Home Bibles ಯೆಶಾಯ 37:1 · ಕನ್ನಡ ಬೈಬಲ್
ಯೆಶಾಯ 37:1 · ಕನ್ನಡ ಬೈಬಲ್

ಇದಾದ ಮೇಲೆ ಅರಸನಾದ ಹಿಜ್ಕೀಯನು ಅದನ್ನು ಕೇಳಿದಾಗ ಅವನು ತನ್ನ ಬಟ್ಟೆಗ ಳನ್ನು ಹರಿದುಕೊಂಡು ಗೋಣೀತಟ್ಟಿನಿಂದ ಮುಚ್ಚಿ ಕೊಂಡು ಕರ್ತನ ಆಲಯಕ್ಕೆ ಹೋದನು.

Cross references

2 ಅರಸುಗಳು 19:1

ಅರಸನಾದ ಹಿಜ್ಕೀಯನು ಅದನ್ನು ಕೇಳಿದಾಗ ತನ್ನ ವಸ್ತ್ರಗಳನ್ನು ಹರಿದುಕೊಂಡು ಗೋಣೀತಟ್ಟಿನಿಂದ ತನ್ನನ್ನು ಮುಚ್ಚಿಕೊಂಡು ಕರ್ತನ ಮನೆಯಲ್ಲಿ ಪ್ರವೇಶಿಸಿದನು.

2 ಅರಸುಗಳು 22:11

ಅರಸನು ನ್ಯಾಯಪ್ರಮಾಣದ ಪುಸ್ತಕದ ಮಾತು ಗಳನ್ನು ಕೇಳಿದಾಗ ತನ್ನ ವಸ್ತ್ರಗಳನ್ನು ಹರಿದುಕೊಂಡನು.

2 ದಿನವೃತ್ತಾಂತ 32:20

ಇದರ ನಿಮಿತ್ತ ಅರಸನಾದ ಹಿಜ್ಕೀಯನೂ ಆಮೋ ಚನ ಮಗನಾಗಿರುವ ಪ್ರವಾದಿಯಾದ ಯೆಶಾಯನೂ ಪ್ರಾರ್ಥನೆಮಾಡಿ ಪರಲೋಕಕ್ಕೆ ಕೂಗಿದರು.

ಎಜ್ರಾ 9:5

ಆದರೆ ಸಾಯಂಕಾಲದ ಬಲಿಯನ್ನರ್ಪಿಸುವಾಗ ನಾನು ನನ್ನ ಭಾರದಿಂದೆದ್ದು ನನ್ನ ವಸ್ತ್ರವನ್ನೂ ನನ್ನ ನಿಲುವಂಗಿ ಯನ್ನೂ ಹರಿದುಕೊಂಡವನಾಗಿ ನನ್ನ ಮೊಣಕಾಲು ಗಳನ್ನೂರಿ ನನ್ನ ಕೈಗಳನ್ನು ನನ್ನ ದೇವರಾಗಿರುವ ಕರ್ತನ ಮುಂದೆ ಚಾಚಿ ಹೇಳಿದ್ದೇನಂದರೆ--

ಎಸ್ತೇರ್ 4:1

ಆದದ್ದನ್ನೆಲ್ಲಾ ಮೊರ್ದೆಕೈಗೆ ತಿಳಿದಾಗ ಮೊರ್ದೆಕೈ ತನ್ನ ವಸ್ತ್ರಗಳನ್ನು ಹರಕೊಂಡು, ಗೋಣಿಯ ತಟ್ಟನ್ನು ಉಟ್ಟುಕೊಂಡು, ಬೂದಿಯನ್ನು ಹಾಕಿಕೊಂಡು ಪಟ್ಟಣದ ಮಧ್ಯದಲ್ಲಿ ಹೋಗಿ ವ್ಯಥೆ ಯಿಂದ ಗಟ್ಟಿಯಾಗಿ ಕೂಗಿದನು.

ಯೋಬ 1:20

ಆಗ ಯೋಬನು ಎದ್ದು ತನ್ನ ನಿಲುವಂಗಿಯನ್ನು ಹರಿದು ತನ್ನ ತಲೆಬೋಳಿಸಿಕೊಂಡು ನೆಲಕ್ಕೆ ಬಿದ್ದು ಆರಾಧಿಸಿ

ಯೆಶಾಯ 22:12

ಆ ದಿವಸದಲ್ಲಿ ಸೈನ್ಯಗಳ ದೇವರಾದ ಕರ್ತನು --ಅಳಬೇಕೆಂದು, ದುಃಖಿಸಬೇಕೆಂದು, ತಲೆಬೋಳಿಸಿ ಕೊಳ್ಳಬೇಕೆಂದು, ಗೋಣೀತಟ್ಟನ್ನು ಸುತ್ತಿಕೊಳ್ಳಬೇ ಕೆಂದು ಆತನು ಕರೆದನು.

ಯೆಶಾಯ 36:22

ಆಗ ಹಿಲ್ಕೀಯನ ಮಗನೂ ಮನೆಯ ಮೇಲ್ವಿಚಾರಕನೂ ಆಗಿದ್ದ ಎಲ್ಯಾಕೀಮನು ಮತ್ತು ಲೇಖಕನಾದ ಶೆಬ್ನ, ಆಸಾಫನ ಮಗನೂ ಬರೆಯುವವನೂ ಆದ ಯೋವ ಎಂಬವರು ತಮ್ಮ ಬಟ್ಟೆಗಳನ್ನು ಹರಿದು ಕೊಂಡು ಹಿಜ್ಕೀಯನ ಬಳಿಗೆ ಬಂದು ಅವನಿಗೆ ರಬ್ಷಾಕೆಯ ಮಾತುಗಳನ್ನು ತಿಳಿಸಿದರು.

ಯೆಶಾಯ 37:14

ಹಿಜ್ಕೀಯನು ಆ ಸೇವಕರ ಕೈಯಿಂದ ಪತ್ರವನ್ನು ತೆಗೆದುಕೊಂಡು ಅದನ್ನು ಓದಿದನು; ಹಿಜ್ಕೀಯನು ಕರ್ತನ ಆಲಯಕ್ಕೆ ಹೋಗಿ ಅದನ್ನು ಕರ್ತನ ಮುಂದೆ ತೆರೆದಿಟ್ಟು,

ಯೋನ 3:5

ಆಗ ನಿನೆವೆಯ ಮನು ಷ್ಯರು ದೇವರನ್ನು ನಂಬಿ ಉಪವಾಸವನ್ನು ಸಾರಿ ಅವ ರಲ್ಲಿ ದೊಡ್ಡವನು ಮೊದಲುಗೊಂಡು ಚಿಕ್ಕವನ ವರೆಗೂ ಗೋಣೀತಟ್ಟನ್ನು ಉಟ್ಟುಕೊಂಡರು.

ಮತ್ತಾಯ 11:21

ಖೊರಾಜಿನೇ, ನಿನಗೆ ಅಯ್ಯೋ! ಬೆತ್ಸಾಯಿದವೇ, ನಿನಗೆ ಅಯ್ಯೋ! ಯಾಕಂದರೆ ನಿನ್ನೊಳಗೆ ನಡೆದ ಮಹತ್ಕಾರ್ಯಗಳು ತೂರ್‌ ಮತ್ತು ಸೀದೋನ್‌ಗಳಲ್ಲಿ ನಡೆಯುತ್ತಿದ್ದರೆ ಅವುಗಳು ಆಗಲೇ ಗೋಣೀತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕೂತು ಮಾನಸಾಂತರಪಡುತ್ತಿದ್ದವು.

Interlinear

Choose Theme