ರಾಯೇಲಿನ ಪರಿಶುದ್ಧನ ಕಡೆಗೆ ಅವನ ಕಣ್ಣುಗಳು ಲಕ್ಷಿಸುವವು.

ಯೆಶಾಯ 54:4

ಹೆದರಬೇಡ, ನಿನಗೆ ನಾಚಿಕೆಯಾಗುವದಿಲ್ಲ. ಇಲ್ಲವೆ ಗಾಬರಿ ಪಡಬೇಡ, ನಿನ್ನ ಯೌವನದ ಲಜ್ಜೆಯನ್ನು ಮರೆತು ಬಿಡುವಿ ನಿನ್ನ ವೈಧವ್ಯದಲ್ಲಿ ನಿನಗಾದ ನಿಂದೆಯನ್ನು ಎಂದಿಗೂ ನಿನ್ನ ಜ್ಞಾಪಕಕ್ಕೆ ತರುವದಿಲ್ಲ.

ಲೂಕ 1:25

ಜನರಲ್ಲಿ ನನಗಿದ್ದ ಅವ ಮಾನವನ್ನು ತೆಗೆದುಹಾಕುವದಕ್ಕಾಗಿ ಕರ್ತನು ನನ್ನ ಮೇಲೆ ದೃಷ್ಟಿಯಿಟ್ಟ ದಿನಗಳಲ್ಲಿ ನನಗೆ ಹೀಗೆ ಮಾಡಿದನು ಎಂದು ಹೇಳಿದಳು.

ಲೂಕ 21:22

ಬರೆದಿರುವವುಗಳೆಲ್ಲವೂ ನೆರವೇರುವಂತೆ ಇವು ಮುಯ್ಯಿತೀರಿಸುವ ದಿವಸಗಳಾಗಿವೆ.

2 ತೆಸಲೋನಿಕದವರಿಗೆ 3:12

ಅಂಥವರು ಮೌನವಾಗಿ ತಮ್ಮ ಕೆಲಸವನ್ನು ಮಾಡುತ್ತಾ ತಮ್ಮ ಸ್ವಂತ ಆಹಾರವನ್ನೇ ಊಟಮಾಡ ಬೇಕೆಂದು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಾವು ಆಜ್ಞಾಪಿಸಿ ಪ್ರಬೋಧಿಸುತ್ತೇವೆ.

Interlinear

Choose Theme