Home Bibles ☰ Books ಯೆಶಾಯ 37:32 · ಕನ್ನಡ ಬೈಬಲ್
ಯೆಶಾಯ 37:32 · ಕನ್ನಡ ಬೈಬಲ್

ಯೆರೂಸಲೇಮಿನಿಂದ ಉಳಿದ ವರು ಮತ್ತು ಚೀಯೋನ್‌ ಪರ್ವತದಿಂದ ತಪ್ಪಿಸಿ ಕೊಂಡವರು; ಹೊರಡುವರು ಇದನ್ನು ಸೈನ್ಯಗಳ ಕರ್ತನ ಆಸಕ್ತಿಯು ಮಾಡುವದು.

Cross references

2 ಅರಸುಗಳು 19:31

ಯೆರೂ ಸಲೇಮಿನಿಂದ ಉಳಿದವರೂ ಚಿಯೋನ್‌ ಪರ್ವತ ದಿಂದ ತಪ್ಪಿಸಿಕೊಂಡವರೂ ಹೊರಡುವರು. ಸೈನ್ಯಗಳ ಕರ್ತನ ಆಸಕ್ತಿಯು ಇದನ್ನು ಮಾಡುವದು.

ಯೆಶಾಯ 9:6

ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ಆ ಮಗನು ನಮಗೆ ಕೊಡಲ್ಪಟ್ಟಿದ್ದಾನೆ; ಆಡಳಿತವು ಆತನ ಬಾಹುವಿನ ಮೇಲಿರುವದು; ಅದ್ಭುತ ಸ್ವರೂಪನು, ಆಲೋಚನಾ ಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂದು ಆತನ ಹೆಸರು ಕರೆಯಲ್ಪಡುವದು.

ಯೆಶಾಯ 9:7

ಅದನ್ನು ನೇಮಿಸುವದಕ್ಕೂ ಇಂದಿನಿಂದ ಎಂದೆಂದಿಗೂ ನೀತಿ ನ್ಯಾಯಗಳೊಂದಿಗೆ ಅದನ್ನು ಸ್ಥಾಪಿಸುವದಕ್ಕೂ ದಾವೀದನ ಸಿಂಹಾಸನ ಕ್ಕಾಗಲಿ ಅವನ ರಾಜ್ಯಕ್ಕಾಗಲಿ ಅವನ ಪರಿಪಾಲ ನೆಯ ಮತ್ತು ಶಾಂತಿಯ ಅಭಿವೃದ್ಧಿಗಾಗಲಿ ಅಂತ್ಯವೇ ಇಲ್ಲ; ಸೈನ್ಯಗಳ ಕರ್ತನ ಆಸಕ್ತಿಯು ಇದನ್ನು ನೆರವೇರಿ ಸುವದು.

ಯೆಶಾಯ 37:20

ಹೀಗಿರುವದರಿಂದ ಓ ಕರ್ತನಾದ ನಮ್ಮ ದೇವರೇ, ನೀನೇ, ನೀನೊಬ್ಬನೇ ಕರ್ತನೆಂದು ಭೂಮಿಯ ಎಲ್ಲಾ ರಾಜ್ಯಗಳು ತಿಳಿದುಕೊಳ್ಳುವಂತೆ ಅವನ ಕೈಯಿಂದ ನಮ್ಮನ್ನು ರಕ್ಷಿಸು ಎಂದು ಹಿಜ್ಕೀಯನು ಕರ್ತನಿಗೆ ಪ್ರಾರ್ಥಿಸಿದನು.

ಯೆಶಾಯ 59:17

ಅವನು ನೀತಿಯನ್ನು ಕವಚದ ಹಾಗೆ ಧರಿಸಿಕೊಂಡು, ರಕ್ಷಣೆಯ ಶಿರಸ್ತ್ರಾಣವನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡನು; ಪ್ರತೀಕಾರದ ವಸ್ತ್ರ ಗಳನ್ನು ಹೊದಿಕೆಯಾಗಿ ಹೊದ್ದುಕೊಂಡು ಆಸಕ್ತಿಯನ್ನು ಮೇಲಂಗಿಯಾಗಿ ತೊಟ್ಟುಕೊಂಡನು.

ಯೋವೇಲ 2:18

ಆಗ ಕರ್ತನು ತನ್ನ ದೇಶಕ್ಕೋಸ್ಕರ ರೋಷ ಗೊಂಡು ತನ್ನ ಜನರನ್ನು ಕನಿಕರಿಸುವನು.

ಜೆಕರ್ಯ 1:14

ನನ್ನ ಸಂಗಡ ಮಾತ ನಾಡಿದ ದೂತನು ನನಗೆ ಹೇಳಿದ್ದೇನಂದರೆ--ಕೂಗಿ ಹೇಳು; ಏನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳು ತ್ತಾನೆ--ನಾನು ಯೆರೂಸಲೇಮಿಗಾಗಿಯೂ ಚೀಯೋನಿ ಗಾಗಿಯೂ ಬಹುರೋಷವುಳ್ಳವನಾಗಿದ್ದೇನೆ.

Interlinear

Choose Theme