ಇಗೋ, ಅಶ್ಶೂರದ ಅರಸರು ಎಲ್ಲಾ ದೇಶಗಳನ್ನು ಪೂರ್ಣವಾಗಿ ನಾಶ ಮಾಡಿದರೆಂದು ನೀನು ಕೇಳಿದಿಯಲ್ಲಾ; ಹೀಗಿದ್ದ ಮೇಲೆ ನೀನು ಬಿಡುಗಡೆಯಾಗುವಿಯೋ?
Cross references
ಆದರೆ ಅಶ್ಶೂರಿನ ಅರಸನು ಹೋಶೇಯನಲ್ಲಿ ಒಳಸಂಚನ್ನು ಕಂಡುಹಿಡಿದನು. ಏನಂದರೆ, ಹೋಶೇಯನು ಅಶ್ಶೂರಿನ ಅರಸನಿಗೆ ಪ್ರತಿ ವರುಷಕ್ಕೂ ಕೊಡುವ ಕಪ್ಪವನ್ನು ಕೊಡದೆ ಐಗುಪ್ತದ ಅರಸನಾದ ಸೋ ಎಂಬವನ ಬಳಿಗೆ ಸೇವ ಕರನ್ನು ಕಳುಹಿಸಿದ್ದನು. ಆದದರಿಂದ ಅಶ್ಶೂರಿನ ಅರ ಸನು ಅವನನ್ನು ಕಟ್ಟಿ ಸೆರೆಮನೆಯಲ್ಲಿ ಬಂಧಿಸಿದನು.
ಜನಾಂಗಗಳ ದೇವರುಗಳಲ್ಲಿ ಯಾವ ನಾದರೂ ತನ್ನ ದೇಶವನ್ನು ಅಶ್ಶೂರಿನ ಅರಸನ ಕೈಗೆ ತಪ್ಪಿಸಿಬಿಟ್ಟದ್ದು ಉಂಟೋ?
ಅದರ ಅಭಿಪ್ರಾಯವೋ ಹಾಗಲ್ಲ; ಇಲ್ಲವೇ ಅದರ ಹೃದಯವು ಈ ಪ್ರಕಾರ ಆಲೋಚಿಸುವದಿಲ್ಲ; ಜನಾಂಗಗಳನ್ನು ಕಡಿದು ಬಿಡುವದು ಕೊಂಚವಾಗಿ ಅಲ್ಲ. ಆದರೆ ನಾಶಮಾಡುವದು ಅವನ ಹೃದಯದಲ್ಲಿ ಇದೆ.
ಲೋಕವನ್ನು ಕಾಡ ನ್ನಾಗಿ ಮಾಡಿ ಸೆರೆಹಿಡಿದವರನ್ನು ಮನೆಗೆ ಬಿಡದೆ ಇದ್ದ ವನು ಈ ಮನುಷ್ಯನೋ ಎಂದು ಅಂದುಕೊಳ್ಳುವರು.
ಕರ್ತನು ನಮ್ಮನ್ನು ತಪ್ಪಿಸುವನು ಎಂದು ಹೇಳಿ ಹಿಜ್ಕೀಯನು ನಿಮ್ಮನ್ನು ಪ್ರೇರೇಪಿಸದಂತೆ ಎಚ್ಚರಿಕೆ ಯಾಗಿರ್ರಿ. ಯಾವ ಜನಾಂಗದ ದೇವರುಗಳಾದರೂ ತನ್ನ ದೇಶಗಳನ್ನು ಅಶ್ಶೂರದ ಅರಸನ ಕೈಯಿಂದ ಬಿಡಿಸಿದವೋ?
ಕರ್ತನೇ, ಅಶ್ಶೂರದ ಅರಸರು ಸಕಲ ಜನಾಂಗ ಗಳನ್ನೂ ದೇಶಗಳನ್ನೂ ಹಾಳುಮಾಡಿ, ಅವರ ದೇವತೆ ಗಳನ್ನು ಸಹ ಬೆಂಕಿಯಲ್ಲಿ ಹಾಕಿದ್ದು ನಿಜ.
ಆದ ದರಿಂದ ಅದರ ಎತ್ತರವು ಬಯಲಿನ ಎಲ್ಲಾ ಮರ ಗಳಿಗಿಂತ ಎತ್ತರವಾಗಿತ್ತು; ಅದು ಹಬ್ಬಿದ್ದದರಿಂದ ಮತ್ತು ಹೆಚ್ಚು ನೀರಿನ ದೆಸೆಯಿಂದ ಅದರ ಕೊಂಬೆಗಳು ಅಧಿಕವಾದವು; ಅದರ ರೆಂಬೆಗಳು ಉದ್ದವಾದವು.
ನಿನ್ನ ಗಾಯವು ಗುಣಹೊಂದದು; ನಿನ್ನ ಗಾಯ ಕಠಿಣ ವಾದದ್ದು; ನಿನ್ನ ಸುದ್ದಿಯನ್ನು ಕೇಳುವವರೆಲ್ಲರು ನಿನಗೆ ಚಪ್ಪಾಳೆ ಹೊಡೆಯುವರು; ನಿನ್ನ ಕೆಟ್ಟತನವು ನಿತ್ಯವಾಗಿ ಯಾರ ಮೇಲೆ ಹಾದುಹೋಗದೆ ಇತ್ತು?